ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; 2ನೇ ಡೋಸ್‌ ಲಸಿಕೆ ಪಡೆಯಲು 45 ಲಕ್ಷ ಜನರು ಗೈರು!

|
Google Oneindia Kannada News

ಬೆಂಗಳೂರು, ನವೆಂಬರ್ 12; ಕರ್ನಾಟಕದಲ್ಲಿ ಗುರುವಾರದ ತನಕ 6,77,12,118 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಗುರುವಾರ 1,36,608 ಡೋಸ್ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಇದುವರೆಗೂ 45.14 ಲಕ್ಷ ಜನರು ಎರಡನೇ ಡೋಸ್ ಪಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಅಕ್ಟೋಬರ್ 10ರ ತನಕ 41.66 ಲಕ್ಷ ಜನರು 2ನೇ ಡೋಸ್ ಪಡೆಯಲು ಬಂದಿರಲಿಲ್ಲ. ಈಗ ಆ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ

ಜನರು ಮಾತ್ರ ಎರಡನೇ ಡೋಸ್ ಲಸಿಕೆ ಪಡೆಯಲು ಗೈರಾಗಿಲ್ಲ. 77,406 ಆರೋಗ್ಯ ಕಾರ್ಯಕರ್ತರು, 2.62 ಲಕ್ಷ ಮುಂಚೂಣಿ ಕಾರ್ಯಕರ್ತರು ಸಹ 2ನೇ ಡೋಸ್ ಲಸಿಕೆ ಪಡೆದಿಲ್ಲ್‌ ಎಂದು ಅಂಕಿ ಅಂಶಗಳು ಹೇಳುತ್ತವೆ.

 ಕೋವಿಡ್‌ ಪರೀಕ್ಷೆ, ಲಸಿಕೆ ನೀಡಿಕೆಯಲ್ಲಿ ಯುಪಿ ಟಾಪ್‌: ಆದಿತ್ಯನಾಥ್‌ ಕೋವಿಡ್‌ ಪರೀಕ್ಷೆ, ಲಸಿಕೆ ನೀಡಿಕೆಯಲ್ಲಿ ಯುಪಿ ಟಾಪ್‌: ಆದಿತ್ಯನಾಥ್‌

 45.14 Lakh People Due For Second Covid Vaccine Shot At Karnataka

ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ 66.46 ಲಕ್ಷ 2ನೇ ಡೋಸ್ ಲಸಿಕೆ ನೀಡಲಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ 13.25 ಲಕ್ಷ ನೀಡಲಾಗಿದೆ. ಅಕ್ಟೋಬರ್‌ನಲ್ಲಿ ಹಬ್ಬಗಳು ಆರಂಭವಾದ ಬಳಿಕ ಜನರು ಕೋವಿಡ್ ಲಸಿಕೆ ಪಡೆಲು ಆಗಮಿಸಿಲ್ಲ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಕೊರೊನಾ ಲಸಿಕೆ ಝೈಡಸ್-2ಡಿ ಖರೀದಿಗೆ ನಿರ್ಧಾರ: 1 ಕೋಟಿ ಡೋಸ್ ಆರ್ಡರ್ಕೊರೊನಾ ಲಸಿಕೆ ಝೈಡಸ್-2ಡಿ ಖರೀದಿಗೆ ನಿರ್ಧಾರ: 1 ಕೋಟಿ ಡೋಸ್ ಆರ್ಡರ್

ಎಲ್ಲಿ ಹೆಚ್ಚು ಗೈರು?; ಎರಡನೇ ಡೋಸ್ ಲಸಿಕೆ ಪಡೆಯಲು ವಿವಿಧ ಜಿಲ್ಲೆಗಳಲ್ಲಿ ಜನರು ಗೈರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 11.84 ಲಕ್ಷ, ಬೆಳಗಾವಿ 2.54 ಲಕ್ಷ, ಮೈಸೂರು 2.39 ಲಕ್ಷ, ಬೆಂಗಳೂರು ಗ್ರಾಮಾಂತರದಲ್ಲಿ 2.19 ಲಕ್ಷ, ಕಲಬುರಗಿ 1.72 ಲಕ್ಷ ಜನರು 2ನೇ ಡೋಸ್ ಲಸಿಕೆ ಪಡೆದಿಲ್ಲ.

ಆರೋಗ್ಯ ಇಲಾಖೆ ಆಯುಕ್ತ ಡಿ. ರಣದೀಪ್ ಅಕ್ಟೋಬರ್‌ನಲ್ಲಿ ಲಸಿಕೆ ನೀಡುವ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಹಬ್ಬಗಳು ಇದ್ದಿದ್ದರಿಂದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಲಸಿಕೆ ಪಡೆಯು ಜನರ ಸಂಖ್ಯೆ ಕಡಿಮೆಯಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್ ಪಡೆದ ಸಾವಿರಾರು ಜನರು 2ನೇ ಡೋಸ್ ಪಡೆಯಲು ಆಗಮಿಸಿಲ್ಲ. ಎರಡನೇ ಡೋಸ್‌ಗಾಗಿಯೇ ಹಣ ಪಾವತಿ ಮಾಡಿ ಆಸ್ಪತ್ರೆಗಳು ಖರೀದಿ ಮಾಡಿದಿ ಲಸಿಕೆ ಹಾಗೆಯೇ ಉಳಿದಿವೆ. ಕೆಲವು ದಿನಗಳಲ್ಲಿ ಅವುಗಳ ದಿನಾಂಕಗಳು ಪೂರ್ಣಗೊಳ್ಳಲಿದ್ದು, ನಷ್ಟವಾಗಲಿವೆ.

ಸ್ಪರ್ಶ ಆಸ್ಪತ್ರೆ ಬೆಂಗಳೂರಿನ 4 ಮತ್ತು ಹಾಸನದ ಒಂದು ಕಡೆ ಕೋವಿಡ್ ಲಸಿಕೆ ನೀಡುತ್ತಿದೆ. ಆಸ್ಪತ್ರೆಯಲ್ಲಿ 99 ಸಾವಿರ ಡೋಸ್ ಕೋವಿಶೀಲ್ಡ್ ಸಂಗ್ರಹವಿದೆ. ಇವುಗಳ ದಿನಾಂಕಗಳು ಮಾರ್ಚ್ 2022ರಲ್ಲಿ ಪೂರ್ಣಗೊಳ್ಳಲಿವೆ. ಎರಡನೇ ಡೋಸ್ ಪಡೆಯಲು ಜನರು ಬರದಿದ್ದರೆ ಅವುಗಳನ್ನು ವಾಪಸ್ ಪಡೆಯುವಂತೆ ಸೆರೆಂ ಇನ್ಸಿಟ್ಯೂಟ್‌ಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ.

ಸ್ಪರ್ಶ ಆಸ್ಪತ್ರೆಯಲ್ಲಿ ಪ್ರತಿದಿನ 15 ರಿಂದ 20 ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. 15,000 ಡೋಸ್ ಕೋವ್ಯಾಕ್ಸಿನ್ ಸಂಗ್ರಹವಿದೆ. ಇದಕ್ಕಿಂತಲೂ ಹೆಚ್ಚು ಕೋವಿಶೀಲ್ಡ್ ಬಾಕಿ ಉಳಿದಿದೆ. ಜನರು ಲಸಿಕೆ ಪಡೆಯಲು ಆಗಮಿಸದಿದ್ದರೆ ಲಸಿಕೆ ವಾಪಸ್ ಕಳಿಸುವುದು ಮಾತ್ರ ಉಳಿದಿರುವ ಮಾರ್ಗವಾಗಿದೆ.

ಅಪೋಲೋ ಆಸ್ಪತ್ರೆಯಲ್ಲಿ 18,000 ಡೋಸ್ ಕೋವಿಶೀಲ್ಡ್, ನಾರಾಯಣ ಹೆಲ್ತ್‌ನಲ್ಲಿ 35,000 ಕೋವಿಶೀಲ್ಡ್, ಸುಗುಣ ಆಸ್ಪತ್ರೆಯಲ್ಲಿ 1,350 ಡೋಸ್ ಕೋವಿಶೀಲ್ಡ್, ಮಣಿಪಾಲ್ ಆಸ್ಪತ್ರೆಯಲ್ಲಿ 8,448 ಡೋಸ್ ಕೋವಿಶೀಲ್ಡ್ ಸಂಗ್ರವಿದೆ. ಇವುಗಳ ದಿನಾಂಕ ಮಾರ್ಚ್‌ನಲ್ಲಿ ಕೊನೆಯಾಗಲಿದೆ.

Recommended Video

ರಜನಿಕಾಂತ್ ಮಾಡಿದ ಟ್ವೀಟ್ ನೋಡಿ ಅಪ್ಪು ಅಭಿಮಾನಿಗಳು ಕೆಂಡಾಮಂಡಲ | Oneindia Kannada

ಯಾವ ರಾಜ್ಯದಲ್ಲಿ ಎಷ್ಟು ಲಸಿಕೆ ನೀಡಲಾಗಿದೆ?; ನವೆಂಬರ್ 12ರ ಬೆಳಗ್ಗೆ 7 ಗಂಟೆಯ ಮಾಹಿತಿಯಂತೆ ದೇಶದ ವಿವಿಧ ರಾಜ್ಯಗಳಲ್ಲಿ ನೀಡಿರುವ ಕೋವಿಡ್ 2ನೇ ಡೋಸ್ ಲಸಿಕೆ ವಿವರ ಹೀಗಿದೆ.

ಉತ್ತರ ಪ್ರದೇಶದಲ್ಲಿ 3,65,46,099, ಮಹಾರಾಷ್ಟ್ರದಲ್ಲಿ 3,26,92,890, ಗುಜರಾತ್‌ನಲ್ಲಿ 2,83,67,757, ಕರ್ನಾಟಕದಲ್ಲಿ 2,46,29,827, ಮಧ್ಯ ಪ್ರದೇಶದಲ್ಲಿ 2,41,37,189, ಪಶ್ಚಿಮ ಬಂಗಾಳದಲ್ಲಿ 2,37,68,725 ಡೋಸ್ ಲಸಿಕೆ ನೀಡಲಾಗಿದೆ.

English summary
In Karnataka as many as 45.14 lakh people were due for their second Covid vaccine shot. Thousands of vaccine doses being available in private hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X