ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST Meet: 11,000 ಕೋಟಿ ಹಣ ಬಿಡುಗಡೆಗೆ ಕರ್ನಾಟಕದ ಮನವಿ

|
Google Oneindia Kannada News

ಬೆಂಗಳೂರು, ಮೇ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಏಳು ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸರಕು ಸೇವಾ ತೆರಿಗೆ ಮಂಡಳಿಯ 43ನೇ ಸಭೆ ನಡೆಸಲಾಯಿತು.

ಕೊವಿಡ್-19 ಸರಕು ಸೇವೆಗಳು ಮತ್ತು ಪರಿಕರಗಳ ಮೇಲಿನ ತೆರಿಗೆ ಕಡಿತಗೊಳಿಸುವಂತೆ ರಾಜ್ಯ ಸರ್ಕಾರಗಳು ಮನವಿ ಸಲ್ಲಿಸಿದವು. ಕರ್ನಾಟಕದಿಂದ ಜಿಎಸ್ ಟಿ ಮಂಡಳಿ ಪ್ರತಿನಿಧಿಯಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಭೆಯಲ್ಲಿ ಹಾಜರಾಗಿದ್ದರು.

ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ ಸಚಿವ ಬಸವರಾಜ್ ಬೊಮ್ಮಾಯಿ ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ 11 ಸಾವಿರ ಕೋಟಿ ರೂಪಾಯಿ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.

43th GST Meet: Karnataka Govt Request To Release 11,000 Crore Pending Amount From Central

Recommended Video

UT Khader Exclusive Interview with lavanya | ಜನ BJP ಅವರಿಗೆ ಬುದ್ಧಿ ಕಲಿಸುತ್ತಾರೆ! | Oneindia Kannada

ಜಿಎಸ್ ಟಿ ಮಂಡಳಿ ಸದಸ್ಯರ ಮನವಿ:

* ಕೊರೊನಾವೈರಸ್ ಸಂದರ್ಭದಲ್ಲಿ ನೀಡಿರುವ ವಿನಾಯಿತಿ ಮತ್ತು ರಿಯಾಯತಿ ಮುಂದುವರಿಸುವುದು.
* ಈಗಾಗಲೇ ನೀಡಿರುವ ವಿನಾಯತಿಗಳ ಗಡುವು ವಿಸ್ತರಣೆ ಜೊತೆಗೆ ವ್ಯಾಪ್ತಿಯನ್ನು ಹೆಚ್ಚಿಸುವುದು
* ಶಿಫಾರಸ್ಸು ಮಾಡಿರುವ ಉಪಕರಣಗಳ ಜೊತೆಗೆ ಆಮ್ಲಜನಕ ಉಪಕರಣ, ಪಿಪಿಇ ಕಿಟ್ ಮತ್ತು ಬ್ಲ್ಯಾಕ್ ಫಂಗಸ್ ಔಷಧಿಗಳನ್ನು ರಿಯಾಯತಿ ದರಕ್ಕೊಳಪಡಿಸುವುದು.
* ಕೊವಿಡ್-19 ಸಂಬಂಧಿತ ಸರಕು-ಸೇವೆಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದು.

English summary
43th GST Meet: Karnataka Govt Request To Release 11,000 Crore Pending Amount From Central.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X