ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ

By Gururaj
|
Google Oneindia Kannada News

ಬೆಂಗಳೂರು, ಜೂನ್ 14 : ಕರ್ನಾಟಕದ ಆರೋಗ್ಯ ಇಲಾಖೆ ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. 108 ಆಂಬ್ಯುಲೆನ್ಸ್ ಸೇವೆಗೆ ಹೊಸದಾಗಿ 400 ವಾಹನಗಳನ್ನು ಖರೀದಿ ಮಾಡಲಾಗುತ್ತದೆ.

ಹಾವೇರಿಯಲ್ಲಿ ಆಂಬ್ಯುಲೆನ್ಸ್‌ ಸೇವೆ ಒದಗಿಸಲು ರೋಗಿಯ ಬಳಿ ಲಂಚ ಕೇಳಲಾಗಿದೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸುಮೋಟೋ ಪ್ರಕರಣ ದಾಖಲಾಗಿದ್ದು, ನ್ಯಾ.ವಿಶ್ವನಾಥ ಶೆಟ್ಟಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಂಬುಲೆನ್ಸ್ ನಲ್ಲೇ ತ್ರಿವಳಿ ಮಕ್ಕಳಿಗೆ ಜನನ ನೀಡಿದ ಮಹಿಳೆಆಂಬುಲೆನ್ಸ್ ನಲ್ಲೇ ತ್ರಿವಳಿ ಮಕ್ಕಳಿಗೆ ಜನನ ನೀಡಿದ ಮಹಿಳೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಶ್ರೀನಿವಾಸ ಗೌಡ ಅವರು ಲೋಕಾಯುಕ್ತರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. 26 ರಿಂದ 30 ಕಿ.ಮೀ. ವ್ಯಾಪ್ತಿಗೆ ಒಂದು ಅಂಬ್ಯುಲೆನ್ಸ್ ಸೇವೆ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಓಮ್ನಿ ಆಂಬುಲೆನ್ಸ್ ನಿಷೇಧರಾಜ್ಯಾದ್ಯಂತ ಓಮ್ನಿ ಆಂಬುಲೆನ್ಸ್ ನಿಷೇಧ

400 new ambulances will be added to 108 service

ಪ್ರಸ್ತುತ 780 ಆಂಬ್ಯುಲೆನ್ಸ್‌ಗಳಿವೆ. 400 ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ. ಮೂರು ತಿಂಗಳಿನಲ್ಲಿ ಅವುಗಳು ರಸ್ತೆಗೆ ಇಳಿಯಲಿವೆ ಎಂದು ಹೇಳಿದ್ದಾರೆ. 108 ಆಂಬ್ಯುಲೆನ್ಸ್‌ಗಳ ಜೊತೆ 'ಮಗು-ನಗು' ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

English summary
Karnataka Health and Family Welfare Department will add 400 new 108 ambulance services soon to the fleet of the existing 780.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X