ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಕೆ ಬಳಿಕವೂ ದೀರ್ಘಕಾಲ ಉಳಿಯುವ ಡೆಂಗ್ಯೂವಿನ 4 ಅಡ್ಡಪರಿಣಾಮಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 27: ಪ್ರತಿ ವರ್ಷವೂ ಮುಂಗಾರು ಆರಂಭವಾಗುತ್ತಿದ್ದಂತೆಯೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದವು.

ಆದರೆ ಈ ಬಾರಿ ಕೊರೊನಾ ಸೋಂಕಿನಿಂದಾಗಿ ಹೆಚ್ಚು ಪ್ರಕರಣಗಳು ಮುನ್ನೆಲೆಗೆ ಬರುತ್ತಿಲ್ಲವೋ ಅಥವಾ ಎಲ್ಲರೂ ಮನೆಯಲ್ಲೇ ಇರುವ ಕಾರಣ ರೋಗ ಕಡಿಮೆಯಾಗಿದೆಯೋ ಎಂಬುದು ತಿಳಿದಿಲ್ಲ.

ಈ ಸಮಯದಲ್ಲಿ ಅವರ ದೇಹದ ಉಷ್ಣತೆ 103 ರಿಂದ105 ಡಿಗ್ರಿವರೆಗೆ ಏರುತ್ತದೆ. ಇದರ ಜೊತೆಗೆ ತೀವ್ರ ತಲೆ ನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತವೆ. ಆದರೆ ಇದು ಅಪಾಯಕಾರಿ ಹಂತವಲ್ಲ. ಈ ತೀವ್ರ ಜ್ವರ 2 ರಿಂದ 3 ದಿನದೊಳಗೆ ಕಡಿಮೆಯಾಗುತ್ತದೆ. ಈ ಜ್ವರ ಕಡಿಮೆಯಾಗುವ ಅವಧಿ ಅತ್ಯಂತ ನಿರ್ಣಾಯಕವಾದದ್ದು.

ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ

ಈ ಸಮಯದಲ್ಲಿ ದೇಹದಲ್ಲಿ ಕೆಂಪು ಕಲೆಗಳು ಮೂಡುತ್ತವೆ. ಪ್ಲೇಟ್ಲೇಟ್ ಗಳ ಸಂಖ್ಯೆ ಕುಸಿಯುತ್ತದೆ ಜೊತೆಗೆ ರಕ್ತದೊತ್ತಡವೂ ಕಡಿಮೆಯಾಗುತ್ತದೆ. ಇದು ಡೆಂಗ್ಯೂ ಜ್ವರದ ಅತ್ಯಂತ ಅಪಾಯಕಾರಿ ಹಂತ.

ಈ ಜ್ವರ ಹೆಚ್ಚಾಗುವ ಸಮಯಕ್ಕಿಂತ ಅದು ಕಡಿಮೆಯಾಗುತ್ತಿರುವ ಸಮಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅತಿ ಅಗತ್ಯ. ಈ ಸಮಯದಲ್ಲಿ ನೀವು ವೈದ್ಯರು ಸೂಚನೆ ಕೊಟ್ಟರೆ ಆಸ್ಪತ್ರೆಯಲ್ಲಿಯೇ ಉಳಿದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಒತ್ತಡ ಮತ್ತು ಆತಂಕ

ಒತ್ತಡ ಮತ್ತು ಆತಂಕ

ರೋಗದಿಂದ ಗುಣಮುಖರಾದ ಬಳಿಕ ಒತ್ತಡ ಮತ್ತು ಆತಂಕದ ಮನಸ್ಥಿತಿ ಹಲವು ದಿನಗಳ ಕಾಲ ಮುಂದುವರೆಯುತ್ತದೆ. ರೋಗಿಗಳು ಮಾನಸಿಕ ಖಿನ್ನತೆಗೂ ಒಳಗಾಗುವ ಸಾಧ್ಯತೆ ಇರುತ್ತದೆ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ಡೆಂಗ್ಯೂವಿನಿಂದ ಗುಣಮುಖರಾದ ಬಳಿಕ ಕೂದಲು ಹೆಚ್ಚು ಉದುರಲು ಆರಂಭವಾಗುತ್ತದೆ. ಒಂದರಿಂದ ಎರಡು ತಿಂಗಳ ಕಾಲ ಇದು ಇರುತ್ತದೆ.ಡೆಂಗ್ಯೂ ಬಂದರೆ ತೀವ್ರವಾದ ತಲೆನೋವುಃ ಡೆಂಗ್ಯೂ ಲಕ್ಷಣಗಳಲ್ಲಿ ಮುಖ್ಯವಾದದ್ದು ತಲೆನೋವು. ಡೆಂಗ್ಯೂ ಸೋಕಿದವರಿಗೆ ವಿಪರೀತ ತಲೆನೋವು ಇರುತ್ತದೆ. ತಲೆ ಭಾರವಾಗಿ ಇರುತ್ತದೆ. ಜ್ವರಃ ಡೆಂಗ್ಯೂ ಸೋಂಕು ಇರುವರಿಗೆ ಜ್ವರ ಬರುತ್ತಾ, ಬಿಡುತ್ತಾ ಇರುತ್ತದೆ. ಒಂದೊಂದು ಸಲ ಜ್ವರದ ತೀವ್ರತೆ 104 ಡಿಗ್ರಿ ಫಾರನ್ ಹೀಟ್ ವರೆಗೂ ಹೆಚ್ಚಾಗಬಹುದು. ಈ ರೀತಿ ನಿತ್ಯ ಆಗುತ್ತಿದ್ದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಆ ಜ್ವರ ಡೆಂಗ್ಯೂಗೆ ದಾರಿಯಾಗಬಹುದು. ವಾಂತಿ ಮತ್ತು ಭೇದಿಃ ಡೆಂಗ್ಯೂ ಸೋಕಿದವರಿಗೆ ಬಾಯಿ ಒಣಗುತ್ತಿರುತ್ತದೆ. ಮಾತುಮಾತಿಗೂ ದಾಹವಾಗುತ್ತಿರುತ್ತದೆ. ಅದೇ ರೀತಿ ಹೊಟ್ಟೆಯಲ್ಲಿ ಸ್ವಲ್ಪ ನೋವು, ವಾಂತಿ ಬರುವಂತೆ, ವಾಂತಿ ಆಗುತ್ತಿರುವಂತೆ, ಭೇದಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಪೋಷಕಾಂಶಗಳ ಕೊರತೆ

ಪೋಷಕಾಂಶಗಳ ಕೊರತೆ

ಡೆಂಗ್ಯೂ ವಿಟಮಿನ್ ಡಿ , ವಿಟಮಿನ್ ಇ ಕೊರತೆ ಉಂಟಾಗುತ್ತದೆ. ಹೀಗಾಗಿ ವಿಟಮಿನ್ ಯುಕ್ತ ಆಹಾರವನ್ನು ಸೇವಿಸಬೇಕು. ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ ಗಳಿಂದ ಹರಡುತ್ತದೆ.

ಸಂಧಿ ನೋವು

ಸಂಧಿ ನೋವು

ಡೆಂಗ್ಯೂ ರೋಗಿಗಳಿಗೆ ಸಂಧಿವಾತ ಹೆಚ್ಚು ದಿನಗಳ ಕಾಲ ಉಳಿದಿರುತ್ತದೆ. ಹೀಗಾಗಿ ಗುಣಮುಖರಾದ ಬಳಿಕ ಸುತ್ತಾಡುವುದನ್ನು ನಿಲ್ಲಿಸಿ, ವಿಟಮಿನ್ , ಮಿನರಲ್ ಕೊರತೆಯಾದಾಗ ದೇಹದ ಪರಿಸ್ಥತಿ ಮತ್ತಷ್ಟು ಕ್ಷೀಣಿಸುತ್ತದೆ. ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ. -ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು -ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

English summary
Monsoon and mosquito-borne diseases are synonymous to each other. As the rainy season approaches, you will find a sudden rise in the number of mosquitoes in your vicinity. The hot and humid climate is perfect for breeding of blood-sucking insects, who carry deadly diseases like dengue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X