• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ 4 ಲಕ್ಷ ಜನರು ಕೋವಿಡ್‌ನಿಂದ ಗುಣಮುಖ

|

ಬೆಂಗಳೂರು, ಸೆಪ್ಟೆಂಬರ್ 20 : ಶನಿವಾರ ಕರ್ನಾಟಕದಲ್ಲಿ 10815 ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 404841ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಶನಿವಾರ ರಾಜ್ಯದಲ್ಲಿ 8,364 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇದರಿಂದಾಗಿ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 51,13,46.

ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆಗೆ ಕೋವಿಡ್ ಸೋಂಕು

ಕರ್ನಾಟಕದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 98,564. ಇದುವರೆಗೂ ಗುಣಮುಖರಾದವರ ಸಂಖ್ಯೆ 404841. ಇದುವರೆಗೂ ರಾಜ್ಯದಲ್ಲಿ 7922 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಸಂಸದರಲ್ಲಿ ಕೊರೊನಾ ವೈರಸ್: ಸಂಸತ್ ಮುಂಗಾರು ಅಧಿವೇಶನ ಮೊಟಕು?

ಬೆಂಗಳೂರು ನಗರದಲ್ಲಿ 3,733 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,91,438ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 41,434.

52 ಲಕ್ಷ ದಾಟಿದ ಕೊರೊನಾ ಸಂಖ್ಯೆ: ಹೀಗಾದ್ರೆ ಭಾರತದ ಆರ್ಥಿಕ ಪರಿಸ್ಥಿತಿ ಗತಿ ಏನು?

1.55 ಲಕ್ಷ ಮಂದಿ ಚೇತರಿಕೆ

1.55 ಲಕ್ಷ ಮಂದಿ ಚೇತರಿಕೆ

ಕರ್ನಾಟಕದಲ್ಲಿ ಕಳೆದ 19 ದಿನದಲ್ಲಿ 1.55 ಲಕ್ಷ ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರತಿನಿತ್ಯ ಸರಾಸರಿ 8,177 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 404841ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರು 5 ಲಕ್ಷ

ಒಟ್ಟು ಸೋಂಕಿತರು 5 ಲಕ್ಷ

ಕರ್ನಾಟಕದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 51,13,46ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿಯ ತನಕ 1.76 ಲಕ್ಷ ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಬೆಂಗಳೂರು ನಗರ.

ಒಟ್ಟು ಮೃತಪಟ್ಟವರು

ಒಟ್ಟು ಮೃತಪಟ್ಟವರು

ಶನಿವಾರ ಕರ್ನಾಟಕದಲ್ಲಿ 114 ಜನರು ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇದರಿಂದಾಗಿ ಒಟ್ಟು ಮೃತಪಟ್ಟವರ ಸಂಖ್ಯೆ 7922ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ 33 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಒಟ್ಟು ಮೃತಪಟ್ಟವರು 2625.

  Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
  ಸಕ್ರಿಯ ಪ್ರಕರಣಗಳ ಸಂಖ್ಯೆ

  ಸಕ್ರಿಯ ಪ್ರಕರಣಗಳ ಸಂಖ್ಯೆ

  ಕರ್ನಾಟಕದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 98,564. ಬೆಂಗಳೂರು ನಗರದಲ್ಲಿ 41,434 ಸೋಂಕಿತರು ಇದ್ದಾರೆ. ಬಳ್ಳಾರಿಯಲ್ಲಿ 41434, ಬೆಳಗಾವಿಯಲ್ಲಿ 2295, ದಕ್ಷಿಣ ಕನ್ನಡದಲ್ಲಿ 4528 ಮತ್ತು ಹಾಸನದಲ್ಲಿ ಸೋಂಕಿತರು 3047.

  English summary
  On September 20, 2020 in Karnataka 10815 people recovered from COVID 19. Total number of recovered rise to 404841. Total cases in the state 51,13,46.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X