ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್: ಕರ್ನಾಟಕದ 3ನೇ ಶಂಕಿತನ ವರದಿ ನೆಗಟಿವ್

|
Google Oneindia Kannada News

ಬೆಂಗಳೂರು ಆಗಸ್ಟ 04: ಕರ್ನಾಟಕದಲ್ಲಿ ಮೂರನೇ ಮಂಕಿಪಾಕ್ಸ್ ಶಂಕಿತ ವ್ಯಕ್ತಿಯ ವರದಿ ನೆಗಟಿವ್ ಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ಮೂರು ಮಂಕಿಪಾಕ್ಸ್ ಶಂಕಿತ ಪ್ರಕರಣಗಳ ವರದಿ ನೆಗಟಿವ್ ಆಗಿದ್ದು, ರಾಜ್ಯಕ್ಕೆ ಬಂದೊದಗಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ.

ಬೆಲ್ಜಿಯಂನಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡುನಲ್ಲಿರುವ ಟಿಬೆಟಿಯನ್ ಕ್ಯಾಂಪ್‌ಗೆ ಬಂದಿದ್ದ 9 ವರ್ಷದ ಟಿಬೆಟಿಯನ್ ಬಾಲಕನಿಗೆ ಮಂಕಿಪಾಕ್ಸ್ ವರದಿ ನೆಗಟಿವ್ ಬಂದಿದೆ. ಈ ಬಾಲಕನ ಚರ್ಮದಲ್ಲಿ ದದ್ದು ಸೇರಿದಂತೆ ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಆತನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

Breaking: ನವದೆಹಲಿಯಲ್ಲಿ 4ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ Breaking: ನವದೆಹಲಿಯಲ್ಲಿ 4ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ನಂತರ ಸೋಮವಾರ ಆತನ ರಕ್ತ ಮಾದರಿ ಪಡೆದ ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್)ವು ಸೂಕ್ತ ರೀತಿಯಲ್ಲಿ ತಪಾಸಣೆ ನಡೆಸಿತು.

3rd monkeypox suspected case report is negative At Karnataka

ವಿವಿಧೆಡೆ ಸುತ್ತಾಡಿ ರಾಜ್ಯಕ್ಕೆ ಬಂದಿದ್ದ ಬಾಲಕ; ಈ ಬಾಲಕ ಮತ್ತು ಆತನ ಪೋಷಕರು ಜುಲೈ 1ರಂದು ಟಿಬೆಟಿಯನ್ ಪಾದ್ರಿಯೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಮೊದಲು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಅಲ್ಲಿಂದ ಹಿಮಾಚಲ ಪ್ರದೇಶದ ಟಿಬೆಟಿಯನ್ ಶಿಬಿರಕ್ಕೆ ಭೇಟಿ ಕೊಟ್ಟಿದ್ದರು.

ಬಳಿಕ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದ್ದರು. ಇದಾದ ನಂತರ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡುನಲ್ಲಿನ ಟಿಬೆಟಿಯನ್ ಶಿಬಿರಕ್ಕೆ ಬಂದಾಗ ಬಾಲಕನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆಗಾಗಿ ಆತನ ರಕ್ತದ ಮಾದರಿ ಪಡೆಯಲಾಗಿತ್ತು.

ಸದ್ಯ ಬಾಲಕನ ಮಂಕಿಪಾಕ್ಸ್ ವರದಿ ನೆಗಟಿವ್ ಬಂದಿದ್ದು, ಆತನಲ್ಲಿ ಕಂಡು ಬಂದಿದ್ದ ಲಕ್ಷಣಗಳು ವೈರಲ್ ಸೋಂಕಿನ ಲಕ್ಷಣವಾಗಿರಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

3rd monkeypox suspected case report is negative At Karnataka

ಅಲ್ಲದೇ ಇದಕ್ಕು ಮುನ್ನ ರಾಜ್ಯದಲ್ಲಿ ಒಟ್ಟು ಮೂರು ಶಂಕಿತ ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗಿದ್ದವು. ಆ ಪೈಕಿ ಇಬ್ಬರ ವರದಿ ನೆಗಟಿವ್ ಬಂದಿತ್ತು. ಈ ಟಿಬೇಟಿಯನ್ ಬಾಲಕನ ವರದಿಗಾಗಿ ಕರ್ನಾಟಕವೇ ಕುತೂಹಲದಿಂದ ಕಾದಿತ್ತು.

English summary
Karnataka's 3rd monkeypox suspected report is negative said health department source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X