ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಎಚ್‌1ಎನ್‌1ನಿಂದ 39 ಮಂದಿ ಸಾವು: ಸೋಂಕಿತರ ಸಂಖ್ಯೆ 1428

|
Google Oneindia Kannada News

ಬೆಂಗಳೂರು, ಏ.25: ರಾಜ್ಯದಲ್ಲಿ ಮಂಗನ ಕಾಯಿಲೆ ಬಳಿಕ ಮತ್ತೆ ಎಚ್‌1ಎನ್‌1 ರೋಗ ಭೀತಿ ತಲೆದೂಗಿದೆ. ಈಗಾಗಲೇ ಜನವರಿಯಿಂದ ಇಲ್ಲಿಯವರೆಗೆ 39ಮಂದಿಯನ್ನು ಬಲಿತೆಗೆದುಕೊಂಡಿದೆ.

ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಹಂದಿ ಜ್ವರ ಸೋಮಕಿತರ ಸಂಖ್ಯೆ 1,428ಕ್ಕೆ ಏರಿಕೆಯಾಗಿದೆ. ಅಲ್ಲದೆ ಜನವರಿಯಿಂದ ಇಲ್ಲಿವರೆಗೆ ಒಟ್ಟು 39 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ! ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ಈ ಪೈಕಿ ಏ.9ರಿಂದ ಇಲ್ಲಿಯವರೆಗೆ 154 ಪ್ರಕರಣ ದೃಢಪಟ್ಟಿದೆ. 25 ಮಂದಿ ಸೋಂಕಿತರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಶಂಕಿತ 5,473 ಮಂದಿಯ ಸ್ವಾಬ್ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 1428 ಮಂದಿಗೆ ಈ ರೋಗ ಇರುವುದು ತಿಳಿದುಬಂದಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಎಚ್‌1ಎನ್‌1

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಎಚ್‌1ಎನ್‌1

ಒಟ್ಟು ಪ್ರಕರಣಗಳ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 227 ಪ್ರಕರಣ ದೃಢಪಟ್ಟಿದ್ದು ಜನವರಿಯಿಂದ ಈವರೆಗೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ. ಆದರೆ, ಕಳೆದ ಒಂದು ತಿಂಗಳಿಂದ ಯಾವುದೇ ಸಾವು ವರದಿಯಾಗಿಲ್ಲ.ಉಳಿದಂತೆ
ಶಿವಮೊಗ್ಗ-136(6) ಸಾವು
ಮೈಸೂರು-120(4 ಸಾವು)
ದಾವಣಗೆರೆ-67(5ಸಾವು)
ಉತ್ತರಕನ್ನಡ-24(5ಸಾವು)
ಚಿತ್ರದುರ್ಗ-45(4ಸಾವು)
ಹಾಸನ-46(3ಸಾವು)

ಲಸಿಕೆ ಎಲ್ಲರಿಗಿಲ್ಲ

ಲಸಿಕೆ ಎಲ್ಲರಿಗಿಲ್ಲ

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ನಾರಾಯಣ ಹೆಲ್ತ್ ಏರ್‌ಫೋರ್ಸ್‌ ಕಮಾಂಡ್ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆಯ ಪ್ರಯೋಗಾಲಯಗಳನ್ನು ತೆರೆಯಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಲಸಿಕೆ ಇದೆಯಾದರೂ ಅದನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ, ಸೋಂಕಿತ ರೋಗಿಗಳನ್ನು ಉಪಚರಿಸುವ ಶುಶ್ರೂಶಕರಿಗೆ ಮಾತ್ರವೇ ಲಸಿಕೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

ಹಂದಿ ಜ್ವರ ಬಂದರೆ ಹೀಗೆ ಮಾಡಿ

ಹಂದಿ ಜ್ವರ ಬಂದರೆ ಹೀಗೆ ಮಾಡಿ

ಎಚ್‌1 ಎನ್‌1 ಸೋಂಕು ಉಂಟಾದ ರೋಗಿಯಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜತೆಗೆ ಉಸಿರಾಟ ದ ತೊಂದರೆಯಾಗುತ್ತದ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು.

ಮುಂಜಾಗ್ರತೆಯಾಗಿ ಸೋಂಕು ಪೀಡಿತರಿಂದ ದೂರವಿರಬೇಕು. ಶಂಕಿತರೋಗಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಬೇಕು. ವಯಕ್ತಿಕ ಸ್ವಚ್ಛತೆಗೆ ಹೆಚ್ಚು ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಸಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ಮಾಡಬಾರದು.

ರೋಗ ಲಕ್ಷಣವೇನು?

ರೋಗ ಲಕ್ಷಣವೇನು?

ಹಂದಿಜ್ವರ ಸೋಂಕಿತರಲ್ಲಿ ಶ್ವಾಸಕೋಶ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜೊತೆಗೆ ನೆಗಡಿ, ಕೆಮ್ಮು, ತೀವ್ರವಾದ ಮೈ-ಕೈ ನೋವು ಕಾಣಿಸಿಕೊಳ್ಳುತ್ತಿದೆ. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಸಬೇಕಾಗುತ್ತದೆ.

ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್ ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್

English summary
There are 39 people died due to H1N1 in Karnataka from January. Health Department is need to take strong action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X