ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ವಿತರಣಾ ಅಭಿಯಾನ: ಮೊದಲ ಸುತ್ತಿನಲ್ಲಿ 370 ಟಿಬೆಟಿಯನ್ನರಿಗೆ ಲಸಿಕೆ

|
Google Oneindia Kannada News

ಬೆಂಗಳೂರು,ಜನವರಿ 17: ಕೊವಿಡ್ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ 370 ಡಿಬೆಟಿಯನ್ನರಿಗೆ ಮೊದಲ ಸುತ್ತಿನಲ್ಲಿ ಕೊವಿಡ್ ಲಸಿಕೆ ನೀಡುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಅತೀ ಹೆಚ್ಚು ಟಿಬೆಟಿಯನ್ ಆರೋಗ್ಯ ಕಾರ್ಯಕರ್ತರಿಗೆ ಬಹು ನಿರೀಕ್ಷಿತ ಲಸಿಕೆ ನೀಡಲಾಗುತ್ತಿದೆ. ರಾಜ್ಯದ ಐದು ಪ್ರಮುಖ ಪ್ರದೇಶಗಳಲ್ಲಿ ಟಿಬೆಟಿಯನ್ನರು ವಾಸಿಸುತ್ತಿದ್ದು. ಬೈಲಕುಪ್ಪೆಯಲ್ಲಿ 2, ಹುಣಸೂರಿನಲ್ಲಿ 1, ಮೈಸೂರು ಜಿಲ್ಲೆಯಲ್ಲಿ 2, ಉತ್ತರ ಕನ್ನಡ ಜಿಲ್ಲೆಯ ಮುಂಡ್‌ಗೋಡ್‌ನಲ್ಲಿ ಒಂದು ಮತ್ತು ಕೊಳ್ಳೆಗಾಲ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಒಂದು ಕ್ಯಾಂಪ್ ಗಳಿವೆ ಎಂದು ಹೇಳಿದರು.

ಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆ

ಬಿಬಿಎಂಪಿ ಮೂಲಗಳ ಪ್ರಕಾರ ಮೊದಲನೇ ಕಂತಿನಲ್ಲಿ ಲಸಿಕೆ ನೀಡಲು 1.79 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ರಾಜ್ಯದ ವಿವಿಧೆಡೆ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ 370 ಟಿಬೆಟಿಯನ್ನರಿಗೆ ಲಸಿಕೆ ನೀಡುವ ಸಾಧ್ಯತೆ ಇದೆ.

370 Tibetans Likely To Get Covid Vaccine Shots In First Round

ಈ ಕುರಿತಂತೆ ಮಾತನಾಡಿರುವ ಸೆಂಟ್ರಲ್ ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (ಸಿಟಿಎ) ಯ ದಕ್ಷಿಣ ವಲಯದ ಮುಖ್ಯ ಪ್ರತಿನಿಧಿ ಚೋಫೆಲ್ ತುಪ್ಟನ್ ಅವರು ಮಾತನಾಡಿ, ನಾವು 370 ಮುಂಚೂಣಿ ಕೊವಿಡ್ ಆರೋಗ್ಯ ಕಾರ್ಯಕರ್ತರ ಹೆಸರನ್ನು ಕಳುಹಿಸಿದ್ದೇವೆ,.

ಇದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ತಮ್ಮ ತಾಲ್ಲೂಕುಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಕೆಲವು ಸಮುದಾಯದ ಮುಖಂಡರು ಸಹ ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಲಸಿಕೆ ಪಡೆಯಲಿರುವ ಟೆಬೆಟಿಯನ್ ಆರೋಗ್ಯ ಕಾರ್ಯಕರ್ತರ ಹೆಸರನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

English summary
Among the 7,95,500 frontline healthcare workers, who will receive the ‘Covishield’ vaccine in Karnataka in the first round, the names of 370 Tibetans living in the five settlements in the State may also figure in the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X