ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಹೊಸ ಪ್ರಕರಣ, ಸಾವಿನ ಸಂಖ್ಯೆ ಕೊಂಚ ಇಳಿಕೆ

|
Google Oneindia Kannada News

ಬೆಂಗಳೂರು, ಮೇ 13; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 35,297 ಹೊಸ ಪ್ರಕರಣ ದಾಖಲಾಗಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಯಲ್ಲಿ 34,057 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 344 ಜನರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 2088488ಕ್ಕೆ ಏರಿಕೆಯಾಗಿದೆ.

ಹೆಚ್ಚು ಕೋವಿಡ್ ಪ್ರಕರಣ; ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕ ಹೆಚ್ಚು ಕೋವಿಡ್ ಪ್ರಕರಣ; ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕ

ಪ್ರಸ್ತುತ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 5,93,078. ಇದುವರೆಗೂ ಡಿಸ್ಚಾರ್ಜ್ ಆದವರ ಸಂಖ್ಯೆ 14,74,678 ಮತ್ತು ಮೃತಪಟ್ಟವರು 20712. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 27.64 ಮತ್ತು ಮೃತಪಟ್ಟವರ ಪ್ರಮಾಣ ಶೇ 0.97.

ಸಿಎಂ, ಸಚಿವರ 1 ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ ಸಿಎಂ, ಸಚಿವರ 1 ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ

COVID report

10311 ಆಂಟಿಜೆನ್, 117357 ಆರ್‌ಟಿಪಿಸಿಆರ್ ಸೇರಿದಂತೆ 24 ಗಂಟೆಯಲ್ಲಿ 1,27,668 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಇದುವರೆಗೂ 27521028 ಮಾದರಿಗಳ ಪರೀಕ್ಷೆ ನಡೆದಿದೆ.

ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಣ ಸಲಹೆ ಕೊಟ್ಟ ಸಿದ್ದರಾಮಯ್ಯಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಣ ಸಲಹೆ ಕೊಟ್ಟ ಸಿದ್ದರಾಮಯ್ಯ

ಯಾವ ಜಿಲ್ಲೆ ಎಷ್ಟು ಪ್ರಕರಣ?; ಬೆಂಗಳೂರು ನಗರದಲ್ಲಿ 15,191 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1014996. ಸಕ್ರಿಯ ಪ್ರಕರಣಗಳು 359565.

ಬಳ್ಳಾರಿ 1865. ಬೆಂಗಳೂರು ಗ್ರಾಮಾಂತರ 1079. ಮಂಡ್ಯ1153. ಮೈಸೂರು 1260. ತುಮಕೂರು 1798 ಹೊಸ ಪ್ರಕರಣಗಳು ದಾಖಲಾಗಿವೆ.

ಬಾಗಲಕೋಟೆ 520. ಬೆಳಗಾವಿ 713. ಚಾಮರಾಜನಗರ 842. ದಕ್ಷಿಣ ಕನ್ನಡ 812. ಧಾರವಾಡ 737. ಹಾಸನ 792, ಹಾವೇರಿ 160. ಉಡುಪಿ 891. ಉತ್ತರ ಕನ್ನಡ 791. ಯಾದಗಿರಿ 675 ಪ್ರಕರಣಗಳು ವರದಿಯಾಗಿವೆ.

Recommended Video

Covidನಿಂದ ಗುಣಮುಖರಾದವರು ತಕ್ಷಣ ಲಸಿಕೆ ತೆಗೆದುಕೊಳ್ಳಬೇಡಿ | Oneindia Kannada

ವಿಜಯಪುರ 331. ಶಿವಮೊಗ್ಗ 880. ರಾಮನಗರ 518. ರಾಯಚೂರು 170. ಕೊಪ್ಪಳ 437. ಕೋಲಾರ 488. ಗದಗ 430. ದಾವಣಗೆರೆ 494 ಹೊಸ ಪ್ರಕರಣ ವರದಿಯಾಗಿದೆ.

English summary
344 deaths, 35,297 new Covid cases in 24 hours in Karnataka. Slight drop in new cases in state and Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X