ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ನಾಲ್ಕ ವರ್ಷದಲ್ಲಿ 326 ಕಸ್ಟೋಡಿಯಲ್ ಡೆತ್!

|
Google Oneindia Kannada News

ಬೆಂಗಳೂರು, ಸೆ. 14: ರಾಜ್ಯದಲ್ಲಿ ಕಳೆದ ಜುಲೈ ಕೊನೆ ವಾರದಿಂದ ಸೆಪ್ಟೆಂಬರ್ ಮೊದಲ ವಾರದ ಅಂತರದಲ್ಲಿ 12 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಮಾತ್ರವಲ್ಲ ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ 326 ಮಂದಿ ವಿವಿಧ ಪೊಲೀಸ್ ಠಾಣೆಗಳಲ್ಲೇ ಉಸಿರು ನಿಲ್ಲಿಸಿದ್ದಾರೆ. ವರ್ಷಕ್ಕೆ ಸರಾಸರಿ ನೂರು ಮಂದಿ ಪೊಲೀಸರ ಕಸ್ಟಡಿಯಲ್ಲಿ ಪ್ರಾಣ ಬಿಡುತ್ತಿದ್ದಾರೆ. ವಿಚಾರಣೆ ಹೆಸರಿನಲ್ಲಿ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ನಡೆದಿರುವ "ಪೊಲೀಸ್ ಕಸ್ಟೋಡಿಯಲ್ ಡೆತ್" ಕುರಿತು ಹೊರ ಬಿದ್ದಿರುವ ಆಘಾತಕಾರಿ ಸಂಗತಿಯಿದು.

ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ
ದೇಶದ ಪ್ರತಿಯೊಬ್ಬ ಪ್ರಜೆಗೂ ಭಾರತ ಸಂವಿಧಾನ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದೆ. ಅದರಲ್ಲೂ ವಿಧಿ 21 ರ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕು ನೀಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತವಾಗಿ ಬದುಕಲು ಅವಕಾಶ ಕೊಟ್ಟಿದೆ. ಇನ್ನು ಯಾವುದೇ ಅಪರಾಧ ಕೃತ್ಯದ ಪತ್ತೆ, ವಿಚಾರಣೆ ನೆಪದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ವ್ಯಕ್ತಿಯನ್ನು ಕೂಡ ಪೊಲೀಸರು ಗೌರವಯುತವಾಗಿ ನಡೆಸಿಕೊಳ್ಳಬೇಕು. ಪೊಲೀಸರ ವಶದಲ್ಲಿರುವ ವ್ಯಕ್ತಿ ಸಾವನ್ನಪ್ಪುವುದು ಭಾರತೀಯ ನಾಗರಿಕನಿಗೆ ಒದಗಿಸಿರುವ ಹಕ್ಕುಗಳ ಉಲ್ಲಂಘನೆ ಎಂದು ಅನೇಕ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ರಾಜ್ಯದಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕುಗಳಿಗೂ ಬೆಲೆಯಿಲ್ಲ. ಸುಪ್ರೀಂಕೋರ್ಟ್ ನ ತೀರ್ಪುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆ ಹೊಸ್ತಿಲು ತುಳಿಯುವರಲ್ಲಿ ರಾಜ್ಯದಲ್ಲಿ ವರ್ಷಕ್ಕೆ ಕನಿಷ್ಠ 70 ರಿಂದ 100 ಮಂದಿ 'ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗುತ್ತಿದ್ದಾರೆ.

ಕರ್ನಾಟಕ ಕಸ್ಟೋಡಿಯಲ್ ಡೆತ್

ಕರ್ನಾಟಕ ಕಸ್ಟೋಡಿಯಲ್ ಡೆತ್

ಬೆಂಗಳೂರಿನ ಜೆ.ಸಿ. ನಗರದಲ್ಲಿ ಇತ್ತೀಚೆಗೆ ನೈಜೀರಿಯ ಮೂಲದ ಪ್ರಜೆ ಪೊಲೀಸರ ಕಸ್ಡಡಿಯಲ್ಲಿ ಸಾವನ್ನಪ್ಪಿದ್ದು ರಾಷ್ಟಮಟ್ಟದಲ್ಲಿ ಸುದ್ದಿಯಾಗಿತ್ತು. ಡ್ರಗ್ ಪ್ರಕರಣದಲ್ಲಿ ವಿಚಾರಣೆಗೆ ಕರೆತಂದಿಂದಿದ್ದ ಕಾಂಗೋ ಮೂಲದ ಜೋಯಿಲ್ ಮಾಲು ಎಂಬಾತನ ಕಸ್ಟೋಡಿಯಲ್ ಡೆತ್ ನಿಂದ ರೊಚ್ಚಿಗೆದ್ದ ವಿದೇಶಿ ಪ್ರಜೆಗಳು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಆ ಬಳಿಕ ಲಾಠಿ ಚಾರ್ಜ್ ಮಾಡಿ ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಮಾಲು ಕಸ್ಟೋಡಿಯಲ್ ಡೆತ್ ಪ್ರಕರಣವನ್ನು ಪೊಲೀಸರು ತನಿಖೆಗೆ ವಹಿಸಿದರು. ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್- ಕರ್ನಾಟಕ ಸಂಸ್ಥೆ ಮಾಹಿತಿ ಹಕ್ಕು ಅಧಿನಿಯಮದಡಿ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ವರದಿಯಾಗಿರುವ "ಕಸ್ಟಡಿ ಡೆತ್" ಪ್ರಕರಣಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಹೊರ ಹಾಕಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗುತ್ತದೆ. ಕಾನೂನು ಅನುಷ್ಠಾನ ಮಾಡುವ ಬಹುದೊಡ್ಡ ಜವಾಬ್ಧಾರಿ ಹೊತ್ತಿರುವ ಪೊಲೀಸ್ ನಡೆಯ ಬಗ್ಗೆ ಅನುಮಾನ ಮೂಡಿಸುವಂತಿದೆ.

ಕರ್ನಾಟಕದಲ್ಲಿ ಕಸ್ಟೋಡಿಯಲ್ ಡೆತ್

ಕರ್ನಾಟಕದಲ್ಲಿ ಕಸ್ಟೋಡಿಯಲ್ ಡೆತ್

ರಾಜ್ಯದಲ್ಲಿ ವರದಿಯಾಗಿರುವ ಕಸ್ಟೋಡಿಯಲ್ ಡೆತ್ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್- ಕರ್ನಾಟಕ ಸಂಸ್ಥೆ ಸಲ್ಲಿಸಿದ ಅರ್ಜಿಗೆ ರಾಜ್ಯ ಮಾನವ ಹಕ್ಕು ಆಯೋಗ ಉತ್ತರ ನೀಡಿದೆ. 2017 ರಿಂದ 2020 ರ ಅವಧಿಯಲ್ಲಿ 326 ಮಂದಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. 2017 ರಲ್ಲಿ 97 ಮಂದಿ, 2018 ರಲ್ಲಿ 73, 2019 ರಲ್ಲಿ 75, 2020 ರಲ್ಲಿ 81 ಪ್ರಕರಣ ವರದಿಯಾಗಿವೆ. ಅದರಲ್ಲಿ 249 ಪ್ರಕರಣಗಳು ಇತ್ಯರ್ಥವಾಗಿವೆ. ಉಳಿದ ಐದು ಪ್ರಕರಣದಲ್ಲಿ ಮಾತ್ರ ಆರೋಪಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದೆ.

ಇನ್ನು ಕಳೆದ ಜುಲೈ ಕೊನೆ ವಾರದಿಂದ ಸೆಪ್ಟೆಂಬರ್ ಮೊದಲ ವಾರದ ಅವಧಿಯಲ್ಲಿ ರಾಜ್ಯದಲ್ಲಿ 12 ಪೊಲೀಸ್ ಕಸ್ಟಡಿ ಡೆತ್ ವರದಿಯಾಗಿವೆ. ಅದರಲ್ಲಿ ಅತಿ ಗಂಭೀರವಾದ ಪ್ರಕರಣ ಕಾಂಗೂ ಮೂಲದ ಜೋಯಿಲ್ ಮಲು ಎಂಬಾತನ ಸಾವಿನ ಪ್ರಕರಣ. ಮಾದಕ ವಸ್ತು ಪೂರೈಕೆ ಹೆಸರಿನಲ್ಲಿ ಜೆ.ಸಿ. ನಗರ ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಜೋಯಿಲ್ ಮಲು ವಿಚಾರಣೆ ವೇಳೆ ಸಾವನ್ನಪ್ಪಿದ್ದು, ಪೊಲೀಸರು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದರು. ಜೋಯಿಲ್ ಪೊಲೀಸ್ ಕಸ್ಟಡಿ ಡೆತ್ ಖಂಡಿಸಿ ವಿದೇಶಿ ಪ್ರಜೆಗಳು ಬೀದಿಗೆ ಇಳಿದಿದ್ದರು. ಬಳಿಕ ಪ್ರಕರಣ ಹೊಸ ಸ್ವರೂಪ ಪಡೆದುಕೊಂಡು ತನಿಖೆಗೆ ವಹಿಸಲಾಗಿತ್ತು.

ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್- ಕರ್ನಾಟಕ ಕಿಡಿ

ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್- ಕರ್ನಾಟಕ ಕಿಡಿ

ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಹೋದವರು ಕಸ್ಟೋಡಿಯಲ್ ಡೆತ್ ಆಗುತ್ತಿರುವ ಬಗ್ಗೆ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ ಕಿಡಿಕಾರಿದೆ. ಕಸ್ಟೋಡಿಯಲ್ ಡೆತ್ ಎಂಬುದು ಅನ್ಯಾಯಕ್ಕಿಂತಲೂ ಘೋರ. ಮಾನವ ಹಕ್ಕುಗಳ ಕಗ್ಗೊಲೆ. ಜೈಲಿನಲ್ಲಿರುವ ಕೈದಿಗಳ, ವಿಚಾರಣಾಧೀನ ಬಂಧಿಗಳ ಆರೋಗ್ಯ ಮತ್ತು ಜೀವ ರಕ್ಷಣೆ ಮಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಬಂಧಿಗಳು ಕೂಡ ಎಲ್ಲಾ ಹಕ್ಕುಗಳನ್ನು ಅನುಭವಿಸಲು ಅರ್ಹರು ಎಂದು ಸಂವಿಧಾನವೇ ಹೇಳಿದೆ. ಕಸ್ಟೋಡಿಯಲ್ ಡೆತ್ ಎಂಬುದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ. ಈ ಕರಿತು ನ್ಯಾಯಾಲಯ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ರಾಜ್ಯದಲ್ಲಿ ವರದಿಯಾಗಿರುವ ಕಸ್ಟೋಡಿಯಲ್ ಡೆತ್ ಪ್ರಕರಣಗಳನ್ನು ತನಿಖೆ ನಡೆಸಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆಯ ಅಧ್ಯಕ್ಷ ಸುಜಯಾತುಲ್ಲಾ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಚಂದ್ರಶ್ರೀ ಆಗ್ರಹಿಸಿದ್ದಾರೆ.

ಸಿವಿಲ್ ಲಿಬರ್ಟಿ ಸಂಸ್ಥೆ ಮನವಿ

ಸಿವಿಲ್ ಲಿಬರ್ಟಿ ಸಂಸ್ಥೆ ಮನವಿ

ಯಾವುದೇ ಕಸ್ಟಡಿ ಸಾವು ಪ್ರಕರಣದ ತನಿಖೆ ಸಂಬಂಧ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಮಾನವ ಹಕ್ಕು, ಹಾಗೂ ಭಾರತ ಸಂವಿಧಾನದ ಬಗ್ಗೆ ಪೊಲೀಸರಿಗೆ ಸಮಗ್ರ ತರಬೇತಿ ನೀಡಿ ಜೀವ ಹಾಗೂ ಮಾನವ ಹಕ್ಕುಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಜೈಲಿನ ಅಧಿಕಾರಿಗಳಿಗೂ ಈ ಕುರಿತು ತರಬೇತಿ ನೀಡಬೇಕು. ಜೈಲಿನಲ್ಲಿರುವ ಕೈದಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕು. ವ್ಯಕ್ತಿ ಸ್ವಾತಂತ್ರ್ಯ ಕುರಿತು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪೊಲೀಸರು ಕಡ್ಡಾಯವಾಗಿ ಪಾಲಿಸುವಂತಾಗಬೇಕು. ಕಾಲಮಿತಿಯಲ್ಲಿ ರಾಜ್ಯದಲ್ಲಿ ವರದಿಯಾಗಿರುವ ಕಸ್ಟೋಡಿಯಲ್ ಡೆತ್ ಪ್ರಕರಣಗಳನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿವಿಲ್ ಲಿಬರ್ಟಿ ಸಂಸ್ಥೆ ಆಗ್ರಹಿಸಿದೆ.

Recommended Video

ಹಸರಂಗನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿದ ವಿರಾಟ್ ! | Oneindia Kannada

English summary
There are 326 custodial deaths reported in Karnataka in just 4 years. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X