ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 300 ಹೊಸ ಟಿಬಿ ಕಾಯಿಲೆ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ 300 ಟಿಬಿ ಹೊಸ ಪ್ರಕರಣಗಳು ಪತ್ತೆ. ರಾಜ್ಯ ಸರ್ಕಾರದ ವೈದ್ಯಕೀಯ ಅಭಿಯಾನದ ವೇಳೆ ಪತ್ತೆ. ಎಲ್ಲಾ ಜಿಲ್ಲೆಗಳಲ್ಲಿ ಆರಂಭಗೊಂಡಿರುವ ಕ್ಷಯ ರೋಗ ನಿರ್ಮೂಲನಾ ಅಭಿಯಾನ.

|
Google Oneindia Kannada News

ಬೆಂಗಳೂರು, ಜುಲೈ 21: ರಾಜ್ಯದಲ್ಲಿ ಹೊಸದಾಗಿ 300 ಕ್ಷಯ ರೋಗ (ಟಿಬಿ- ಟ್ಯುಬರ್ ಕ್ಲೋಸಿಸ್) ಪ್ರಕರಣಗಳು ಪತ್ತೆಯಾಗಿದ್ದು, ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳಲ್ಲಿ ಇವುಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುವುದು ವೈದ್ಯರು ತಿಳಿಸಿದ್ದಾರೆ.

ಕ್ಷಯ ರೋಗಿಗಳಿಗೆ ಆಧಾರ್ ಜೋಡಣೆಗೆ ಆಗಸ್ಟ್ 30 ಕೊನೆಯ ದಿನಕ್ಷಯ ರೋಗಿಗಳಿಗೆ ಆಧಾರ್ ಜೋಡಣೆಗೆ ಆಗಸ್ಟ್ 30 ಕೊನೆಯ ದಿನ

2025ರ ವೇಳೆಗೆ ಟಿಬಿಯನ್ನು ಕರ್ನಾಟಕದಿಂದ ತೊಲಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸತಾಗಿ ವೈದ್ಯಕೀಯ ತಪಾಸಣಾ ಅಭಿಯಾನವನ್ನು ಆರಂಭಿಸಿದೆ. ಇದಕ್ಕೆ ಡಾ. ಸಂಜಯ್ ಗುಪ್ತಾ ಅವರು ಸಾರಥಿಯಾಗಿದ್ದಾರೆ. ಅಭಿಯಾನ ಶುರುವಾಗಿ ಕೇವಲ 3 ದಿನಗಳಲ್ಲೇ 300 ಪ್ರಕರಣಗಳು ಪತ್ತೆಯಾಗಿರುವುದು ವೈದ್ಯರನ್ನೂ ಕೊಂಚ ದಂಗುಬಡಿಸಿದೆ.

300 NEW TB CASES FOUND, IN JUST 3 DAYS

ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಡಾ. ಗುಪ್ತಾ ಅವರು, ರಾಜ್ಯದಲ್ಲಿ ಹೊಸದಾಗಿ 300 ಟಿಬಿ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ 11 ಜಿಲ್ಲೆಗಳಲ್ಲಿ ಟಿಬಿಯು ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ, ಆ 11 ಜಿಲ್ಲೆಗಳ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಪ್ರತಿಯೊಂದು ಜಿಲ್ಲೆಗಳಲ್ಲಿ ಟಿಬಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹಳ್ಳಿಗಾಡಿನ ಜನರಿಗೂ ಇದರ ಉಪಯೋಗ ಸಿಗುವಂತೆ ಮಾಡಲಾಗುವುದು. ವಿಪರೀತ ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳ ಕಫ, ರಕ್ತ, ಮೂತ್ರಗಳ ಸ್ಯಾಂಪಲ್ ಗಳನ್ನು ಪಡೆದು ಮೂರು ಅಥವಾ ನಾಲ್ಕು ದಿನಗಳಲ್ಲಿ ಅವುಗಳ ಪರೀಕ್ಷಾ ವರದಿಯನ್ನು ಪಡೆಯಲಾಗುವುದು.

ಟಿಬಿ ಕಾಯಿಲೆ ಸೋಂಕಿಗೆ ಒಳಗಾದವರಿಗೆ ಕೂಡಲೇ ಚಿಕಿತ್ಸೆಗೆ ಒಳಗಾಗುವಂತೆ ಪ್ರೇರಿಪಿಸಿ ಅವರಿಗೆ ಅಗತ್ಯ ವೈದ್ಯಕೀಯ ನೆರವು ಕೊಡಲಾಗುವುದು ಎಂದು ಡಾ. ಗುಪ್ತಾ ತಿಳಿಸಿದ್ದಾರೆ.

English summary
The second phase of the active case finding (ACF) campaign of the state government that kick started on July 17 has diagnosed 300 new cases tuberculosis in the state, with 100 cases being detected each day from 11 districts. The campaign has been launched with an aim to eradicate TB by 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X