ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಹೊಸ ಐಜಿ, ಕೆಲವರಿಗೆ ಬಡ್ತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 01: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ 30 ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.

ಪ್ರವೀಣ್ ಸೂದ್ ಅವರು ಆರು ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ್ದರೆ. 24 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಒಟ್ಟು 30 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದಂತಾಗಿದೆ.

ಪೊಲೀಸರ ವರ್ಗಾವಣೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆಪೊಲೀಸರ ವರ್ಗಾವಣೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಅವರನ್ನು ಕಾರಾಗೃಹ ವಿಭಾಗದ ಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಕಾರಾಗೃಹ ಇಲಾಖೆ ಎಡಿಜಿಪಿ ಎನ್.ಎಸ್.ಮೇಘರಿಕ್ ಅವರನ್ನು ಸಿಐಡಿ ಡಿಜಿಪಿಯನ್ನಾಗಿ ವರ್ಗಾಯಿಸಿದ್ದು, ಸಂಪರ್ಕ ಹಾಗೂ ಆಧುನೀಕರಣ ವಿಭಾಗದ ಎಡಿಜಿಪಿ ಡಾ.ಆರ್.ಪಿ.ಶರ್ಮಾ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ಡಿಜಿಪಿಯನ್ನಾಗಿ ವರ್ಗಾಯಿಸಲಾಗಿದೆ. ಇವರೆಲ್ಲರೂ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ.

30 Police Officers Transferd, Six Of Them Promoted

ಪೂರ್ವ ವಲಯ (ದಾವಣಗೆರೆ) ಐಜಿಪಿ ಅಮೃತ್ ಪಾಲ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಗೆ, ಐಜಿಪಿ ಉಮೇಶ್ ಕುಮಾರ್ ಅವರನ್ನು ಗೃಹ ಇಲಾಖೆಯ ಎಡಿಜಿಪಿ ಹುದ್ದೆಗೆ, ಪಶ್ಚಿಮ ವಲಯ (ಮಂಗಳೂರು) ಐಜಿಪಿ ಜೆ.ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ರೈಲ್ವೆ ವಿಭಾಗದ ಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇವರೆಲ್ಲರೂ ಎಡಿಜಿಪಿ ಆಗಿ ಬಡ್ತಿ ಪಡೆದಿದ್ದಾರೆ. ಎ.ಎಂ.ಪ್ರಸಾದ್ ಅವರನ್ನು ಗೃಹ ರಕ್ಷಕ ದಳದ ಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಕೆ: ನಿಯಮದಲ್ಲಿ ಏನೇನಿದೆ?ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಕೆ: ನಿಯಮದಲ್ಲಿ ಏನೇನಿದೆ?

ಸಾಮಾನ್ಯ ವರ್ಗಾವಣೆ
ಪಿ.ಎಸ್.ಸಂಧು- ಎಡಿಜಿಪಿ, ಆಂತರಿಕ ಭದ್ರತೆ, ಬೆಂಗಳೂರು
ಟಿ.ಸುನಿಲ್ ಕುಮಾರ್, ಎಡಿಜಿಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು
ಸಿ.ಎಚ್.ಪ್ರತಾಪರೆಡ್ಡಿ, ಎಡಿಜಿಪಿ, ಸಂಹನ, ಸಾಗಣೆ, ಆಧುನೀಕರಣ ವಿಭಾಗ
ಸೀಮಂತ್‌ಕುಮಾರ ಸಿಂಗ್, ಐಜಿಪಿ, ಪಶ್ಚಿಮ ವಲಯ (ಮಂಗಳೂರು)
ಹರಿಶೇಖರನ್, ಐಜಿಪಿ, ತರಬೇತಿ ವಿಭಾಗ
ಸೌಮೇಂದು ಮುಖರ್ಜಿ, ಐಜಿಪಿ ಮತ್ತು ಎಸಿಪಿ, ಬೆಂಗಳೂರು ಪಶ್ಚಿಮ
ಎಸ್.ರವಿ, ಐಜಿಪಿ, ಆಂತರಿಕ ಭದ್ರತೆ ವಿಭಾಗ
ಪವಾರ್ ಪ್ರವೀಣ್ ಮಧುಕರ್- ಡಿಐಜಿ, ಆಡಳಿತ ವಿಭಾಗ
ಕೆ.ಟಿ.ಬಾಲಕೃಷ್ಣ- ಡಿಐಜಿ, ನೇಮಕಾತಿ ವಿಭಾಗ
ಡಾ.ಚಂದ್ರಗುಪ್ತ- ಡಿಐಜಿ ಹಾಗೂ ಪೊಲೀಸ್ ಕಮಿಷನರ್, ಮೈಸೂರು.
ಅನುಪಮ್ ಅಗರವಾಲ್- ಎಸ್‌ಪಿ, ವಿಜಯಪುರ
ಡಾ.ರಾಮ್‌ನಿವಾಸ್ ಸೆಪಟ್- ಎಸ್‌ಪಿ, ಭ್ರಷ್ಟಾಚಾರ ನಿಗ್ರಹದಳ, ಬೆಂಗಳೂರು
ಪಾಟೀಲ್ ವಿನಾಯಕ ವಸಂತರಾವ್- ಎಸ್‌ಪಿ, ವಿಧಿವಿಜ್ಞಾನ ಪ್ರಯೋಗಾಲಯ
ನಿಕ್ಕಂ ಪ್ರಕಾಶ್ ಅಮೃತ್- ಎಸ್‌ಪಿ (ಭದ್ರತೆ), ಗುಪ್ತಚರ, ಬೆಂಗಳೂರು
ಜಿ.ರಾಧಿಕಾ- ಎಸ್‌ಪಿ, ಚಿತ್ರದುರ್ಗ
ಡಾ.ಕೆ.ಅರುಣ್- ಎಸ್‌ಪಿ, ಭದ್ರತೆ, ಬಿಎಂಟಿಸಿ
ಡಿ.ಎಲ್‌.ನಾಗೇಶ್, ಎಸ್‌ಪಿ, ಬೀದರ್
ಆರ್.ಶ್ರೀನಿವಾಸಗೌಡ, ಎಸ್‌ಪಿ, ಹಾಸನ
ಎನ್.ಯತೀಶ್, ಎಸ್‌ಪಿ, ಗದಗ
ಟಿ.ಶ್ರೀಧರ, ಎಸ್‌ಪಿ, ಗುಪ್ತಚರ ಬೆಂಗಳೂರು.
ಜಿನೇಂದ್ರ ಖಣಗಾವಿ- ಎಸ್‌ಪಿ, ಪೊಲೀಸ್ ತರಬೇತಿ ಶಾಲೆ, ಚೆನ್ನಪಟ್ಟಣ
ಕೆ.ವಿ.ಜಗದೀಶ- ಎಐಜಿಪಿ, ಡಿಜಿಪಿ ಕಚೇರಿ, ಬೆಂಗಳೂರು
ನಾರಾಯಣ್- ಡಿಸಿಪಿ, ಬೆಂಗಳೂರು ಸಂಚಾರ ಪೂರ್ವ ವಿಭಾಗ.

English summary
30 police officers transfers as soon as new IG taken charge. Six officers has been promoted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X