ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಬಿಜೆಪಿ ಶಾಸಕರು ಜೆಡಿಎಸ್‌ ಸೇರಲು ಕಾಯುತ್ತಿದ್ದಾರೆ: ರೇವಣ್ಣ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 10: 30 ಜನ ಬಿಜೆಪಿ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದು ಜೆಡಿಎಸ್ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಜೆಡಿಎಸ್ ಮುಖಂಡ ಎಚ್‌.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮನ ನೋಯಿಸಲು ಇಷ್ಟವಿಲ್ಲದೆ ಅವರನ್ನು ನಾವೇ ತಡೆದಿದ್ದೇವೆ ಎಂದು ಅವರು ಹೇಳಿದ್ದಾರೆ.

ನಾನ್ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗಳಲ್ಲಿ ತಲೆ ಹಾಕಲಿ: ರೇವಣ್ಣ ನಾನ್ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗಳಲ್ಲಿ ತಲೆ ಹಾಕಲಿ: ರೇವಣ್ಣ

'ಯಡಿಯೂರಪ್ಪ ಅವರ ಆರೋಗ್ಯ ಸರಿಯಿಲ್ಲ, ನೀವು ಇತ್ತ ಬಂದರೆ ಅವರಿಗೆ ಆಘಾತವಾಗುತ್ತದೆ, ನಾವೇ ಹೇಳುತ್ತೇವೆ ಆಗ ಬರುವಿರಂತೆ' ಎಂದು ಹೇಳಿ ಜೆಡಿಎಸ್‌ ನವರೆ ಬಿಜೆಪಿ ಶಾಸಕರನ್ನು ಪಕ್ಷಾಂತರ ಮಾಡದೆ ತಡೆದಿದ್ದಾರಂತೆ.

ಎ ಟೀಮ್ ಬಿ ಟೀಮ್ ಹೇಳಿಕೆಯಿಂದ ಪೆಟ್ಟು

ಎ ಟೀಮ್ ಬಿ ಟೀಮ್ ಹೇಳಿಕೆಯಿಂದ ಪೆಟ್ಟು

ವಿಧಾನಸಭೆ ಚುನಾವಣೆ ಪ್ರಚಾರ ಸಮಯದಲ್ಲಿ ಕಾಂಗ್ರೆಸ್‌ನವರು ಎ ಟೀಮ್, ಬಿ ಟೀಮ್‌ ಎಂದು ಅಪಪ್ರಚಾರ ಮಾಡದೇ ಇದ್ದಿದ್ದರೆ ಬಿಜೆಪಿಗೆ 30 ಸೀಟು ಕಡಿಮೆ ಆಗಿ, ಜೆಡಿಎಸ್‌ನ 30 ಸೀಟುಗಳು ಹೆಚ್ಚಾಗಿರುತ್ತಿದ್ದವು ಎಂದು ಅವರು ಕೈ-ಕೈ ಹಿಸುಕಿಕೊಂಡರು.

ಮಾಧ್ಯಮಗಳ ಕ್ಯಾಮೆರಾಗಳಿಗೆ ಪೊಲೀಸರನ್ನು ಅಡ್ಡ ನಿಲ್ಲಿಸಿದ ಸಿಎಂ! ಮಾಧ್ಯಮಗಳ ಕ್ಯಾಮೆರಾಗಳಿಗೆ ಪೊಲೀಸರನ್ನು ಅಡ್ಡ ನಿಲ್ಲಿಸಿದ ಸಿಎಂ!

ಬೆಳಗಾವಿಯನ್ನು ಕೆ-ಶಿಪ್ ಕೆಲಸ ಮುಗಿದಿತ್ತು

ಬೆಳಗಾವಿಯನ್ನು ಕೆ-ಶಿಪ್ ಕೆಲಸ ಮುಗಿದಿತ್ತು

ಕೆ-ಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ವರ್ಗಾಯಿಸಿದ ಬಗ್ಗೆ ಮಾತನಾಡಿದ ರೇವಣ್ಣ, ಬೆಳಗಾವಿಯಲ್ಲಿ ಅದರ ಕೆಲಸ ಮುಗಿದಿತ್ತು ಹಾಗಾಗಿ ಅದನ್ನು ಹಾಸನದ ಸಕಲೇಶಪುರಕ್ಕೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಸಚಿವ ರೇವಣ್ಣ ಮೇಲೆ ಸಿಟ್ಟಾದ ಕೃಷ್ಣಬೈರೇಗೌಡ, ಪರಮೇಶ್ವರ್‌ಗೆ ದೂರು ಸಚಿವ ರೇವಣ್ಣ ಮೇಲೆ ಸಿಟ್ಟಾದ ಕೃಷ್ಣಬೈರೇಗೌಡ, ಪರಮೇಶ್ವರ್‌ಗೆ ದೂರು

670 ಕೋಟಿ ಮೌಲ್ಯದ ಕೆಲಸ

670 ಕೋಟಿ ಮೌಲ್ಯದ ಕೆಲಸ

ಕೆ-ಶಿಪ್‌ ಕಚೇರಿ ಸ್ಥಳಾಂತರಿಸುವಂತೆ ವಿಶ್ವಬ್ಯಾಂಕ್ ಕೆಲವು ತಿಂಗಳುಗಳ ಹಿಂದೆಯೇ ಪತ್ರ ಬರೆದಿತ್ತು. ಅದರಂತೆ ಈಗ ಸ್ಥಳಾಂತರಿಸಲಾಗಿದೆ. ಕೆ-ಶಿಪ್‌ನ ಈಗಿನ ಕಚೇರಿಯಲ್ಲಿ 670 ಕೋಟಿ ಮೌಲ್ಯದ ಕೆಲಸಗಳು ನಡೆಯುತ್ತಿವೆ. ಬಿಜೆಪಿಯವರು ಮಾಹಿತಿ ತಿಳಿದುಕೊಳ್ಳದೆ ಆರೋಪ ಮಾಡುತ್ತಾರೆ ಎಂದು ಅವರು ಹರಿಹಾಯ್ದರು.

ಬಿಜೆಪಿಯಿಂದ ತೀವ್ರ ವಿರೋಧ

ಬಿಜೆಪಿಯಿಂದ ತೀವ್ರ ವಿರೋಧ

ಬೆಳಗಾವಿಯಲ್ಲಿದ್ದ ಕೆ-ಶಿಪ್ ಕಚೇರಿಯನ್ನು ಹಾಸನದ ಸಕಲೇಶಪುರಕ್ಕೆ ವರ್ಗಾಯಿಸಿದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ ಎಂದು ಕೆಲವು ದಿನಗಳ ಹಿಂದೆಯಷ್ಟೆ ಹೇಳಿ ಈಗ ಮತ್ತೆ ತಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಕೆ-ಶಿಪ್ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.

English summary
30 BJP MLAs were ready to join JDS says minister and jds leader HD Revanna. He said we only stopping them from joining our party. He said BJP pointlessly accusing in k-ship office change issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X