ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ 3,000 ಕ್ಯೂಸೆಕ್ಸ್ ಹೆಚ್ಚುವರಿ ನೀರು ಬಿಡುಗಡೆ

|
Google Oneindia Kannada News

ಬೆಂಗಳೂರು, ಜುಲೈ 29: ರೈತರ ವಿರೋಧದ ನಡುವೆಯೇ ಕೆಆರ್ಎಸ್ ಅಣೆಕಟ್ಟಿನಿಂದ ತಮಿಳುನಾಡಿಗೆ ಸೋಮವಾರ ಹೆಚ್ಚುವರಿ ನೀರು ಹರಿಸಲಾಗಿದೆ.

ಮೂರು ಸಾವಿರ ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಕೆಆರ್ಎಸ್ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದರೂ, ಹೊರಹರಿವನ್ನು ಹೆಚ್ಚಿಸಲಾಗಿದೆ.

ಕೆ.ಆರ್.ಪೇಟೆ ಜನಕ್ಕೆ ಬಿಎಸ್ ವೈ ಉಡುಗೊರೆಯಾಗಿ ನೀರು ಕೊಟ್ರು..!ಕೆ.ಆರ್.ಪೇಟೆ ಜನಕ್ಕೆ ಬಿಎಸ್ ವೈ ಉಡುಗೊರೆಯಾಗಿ ನೀರು ಕೊಟ್ರು..!

ಜಲಾಶಯದ ಒಳಹರಿವು 3,741 ಕ್ಯೂಸೆಕ್‌ನಷ್ಟಿದ್ದು, 7,883ರಷ್ಟಿದ್ದ ಹೊರಹರಿವನ್ನು 10,129 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಸುಮಾರು ಮೂರು ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಹೆಚ್ಚುವರಿಯಾಗಿ ಹರಿಬಿಡಲಾಗುತ್ತಿದೆ.

3 Thousand Cusec Water Released From KRS To Tamil Nadu

ಕೆಆರ್ಎಸ್ ಜಲಾಶಯದ ಮಟ್ಟ 124.80 ಅಡಿಗಳಷ್ಟಿದ್ದು, ಈಗ ಕೇವಲ 85.76 ಅಡಿಯಷ್ಟು ನೀರು ಇದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಜಲಾಶಯದ ಲೆಕ್ಕಾಚಾರಕ್ಕೆ ಕೆಆರ್ ಎಸ್ ಗೆ ಬಂದಿದೆ ಆಟೊಮೆಟಿಕ್ ವಾಟರ್‌ಗೇಜ್ ತಂತ್ರಜ್ಞಾನ ಜಲಾಶಯದ ಲೆಕ್ಕಾಚಾರಕ್ಕೆ ಕೆಆರ್ ಎಸ್ ಗೆ ಬಂದಿದೆ ಆಟೊಮೆಟಿಕ್ ವಾಟರ್‌ಗೇಜ್ ತಂತ್ರಜ್ಞಾನ

ಒಂದು ವಾರದಲ್ಲಿ ತಮಿಳುನಾಡಿಗೆ ಸುಮಾರು 2 ಟಿಎಂಸಿ ನೀರು ಹರಿಸಲಾಗಿದೆ. ವಿರಿಜಾ, ಸಿಡಿಎಸ್, ರಾಜಪರಮೇಶ್ವರಿ, ರಾಮಸ್ವಾಮಿ, ಮಾಧವಮಂತ್ರಿ ನಾಲೆಗಳಿಗೆ ಒಂದು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಉಳಿದ ನೀರನ್ನು ವಿಶ್ವೇಶ್ವರಯ್ಯ ನಾಲೆ, ಬಲದಂಡೆ ನಾಲೆ ಮತ್ತು ಎಡದಂಡೆ ನಾಲೆಗೆ ಹರಿಸಲಾಗುತ್ತಿದೆ.

English summary
Karnataka has released 3,000 Cusec water from KRS to Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X