ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಫಲಿತಾಂಶ: 50ರ Rank ಪಟ್ಟಿಯಲ್ಲಿ ರಾಜ್ಯದ ಮೂವರಿಗೆ ಸ್ಥಾನ

|
Google Oneindia Kannada News

ಬೆಂಗಳೂರು, ಜೂನ್ 5: ಬುಧವಾರ ಪ್ರಕಟವಾಗಿರುವ ನೀಟ್ ಫಲಿತಾಂಶದಲ್ಲಿ 5೦ Rank ಪಡೆದವರ ಪಟ್ಟಿಯಲ್ಲಿ ರಾಜ್ಯದ ಮೂವರು ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯದ ಡಿ.ಆರ್. ಫಣೀಂದ್ರ ಅಖಿಲ ಭಾರತ ಮಟ್ಟದಲ್ಲಿ 36ನೇ Rank ಪಡೆದಿದ್ದಾರೆ. ಪಿ. ಮಹೇಶ್ ಆನಂದ್ ಅವರು 43ನೇ Rank ಗಳಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಪ್ರಗ್ಯಾ ಮಿತ್ರಾ 20ನೇ Rank ಪಡೆದಿದ್ದಾರೆ.

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಫಣೀಂದ್ರ ರಾಜ್ಯಕ್ಕೆ ಪ್ರಥಮನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಫಣೀಂದ್ರ ರಾಜ್ಯಕ್ಕೆ ಪ್ರಥಮ

ರಾಜಸ್ಥಾನದ ನಳೀನ್ ಖಂಡೇವಾಲಾ ಎಂಬ ವಿದ್ಯಾರ್ಥಿ ಭಾರತಕ್ಕೆ ಪ್ರಥಮ rank ಗಳಿಸಿದ್ದಾರೆ. ದೆಹಲಿ ಮೂಲದ ಭವೀಕ್ ಬನ್ಸಾಲ್ ಅವರಿಗೆ ದ್ವಿತೀಯ ಸ್ಥಾನ ದೊರೆತಿದ್ದು, ಉತ್ತರ ಪ್ರದೇಶದ ಕೌಶಿಕ್ ಎಂಬ ವಿದ್ಯಾರ್ಥಿ ಮೂರನೇ rank ಗಳಿಸಿದ್ದಾರೆ.

3 students from state in neet result 50 rank list

ರಾಜ್ಯದಿಂದ ಈ ವರ್ಷ ಒಟ್ಟು 1,15,931 ಮಂದಿ ನೀಟ್‌ಗೆ ಹೆಸರು ದಾಖಲಿಸಿದ್ದರು. ಅವರಲ್ಲಿ 1,02,735 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 64,982 ವಿದ್ಯಾರ್ಥಿಗಳು ಮುಂದಿನ ಹಂತದ ಸೀಟು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ

ನೀಟ್ ಬರೆದು ಅರ್ಹತೆ ಪಡೆದಿರುವ ರಾಜ್ಯದ ವಿದ್ಯಾರ್ಥಿಗಳ ಪ್ರಮಾಣ ಕಳೆದ ಸಾಲಿಗೆ ಹೋಲಿಸಿದರೆ ಇಳಿಕೆಯಾಗಿದೆ. ಕಳೆದ ವರ್ಷ ಶೇ 63.51ರಷ್ಟು ಅಭ್ಯರ್ಥಿಗಳು ನೀಟ್ ಅರ್ಹತೆ ಗಳಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಅದರ ಪ್ರಮಾಣ ಶೇ 3.25ಕ್ಕೆ ಕುಸಿತ ಕಂಡಿದೆ.

ದೇಶದಾದ್ಯಂತ ಒಟ್ಟು 14,10,755 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 7,97,042 ಮಂದಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

English summary
Three students from Karnataka were in the top 50 Rank list of NEET result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X