ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BIG BREAKING: ಸಿಎಂ ಗೃಹ ಕಚೇರಿ ಕೃಷ್ಣಾ ಸಿಬ್ಬಂದಿಗೆ ಕೊರೊನಾ ವೈರಸ್ ಶಂಕೆ?

|
Google Oneindia Kannada News

ಬೆಂಗಳೂರು, ಜೂ. 19:ಇಡೀ ಜಗತ್ತಿಗೆ ಸಂಚಕಾರ ತಂದಿರುವ ಕೊರೊನಾವೈರಸ್ ವಿಕಾಸಸೌಧದ ಸಿಬ್ಬಂದಿಯೊಬ್ಬರಲ್ಲಿ ದೃಢಪಟ್ಟಿತ್ತು. ಇದೀಗ ಸಿಎಂ ಗೃಹಕಚೇರಿ ಸಿಬ್ಬಂದಿಗೆ ಕೋವಿಡ್ ಶಂಕೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಸಿಎಂ ಗೃಹಕಚೇರಿ ಕೃಷ್ಣಾ ಸೇರಿದಂತೆ ಬೆಂಗಳೂರಿನಲ್ಲಿರುವ ಎಲ್ಲ ಸಚಿವರುಗಳ ಸರ್ಕಾರಿ ನಿವಾಸಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕೆಲ ಕ್ಷಣಗಳ ಹಿಂದೆ ನಿಷೇಧಿಸಲಾಗಿದೆ.

Recommended Video

ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | Oneindia Kannada

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯನಿರ್ವಹಿಸುವ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸ್ ಒಬ್ಬರು ಸೇರಿದಂತೆ ಮೂವರು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ.

3 Staff Members Working at CM yediyurappas Krishna infected with Coronavirus

ವಿಧಾಸೌಧಕ್ಕೆ ಸ್ಥಳಾಂತರ: ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ಗೃಹ ಕಚೇರಿ ಕೃಷ್ಣಾದಿಂದ ವಿಧಾನಸೌಧದ ಕಮಿಟಿ ರೂಂಗೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ವಿಕಾಸಸೌಧದ ಸಿಬ್ಬಂದಿ ಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ ವಿಧಾನಸೌಧ, ವಿಕಾಸಸೌಧ ಕಟ್ಟಡಗಳು, ಸುತ್ತಲೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇದೀಗ ಸಿಎಂ ಗೃಹಕಚೇರಿ ಕೃಷ್ಣಾದ ಸಿಬ್ಬಂದಿಗೂ ಸೋಂಕು ತಗುಲಿದೆ ಎನ್ನಲಾಗಿದೆ. ಮುಖ್ಯಮಂತ್ರಿಗಳ ಸಚಿವಾಲಯ ಇನ್ನೂ ಅದನ್ನು ದೃಢಪಡಿಸಬೇಕಿದೆ.

English summary
3 of the staff members working at CM Yediyurappa's home office Krishna infected with coronavirus. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X