ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ವಿರುದ್ಧ ವಾಟ್ಸಪ್ ಆಡಿಯೋ; ಶಿಕ್ಷಕರು ಅಮಾನತು

|
Google Oneindia Kannada News

ಬೆಂಗಳೂರು, ಏಪ್ರಿಲ್ 2: ಕೊರೊನಾ ವಿಫತ್ತು ನಿಧಿ ನೀಡಿ ಎಂದಿದ್ದ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ವಾಟ್ಸಪ್ ಆಡಿಯೋ ಹರಿಬಿಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂವರು ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.

ಕೊರೋನಾ ಸೋಂಕು ತಡೆಗಟ್ಟುವ ಮುಂಜಾಗ್ರತ ಕ್ರಮವಾಗಿ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ರಜೆಘೋಷಿಸಲಾಗಿದ್ದು ಮಾರ್ಚ್ 31 ರವರೆಗೆ ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದ್ದು ಕೆಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ದೇಶನ ನೀಡಲಾಗಿತ್ತು.

ಚೀನಾದಲ್ಲಿದ್ದಾರಂತೆ 40 ಸಾವಿರ ಅಗೋಚರ ಕೊರೊನಾ ರೋಗಿಗಳು..!ಚೀನಾದಲ್ಲಿದ್ದಾರಂತೆ 40 ಸಾವಿರ ಅಗೋಚರ ಕೊರೊನಾ ರೋಗಿಗಳು..!

ಆದರೆ, ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಸುತ್ತಿದ್ದ ಕಡೂರು ತಾಲ್ಲೂಕಿನ ಗಿರಿಯಾಪುರದ ಗುರುಕೃಪ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧರಣೇಂದ್ರ ಮೂರ್ತಿ, ತರೀಕೆರೆ ತಾಲ್ಲೂಕಿನ ಅಮೃತೇಶ್ವರ ಪ್ರೌಢಶಾಲೆಯ ಎಂ.ರಂಗಣ್ಣ ಹಾಗೂ ಕಡೂರು ತಾಲ್ಲೂಕು ಬಾಸೂರಿನ ಚೆನ್ನಕೇಶ್ವರ ಪ್ರೌಢಶಾಲೆಯ ಸಿ.ಎಚ್ ಕುಮಾರ್ 'ನಾವು ನಮ್ಮರು' ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹಲೋ ಸಿ,ಎಂ ಸಾಹೇಬರೇ ಸಾರ್ವಜನಿಕರಿಂದ ಹಣ ಕೇಳಿದ್ದೀರಿ ಹಣದ ಲೀಸ್ಟ್ ಇಲ್ಲಿದೆ ನೋಡಿ ಎಂಬ ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

3 School Teachers Suspended For Audio Against CM Yediyurappa

ಶಿಕ್ಷಣ ಕಾಯ್ದೆ 1999 ನಿಯಮ 24 ಮತ್ತು 25(3) (ಎಫ್) ಉಲ್ಲಂಘನೆ ಮಾಡಿದ್ದು ಆಯಾ ಶಾಲಾ ಆಡಳಿತ ಮಂಡಳಿಗಳು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದೆ ಎಂದು ಚಿಕ್ಕಮಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
3 School Teachers Suspended For Audio Against CM Yediyurappa. Those teachers audio sent through Whatsapp about coronavirus cm relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X