ಚಿಕ್ಕಮಗಳೂರು: ಮರಳು ದಿಬ್ಬ ಕುಸಿದು ಮೂವರು ಸಾವು

Posted By:
Subscribe to Oneindia Kannada

ಚಿಕ್ಕಮಗಳೂರು, ಮೇ 11 : ಬುಧವಾರ ಮಧ್ಯರಾತ್ರಿ ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.

ತರೀಕೆರೆ ತಾಲೂಕಿನ ಗೇರಮರಡಿ ನಿವಾಸಿಗಳಾದ ಮಂಜುನಾಥ್, ನವೀನ್ ಹಾಗೂ ಅರುಣ್ ಮೃತ ದುರ್ದೈವಿಗಳು. ಮೃತಪಟ್ಟವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು ತರೀಕೆರೆಗೆ ಬಂದು ನೆಲೆಸಿದ್ದರು.

3 dies after sand tunnel collapses on top of him at Rangapur Chikmagalur district

8 ಜನರ ಮೇಲೂ ದಿಬ್ಬ ಕುಸಿದಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರಗೊಂಡಿದ್ದಾರೆ. ಗಾಯಾಳುಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ವಶಪಡಿಸಿಕೊಂಡಿರೋ ಪೊಲೀಸರು ತಲೆಮರೆಸಿಕೊಂಡಿರೋ ಟ್ರ್ಯಾಕ್ಟರ್ ಮಾಲೀಕ ರವಿ ಹಾಗೂ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆನಂದ್ ಎಂಬುವರಿಗೆ ಹುಡುಕಾಟ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
3 person death after sand tunnel collapses on top of him at Rangapur village Tarikere taluk, Chikmagalur district on May 10 late night.
Please Wait while comments are loading...