ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಜನರ ಅನುಕೂಲಕ್ಕೆ 3 ಎಕರೆ ಜಾಗ: ಸಿಎಂ ಭರವಸೆ

|
Google Oneindia Kannada News

ಬೆಂಗಳೂರು, ಫೆ.19: ಬೆಂಗಳೂರು: ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕನಿಷ್ಠ 3 ಎಕರೆ ಜಾಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ನೇತೃತ್ವದಲ್ಲಿ ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು.

ಹರಿಹರ: ತುಂಗಾರತಿ ಪ್ರಯುಕ್ತ 108 ಯೋಗ ಮಂಟಪಗಳಿಗೆ ಸಿಎಂ ಶಿಲಾನ್ಯಾಸ: ಏನಿದು ತುಂಗಾರತಿ?ಹರಿಹರ: ತುಂಗಾರತಿ ಪ್ರಯುಕ್ತ 108 ಯೋಗ ಮಂಟಪಗಳಿಗೆ ಸಿಎಂ ಶಿಲಾನ್ಯಾಸ: ಏನಿದು ತುಂಗಾರತಿ?

ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಬರುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗಲು ವಸತಿ ನಿಲಯ ನಿರ್ಮಾಣ ಮಾಡಲು ಶೀಘ್ರವೇ ಜಮೀನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

3 acres of land for the benefit of the people of North Karnataka in Bangalore: CM Bommai

ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡುವಂತೆ ನಿಯೋಗ ಮಾಡಿದ ಮನವಿಗೆ ಸಿಎಂ ಸಕಾರಾತ್ಮಕ ಸ್ಪಂದಿಸಿದರು.

ಮುಖ್ಯಮಂತ್ರಿಗಳ ಭೇಟಿಯ ನಿಯೋಗದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಪದಾಧಿಕಾರಿಗಳಾದ ಬಸವರಾಜ ಬೇಳೂರು, ಶ್ರೀಧರ ಕಲ್ಲೂರು, ಗಂಗಾಧರ ವಾಲಿ, ಅಯ್ಯನಗೌಡ ಬಿರಾದಾರ, ಸಂತೋಷ ಬಸೆಟ್ಟಿ, ಭೀಮಣ್ಣ ನಲತ್ವಾಡ, ಪತ್ರಕರ್ತ ಶಂಕರ ಪಾಗೋಜಿ ಹಾಜರಿದ್ದರು.

ಮಾ.04ರಂದು ರಾಜ್ಯ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ; ನಿರೀಕ್ಷೆಗಳೇನು?ಮಾ.04ರಂದು ರಾಜ್ಯ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ; ನಿರೀಕ್ಷೆಗಳೇನು?

ಕಾಂಗ್ರೆಸ್ ವಿರೋಧಪಕ್ಷವಾಗಿರಲು ನೈತಿಕತೆ ಕಳೆದುಕೊಂಡಿದೆ: ಬೊಮ್ಮಾಯಿ

ಕಾಂಗ್ರೆಸ್ ವಿರೋಧಪಕ್ಷವಾಗಿರಲು ನೈತಿಕತೆ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Recommended Video

Karnataka: ಹಿಜಾಬ್ ತೆಗಿಯಲ್ಲ‌ ಎಂದ 58 ವಿದ್ಯಾರ್ಥಿನಿಯರು ಶಾಲೆಯಿಂದಲೇ‌ ಅಮಾನತು | Oneindia Kannada

ಕಾಂಗ್ರೆಸ್ ಪಕ್ಷದ ಧರಣಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದವರು ಆಡಳಿತ ಪಕ್ಷವಾಗಿಯಂತೂ ಅಲ್ಲ, ವಿರೋಧಪಕ್ಷವಾಗಿರಲೂ ಸಹ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.

English summary
Chief Minister Basavaraja Bommai promised to provide at least 3 acres of land in Bangalore for the benefit of the people of North Karnataka who live in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X