ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಐದು ವರ್ಷದಲ್ಲಿ 3,515 ರೈತರ ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28 : ಕರ್ನಾಟಕದಲ್ಲಿ 2013ರ ಏಪ್ರಿಲ್‌ನಿಂದ 2017ರ ನವೆಂಬರ್ ತನಕ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆಯೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇದನ್ನು ಹೇಳುತ್ತಿವೆ.

ರೈತಗೀತೆಗೆ ಅವಮಾನ, ಸಚಿವ ಮಹದೇವಪ್ಪಗೆ ವೇದಿಕೆಯಲ್ಲೇ ಅನ್ನದಾತರ ತರಾಟೆರೈತಗೀತೆಗೆ ಅವಮಾನ, ಸಚಿವ ಮಹದೇವಪ್ಪಗೆ ವೇದಿಕೆಯಲ್ಲೇ ಅನ್ನದಾತರ ತರಾಟೆ

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಚರ್ಚೆ ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ ಕೃಷಿ ಇಲಾಖೆ ಅಂಕಿ ಅಂಶಗಳನ್ನು ನೀಡಿದೆ. 2008ರ ಏಪ್ರಿಲ್‌ನಿಂದ 2012ರ ತನಕ 1,125 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜಕೀಯ ಹಾಕ್ಯಾಟದಲ್ಲಿ ಹುಗಿದು ಹೋಗದಿರಲಿ ರೈತರ ಹೋರಾಟರಾಜಕೀಯ ಹಾಕ್ಯಾಟದಲ್ಲಿ ಹುಗಿದು ಹೋಗದಿರಲಿ ರೈತರ ಹೋರಾಟ

3,515 farmers committed suicide in Karnataka in 5 years

ಸತತ ಬರಗಾಲ, ಬೆಳೆ ವಿಫಲವಾದ ಹಿನ್ನಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಹೆಚ್ಚಾಗಿದೆ. 2013ರ ಏಪ್ರಿಲ್‌ನಿಂದ 2017ರ ನವೆಂಬರ್ ತನಕ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡ

3,515 ರೈತರ ಆತ್ಮಹತ್ಯೆಯಲ್ಲಿ 2,525 ಪ್ರಕರಣಗಳು ಬರಗಾಲ ಮತ್ತು ಬೆಳೆ ವಿಫಲವಾಗಿದ್ದರಿಂದ ಸಂಭವಿಸಿದೆ ಎಂದು ಕೃಷಿ ಇಲಾಖೆ ಒಪ್ಪಿಕೊಂಡಿದೆ. ಏಪ್ರಿಲ್ 2017ರಿಂದ ನವೆಂಬರ್ 2017ರ ತನಕ ರಾಜ್ಯದಲ್ಲಿ ಉತ್ತಮವಾದ ಮಳೆಯಾಗಿದೆ. 624 ರೈತರು ಆತ್ಮಹತ್ಯೆಗೆ ಈ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

2015-16ರಲ್ಲಿ ಅತೀ ಹೆಚ್ಚು ಅಂದರೆ 1,483 ರೈತ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಅತೀ ಕಡಿಮೆ ಎಂದರೆ 2013-14ರಲ್ಲಿ 106 ಪ್ರಕರಣಗಳು ದಾಖಲಾಗಿವೆ.

ಸರ್ಕಾರ ರೈತ ಆತ್ಮಹತ್ಯೆ ತಡೆಯಲು ಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕುಗಳು ಬಲವಂತವಾಗಿ ಸಾಲ ವಸೂಲಿ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಖಾಸಗಿ ವ್ಯಕ್ತಿಗಳು ಬಲವಂತದಿಂದ ಸಾಲ ವಸೂಲು ಮಾಡುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

2015ರಲ್ಲಿ ರಾಣೆಬೆನ್ನೂರು ತಾಲೂಕಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೀಡುವ ಪರಿಹಾರದ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ.

English summary
Karnataka Agriculture Department said As many as 3,515 farmers committed suicide between April 2013 and November 2017 in state. Out of which 2,525 were due to drought and farm failure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X