ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಎಸ್ ಅಧಿಕಾರಿ ಸುಧಾ ನಿವಾಸದಲ್ಲಿ ಸಿಕ್ಕ ಚಿನ್ನ, ಬೆಳ್ಳಿ ಎಷ್ಟು?

|
Google Oneindia Kannada News

ಬೆಂಗಳೂರು, ನವೆಂಬರ್ 08: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ನಿವಾಸದ ಮೇಲೆ ಎಸಿಬಿ ಪೊಲೀಸರು ಶನಿವಾರ ದಾಳಿ ಮಾಡಿದ್ದರು. ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ಮಾಡಲಾಗಿತ್ತು.

ಡಾ. ಬಿ. ಸುಧಾ ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಹಣಪತ್ತೆಯಾಗಿತ್ತು. ಎಸಿಬಿ ಕೈಗೆ ಸಿಕ್ಕ ಆಸ್ತಿಗಳ ಮೌಲ್ಯ ಎಷ್ಟು ಎಂಬುದು ಈಗ ಬಹಿರಂಗವಾಗಿದೆ. ಸುಧಾ ಅವರ ಮನೆಯಲ್ಲಿಯೇ 36 ಲಕ್ಷ ರೂ. ಹಣ ಸಿಕ್ಕಿದೆ.

ಉಡುಪಿಯಲ್ಲೂ ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿಉಡುಪಿಯಲ್ಲೂ ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಸುಧಾ ಅವರ ಕೊಡಿಗೆಹಳ್ಳಿ ಮನೆ, ಯಲಹಂಕದಲ್ಲಿರುವ ಫ್ಲ್ಯಾಟ್, ಶಾಂತಿ ನಗರದಲ್ಲಿರುವ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಚೇರಿಯ ಆಡಳಿತಾಧಿಕಾರಿ ಕಚೇರಿ ಮೇಲೆ ದಾಳಿ ನಡೆದಿತ್ತು.

ಬೆಂಗಳೂರು: ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಬೆಂಗಳೂರು: ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

3.5 Kg Gold Seized From KAS Officer Sudha House

ಮೈಸೂರಿನ ಶ್ರೀರಾಂಪುರ, ಉಡುಪಿಯ ತೆಂಕ ಮಿಜಾರಿನಲ್ಲಿರುವ ಸುಧಾ ಅವರ ಪತಿಯ ನಿವಾಸದ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯನ್ನು ನಡೆಸಿದ್ದರು. 2013ರಿಂದ ಇತ್ತೀಚಿನ ತನಕ ಸುಧಾ ಅವರು ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದರು.

ಎಸಿಬಿ ದಾಳಿ; ಮಹಿಳಾ ಅಧಿಕಾರಿಗಳ ಬಳಿ 4.47 ಕೋಟಿ ಪತ್ತೆ ಎಸಿಬಿ ದಾಳಿ; ಮಹಿಳಾ ಅಧಿಕಾರಿಗಳ ಬಳಿ 4.47 ಕೋಟಿ ಪತ್ತೆ

ಕೆಲವು ತಿಂಗಳ ಹಿಂದೆ ಐಟಿ-ಬಿಟಿ ಇಲಾಖೆಯ ಪ್ರಧಾನ ಕಚೇರಿ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡಿದ್ದರು. ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಾಹಂ ಜೂನ್ 18ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸುಧಾ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರನ್ನು ಸಲ್ಲಿಸಿದ್ದರು.

ನ್ಯಾಯಾಲಯ ಈ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ಸೂಚನೆ ನೀಡಿತ್ತು. ಆಗಸ್ಟ್ 27ರಂದು ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆಯನ್ನು ಆರಂಭಿಸಲಾಗಿತ್ತು. ಈ ಎಫ್‌ಐಆರ್ ಅನ್ವಯ ಶನಿವಾರ ಸುಧಾ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು.

Recommended Video

BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada

ಸುಧಾ ಅವರ ನಿವಾದಲ್ಲಿ ಎಸಿಬಿ ಅಧಿಕಾರಿಗಳು 3.5 ಕೆಜಿ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. 250 ಕೋಟಿ ರೂ. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.

English summary
ACB officials seized 3.5 kg gold, 7 kg silver, Rs.36 lakh cash and property papers worth Rs.250 crore from KAS officer Dr. B. Sudha house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X