ಪಿಯು ಪತ್ರಿಕೆ ಸೋರಿಕೆ : ಕಿಂಗ್‌ಪಿನ್ ಶಿವಕುಮಾರ ಸ್ವಾಮಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಮೇ 03 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್ ಪಿನ್ ಸಿಕ್ಕಿ ಬಿದ್ದಿದ್ದಾನೆ. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಶಿವಕುಮಾರ ಸ್ವಾಮಿಯನ್ನು ಬಂಧಿಸಿದ್ದಾರೆ.

ಮಂಗಳವಾರ ತಮಿಳುನಾಡಿನಲ್ಲಿ ಶಿವಕುಮಾರ ಸ್ವಾಮಿ ಅಲಿಯಾಸ್ ಶಿವಕುಮಾರಯ್ಯ ಅಲಿಯಾಸ್ ಶಿವಕುಮಾರ್ ಗೌಡ ಅಲಿಯಾಸ್ ಟೊಮೆಟೋ ಸೇರಿದಂತೆ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ. [ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?] ಶಿವಕುಮಾರ್ ಟೊಮೆಟೋ ಗುಪ್ತನಾಮದಲ್ಲಿ ವ್ಯವಹಾರ ಮಾಡುತ್ತಿದ್ದ.

shivakumar swamy

ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಯಾದ ಶಿವಕುಮಾರ ಸ್ವಾಮಿ ಮಾರ್ಚ್ 31ರಿಂದ ತಲೆಮರೆಸಿಕೊಂಡಿದ್ದ. ಮಂಗಳೂರು, ಕೇರಳ ಸೇರಿದಂತೆ ವಿವಿಧ ಕಡೆ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ಶಿವಕುಮಾರಸ್ವಾಮಿ ಬಂಧನಕ್ಕಾಗಿ ಐದು ತಂಡಗಳನ್ನು ರಚನೆ ಮಾಡಿದ್ದರು. [ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಆರೋಪಿಗಳನ್ನು ಬಂಧಿಸಲಾಗಿದೆ. ಶಿವಕುಮಾರ್ ಮತ್ತು ಇತರ ಮೂವರ ಬಂಧನದಿಂದಾಗಿ 14 ಆರೋಪಿಗಳನ್ನು ಬಂಧಿಸಿದಂತಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳು ಶಿವಕುಮಾರ ಸ್ವಾಮಿಯಿಂದ ಪತ್ರಿಕೆ ಖರೀದಿ ಮಾಡಿದ್ದೆವು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]

ಪತ್ರಿಕೆ ಬಯಲು ಮಾಡುವುದೇ ಈತನ ಕೆಲಸ : ಶಿವಕುಮಾರಸ್ವಾಮಿಗೆ ಪ್ರಶ್ನೆ ಪತ್ರಿಕೆ ಬಯಲು ಮಾಡುವುದೇ ಕೆಲಸವಾಗಿತ್ತು. 2008ರಲ್ಲಿ ಪತ್ರಿಕೆ ಬಯಲು ಮಾಡಿ ಸಿಕ್ಕಿಬಿದ್ದಿದ್ದ ಈತ ಜೈಲು ಸೇರಿ ಹೊರಬಂದಿದ್ದ. ಚಾಣಾಕ್ಷನಾಗಿದ್ದ ಈತ ಹಲವು ಕಡೆ ಹಲವು ಹೆಸರುಗಳನ್ನು ಹೇಳಿಕೊಂಡು ಆಶ್ರಯ ಪಡೆಯುತ್ತಿದ್ದ.

ಇಬ್ಬರಿಗಾಗಿ ಹುಡಕಾಟ : 'ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ ಸ್ವಾಮಿ ಅವರ ಸಂಬಂಧಿಕರಾದ ಕುಮಾರಸ್ವಾಮಿ ಮತ್ತು ದಿನೇಶ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ' ಎಂದು ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪತ್ರಿಕೆ ಖರೀದಿ ಮಾಡಿದ್ದರು : ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮಂಜುನಾಥ್, ಓಬಳರಾಜು ಹಾಗೂ ರುದ್ರಪ್ಪ ಅವರು ಶಿವಕುಮಾರ ಸ್ವಾಮಿಯಿಂದ ಪತ್ರಿಕೆ ಖರೀದಿ ಮಾಡಿದ್ದೇವೆ ಎಂದು ಹೇಳಿದ್ದರು. ಶಿವಕುಮಾರ ಸ್ವಾಮಿಗೆ ಪತ್ರಿಕೆಯನ್ನು ನೀಡಿದವರು ಯಾರು? ಎಂಬುದು ವಿಚಾರಣೆಯಿಂದ ಬಹಿರಂಗವಾಗಬೇಕಿದೆ. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]

ಪರೀಕ್ಷೆ ರದ್ದಾಗಿತ್ತು : 2016ರ ಮಾರ್ಚ್ 21ರಂದು ರಸಾಯನಶಾಸ್ತ್ರ ಪರೀಕ್ಷೆ ಮುಗಿದಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿತ್ತು. ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ನಂತರ ಏ.12ರಂದು ಮರು ಪರೀಕ್ಷೆ ನಡೆಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Criminal Investigation Department (CID) police have arrested 2nd PUC Chemistry question paper leak scam Kingpin Shivakumar Swamy in on May 03, 2016. Shivakumara Swamy (66) a resident of Nandini Layout, was picked up from Garvebhavipalya on Hosur Road.
Please Wait while comments are loading...