ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರಿಗೆ 25% 'ಸುಲಭ' ರಿಯಾಯಿತಿ

ಈ ಹಿಂದೆ ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಶೇಕಡಾ 25 ದರ ಕಡಿತ ಪಡೆದುಕೊಳ್ಳಲು ಕೆಎಸ್ಆರ್‌ಟಿಸಿ ಕಡೆಯಿಂದ ಪಾಸ್ ತೆಗೆದುಕೊಳ್ಳಬೇಕಾಗಿತ್ತು. ಆದರೆ ಇನ್ನು ಮುಂದೆ ಪಾಸ್ ಪಡೆಯಬೇಕಾಗಿಲ್ಲ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು ಇನ್ನು ಮುಂದೆ ಆರಾಮವಾಗಿ ತಮಗಿರುವ ಟಿಕೆಟ್ ದರ ಕಡಿತ ಸೌಲಭ್ಯ ಪಡೆಯಬಹುದು. ಈ ಹಿಂದೆ ಶೇಕಡಾ 25 ದರ ಕಡಿತ ಪಡೆದುಕೊಳ್ಳಲು ಕೆಎಸ್ಆರ್‌ಟಿಸಿ ಕಡೆಯಿಂದ ಪಾಸ್ ತೆಗೆದುಕೊಳ್ಳಬೇಕಾಗಿತ್ತು. ಆದರೆ ಇನ್ನು ಮುಂದೆ ಪಾಸ್ ಪಡೆಯಬೇಕಾಗಿಲ್ಲ.

ನಿಮ್ಮ ವಯಸ್ಸನ್ನು ನಮೂದಿಸಿರುವ ಯಾವುದೇ ಸರಕಾರಿ ಗುರುತು ಚೀಟಿಗಳನ್ನು ತೋರಿಸಿ ಹಿರಿಯ ನಾಗರಿಕರು ಶೇಕಡಾ 25 ದರ ಕಡಿತವನ್ನು ಅನುಭವಿಸಬಹುದು. 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ನಗರ ಸಾರಿಗೆ, ಸಾಮಾನ್ಯ, ವೇಗದೂತ, ಸೆಮಿ ಡಿಲಕ್ಸ್ ಮತ್ತು ರಾಜಹಂಸ ಬಸ್ಸುಗಳಲ್ಲಿ ಹಿರಿಯ ನಾಗರಿಕರು ದರ ಕಡಿತ ಪಡೆಯಬಹುದು. [ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ]

25% Easy ticket concession for Senior Citizens in KSRTC buses

ಯಾವೆಲ್ಲಾ ದಾಖಲೆಗಳು ಸಾಕು?

ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿರುವ ಯಾವುದೇ ಸರಕಾರಿ ಗುರುತು ಚೀಟಿಗಳನ್ನು ತೋರಿಸಿ ನೀವು ಟಿಕೆಟ್ ದರ ರಿಯಾಯಿತಿ ಪಡೆದುಕೊಳ್ಳಬಹುದು. ಪಾಸ್ಪೋರ್ಟ್, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ನರೇಗಾ ಕಾರ್ಡ್, ಕೆಎಸ್ಆರ್‌ಟಿಸಿ ಕೊಡುವ ಹಿರಿಯ ನಾಗರಿಕರ ಗುರುತಿನ ಚೀಟಿ ಹಾಗೂ ಕರ್ನಾಟಕ ಮತ್ತು ಭಾರತ ಸರಕಾರದ ಯಾವುದೇ ಸರಕಾರಿ ಸಂಸ್ಥೆಗಳು ಕೊಡುವ ಕಾರ್ಡನ್ನು ತೋರಿಸಿ ಈ ರಿಯಾಯಿತಿ ಪಡೆದುಕೊಳ್ಳಬಹುದು. [ಕಾರ್ಮಿಕನ ಕಾಡಿಸಿ ಬಸ್ ಕಳೆದುಕೊಂಡ ಕೆಎಸ್ಆರ್‌ಟಿಸಿ!]

25% Easy ticket concession for Senior Citizens in KSRTC buses

ಕಾರ್ಡಿನಲ್ಲಿ ಕಡ್ಡಾಯವಾಗಿ ಮನೆಯ ವಿಳಾಸ ಮತ್ತು ಹುಟ್ಟಿದ ದಿನಾಂಕ ನಮೂದಾಗಿರಬೇಕು ಅಷ್ಟೆ. ಸಿಂಪಲ್..

English summary
Senior citizens of Karnataka, aged 60 years and above, can easily get 25 % concession in ticket fare of Karnataka State Road Transport Corporation’s (KSRTC) buses by showing any Identity Cards issued by Government of India or Karnataka State government having date of birth on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X