ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕರ್ನಾಟಕದಲ್ಲಿ ಹೊಸದಾಗಿ 23 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಮೇ 16: ಕರ್ನಾಟಕದಲ್ಲಿ ಹೊಸದಾಗಿ 23 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಇದುವರೆಗೂ 36 ಮಂದಿ ಮೃತಪಟ್ಟಿದ್ದಾರೆ.

Recommended Video

ಮೋದಿ ವಿರುದ್ಧ ಚಿಕ್ಕ ಮಗು ಮಾತಾಡಿದ್ದು ಕೇಳಿ ಎಲ್ಲರೂ ಶಾಕ್..! | Narendra Modi

ಬೆಂಗಳೂರಿನಲ್ಲಿ 14, ಹಾಸನ 3, ಬಳ್ಳಾರಿ 1, ಧಾರವಾಡ 1, ಉಡುಪಿ 1, ಮಂಡ್ಯ 1, ಬಳ್ಳಾರಿ 1, ಬಾಗಲಕೋಟೆ 1 ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ 1056 ಪ್ರಕರಣಗಳಿದ್ದವು ಇಂದು 1079ಕ್ಕೆ ಏರಿಕೆಯಾಗಿದೆ.

ಶಿವಾಜಿನಗರದಲ್ಲಿ ಮತ್ತೆ 11 ಪಾಸಿಟಿವ್ ಕೇಸ್ ಪತ್ತೆಶಿವಾಜಿನಗರದಲ್ಲಿ ಮತ್ತೆ 11 ಪಾಸಿಟಿವ್ ಕೇಸ್ ಪತ್ತೆ

ಬೆಂಗಳೂರಿನಲ್ಲಿ ಶುಕ್ರವಾರ 202 ಪ್ರಕರಣಗಳಿದ್ದು ಅದು 216ಕ್ಕೆ ಹೆಚ್ಚಳವಾಗಿದೆ.ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಗೆ ಇನ್ನಷ್ಟು ಭೀತಿ ಹೆಚ್ಚಾಗಿದೆ. ಇನ್ನು ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಿಬಿಟ್ಟರೆ ಸಮುದಾಯಕ್ಕೆ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದೆ.

ಶುಕ್ರವಾರ ಒಟ್ಟು 63 ಸೋಂಕಿತ ಪ್ರಕರಣಗಳು ಕಂಡಬಂದಿದ್ದವು. ಈಗಾಗಲೇ ಶನಿವಾರ ಬೆಳಗ್ಗೆಯೇ 23 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕೊರೊನಾದಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 494ಕ್ಕೇರಿದೆ.

ಧಾರವಾಡದಲ್ಲಿ ಮಾವಿನಕಾಯಿ ಲಾರಿ ಚಾಲಕನಿಗೆ ಸೋಂಕು ತಗುಲಿದೆ. ಆತ ಮಾವಿನಕಾಯಿ ಲಾರಿಯಲ್ಲಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ, ನಗರದ ಓಂ ಬಡಾವಣೆಯ ನಿವಾಸಿಯಾಗಿದ್ದಾರೆ.

23 Fresh Coronavirus Cases Detected In Karnataka

ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ 86 ಪ್ರಕರಣಗಳಿವೆ. ಧಾರವಾಡದಲ್ಲಿ ಶುಕ್ರವಾರ 21 ಪ್ರಕರಣಗಳಿದ್ದವು. ಹಾಸನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ.

English summary
Karnataka Health And Family Affairs Department Has Given Information That 23 Coronavirus Fresh Cases Detected In Karnataka. Total Number Of Corona Cases Rise To 1079.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X