ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರ: ಹಡಗು ಮುಳುಗಡೆ, ತಪ್ಪಿದ ಭಾರೀ ಅನಾಹುತ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್ 28: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದ ವೇಳೆ ಇಲ್ಲಿನ ಕಾಸರಗೋಡು ಅಳಿವೆ ತೀರದಲ್ಲಿ ಯಾಂತ್ರಿಕೃತ ಹಡಗು ಮುಳುಗಡೆಯಾಗಿದೆ.

ಅಳಿವೆಯಲ್ಲಿನ ಹೂಳಿನಿಂದಾಗಿ ಯಾಸಿನ್ ಹೆಸರಿನ ಬೋಟ್ ಮುಳುಗಡೆಯಾಗುತ್ತಿರುವುದನ್ನು ಗಮನಿಸಿದ ಇತರೆ ಮೀನುಗಾರರು ಮೂರು ಬೋಟ್ ಗಳ ಮೂಲಕ ತೆರಳಿ ಸಮುದ್ರ ಪಾಲಾಗುತ್ತಿದ್ದ 23 ಮೀನುಗಾರರನ್ನು ರಕ್ಷಿಸಿದ್ದಾರೆ.

23 fishermen rescued in boat capsizes in Alivebagilu at Karwar

ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಈ ಅವಘಡ ಸಂಭವಿಸಿದೆ. ಮೀನುಗಾರಿಕೆ ಇಲಾಖೆಗೆ ಈ ಹಿಂದೆ ಅಳಿವೆಯಲ್ಲಿನ ಹೂಳನ್ನು ತೆಗೆಯುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿ ಎಸ್.ಎಸ್‌.ನಕುಲ್ ಸೂಚಿಸಿದ್ದರು.

ಆದರೆ, ಇಲಾಖೆಯ ನಿರ್ಲಕ್ಷ್ಯದಿಂದ ಪ್ರತೀ ಬಾರಿಯು ಈ ಅಳಿವೆಯಲ್ಲಿ ಬೋಟುಗಳು ಮುಳುಗಡೆಯಾಗುತ್ತಿವೆ. ಈಗಾಗಲೇ ಅನೇಕ ಬಾರಿ‌ ಇಂಥ ಘಟನೆ ನಡೆದರೂ ಕೂಡ ಇಲಾಖೆ ಬೇಜವಾಬ್ದಾರಿ ಮೆರೆದಿದೆ.

English summary
A Yasin boat capsized after hitting a mound of sand during deep-sea fishing off Alivebagilu at Karwar on Sept 27. 23 fishermen who were on the boat were rescued by another fishing boat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X