ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್‌-ಕೆ ಪರೀಕ್ಷೆ ಬರೆದ ರಾಜ್ಯದ 22 ಸಾವಿರ ವಿದ್ಯಾರ್ಥಿಗಳು

By Nayana
|
Google Oneindia Kannada News

ಬೆಂಗಳೂರು, ಮೇ 14: ಕಾನೂನು ಕೋರ್ಸ್‌ಗಳು ಮತ್ತು ಖಾಸಗಿ ಕಾಲೇಜಿನಲ್ಲಿರುವ ಎಂಜಿನಿಯರಿಂಗ್ ಗಳ ಪ್ರವೇಶಕ್ಕೆ ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಅಡ್ವಾನ್ಸ್‌ ಲೀಗಲ್‌ ಸ್ಟಡೀಸ್‌ ಆಯೋಜಿಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಭಾನುವಾರ ನಡೆದಿದೆ.

ರಾಜ್ಯದ 24 ನಗರಗಳು ಸೇರಿ ದೇಶದಲ್ಲಿ 137 ನಗರಗಳಲ್ಲಿ ಕಾಮೆಡ್‌-ಕೆ ಪರೀಕ್ಷೆ ನಡೆಯಿತು. ದೇಶದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ, 76,414 ವಿದ್ಯಾರ್ಥಿಗಳ ಪೈಕಿ 62,306 ವಿದ್ಯಾರ್ಥಿಗಳು ಮತ್ತು ರಾಜ್ಯದಲ್ಲಿ 108 ಕೇಂದ್ರದಲ್ಲಿ 21,889 ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಪರೀಕ್ಷೆ ಬರೆದಿದ್ದಾರೆ.

ಸಿಇಟಿ ದಾಖಲಾತಿ ಪರಿಶೀಲನೆಗೆ ರಾಜ್ಯಾದ್ಯಂತ 16 ನೋಡಲ್ ಕೇಂದ್ರ ಸಿಇಟಿ ದಾಖಲಾತಿ ಪರಿಶೀಲನೆಗೆ ರಾಜ್ಯಾದ್ಯಂತ 16 ನೋಡಲ್ ಕೇಂದ್ರ

ನಗರದ 48 ಪರೀಕ್ಷಾ ಕೇಂದ್ರಗಳ ಪೈಕಿ 5 ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳು ಲಾಗ್‌ಇನ್‌ ಮಾಡುವುದು ತಡವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪರೀಕ್ಷಾ ಸಮಯವನ್ನು ವಿಸ್ತರಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಒಬ್ಬ ವಿದ್ಯಾರ್ಥಿ ಮೊಬೈಲ್‌ ಫೋನ್‌ ಬಳಕೆ ಮಾಡುವ ಮೂಲಕ ನಕಲು ಮಾಡಲು ಪ್ರಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಡಿಬಾರ್‌ ಮಾಡಲಾಗಿದೆ.

22K students attend COMED-K exam across the state

ತಾತ್ಕಾಲಿಕ ಸರಿ ಉತ್ತರಗಳನ್ನು ಮೇ 17ರಂದು ಕಾಮೆಡ್‌-ಕೆ https://www.comedk.org/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಅಂತಿಮ ಸರಿ ಉತ್ತರವನ್ನು 25ರಂದು ಪ್ರಕಟಿಸಲಿದೆ. 28ರಂದು ಸ್ಕೋರ್‌ ಕಾರ್ಡ್‌ ದೊರೆಯಲಿದೆ. ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಕಾಮೆಡ್‌-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ. ಎನ್‌. ಕುಮಾರ್ ತಿಳಿಸಿದ್ದಾರೆ.

English summary
Around 22,000 students were attended entrance exams for engineering courses conducted by COMED-K on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X