ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರಲ್ಲಿ ಕೋಡಿ ಶ್ರೀಗಳದ್ದಾಯಿತು, ಬೇರೆ ಭವಿಷ್ಯಗಳೆಲ್ಲಾ ನಿಜವಾಯಿತಾ?

|
Google Oneindia Kannada News

Recommended Video

2018ರಲ್ಲಿ ರಾಜ್ಯ ರಾಜಕೀಯದ ಬಗ್ಗೆ ಜ್ಯೋತಿಷಿಗಳು ನುಡಿದ ಭವಿಷ್ಯದ ವಿಮರ್ಶೆ | Oneindia Kannada

2018 ಮುಕ್ತಾಯಗೊಂಡು ಹೊಸವರ್ಷವನ್ನು ಬರಮಾಡಿಕೊಂಡಿದ್ದಾಗಿದೆ. ಆಗುಹೋಗುಗಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಹೆಸರುವಾಸಿಯಾಗಿರುವ ಕೋಡಿಮಠದ ಶ್ರೀಗಳು ಸೇರಿದಂತೆ, ಹಲವರು ಕಳೆದ ವರ್ಷ ಭವಿಷ್ಯವನ್ನು ನುಡಿದಿದ್ದರು.

ಕಳೆದ ವರ್ಷ ಎರಡೆರಡು ಬಾರಿ ಮೈಲಾರಲಿಂಗೇಶ್ವರನ ಸನ್ನಿಧಾನದಲ್ಲಿ ಭವಿಷ್ಯವನ್ನು ನುಡಿಯಲಾಗಿತ್ತು. ಇದರ ಜೊತೆಗೆ, ಇತರ ಜ್ಯೋತಿಷಿಗಳು ಸಿದ್ದಪುರುಷರು ಮುಂದಿನ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು.

2018ರಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯದ ಸತ್ಯಾಸತ್ಯತೆಯ ಅವಲೋಕನ2018ರಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯದ ಸತ್ಯಾಸತ್ಯತೆಯ ಅವಲೋಕನ

ಇವರೆಲ್ಲರೂ ಭವಿಷ್ಯ ನುಡಿಯುವುದಕ್ಕೆ ತಮ್ಮದೇ ಆದ ಲೆಕ್ಕಾಚಾರ, ಶಾಸ್ತ್ರವನ್ನು ಹೊಂದಿರುವಂತವರು. ಉದಾಹರಣೆಗೆ ಕೋಡಿಶ್ರೀಗಳು ತಾಳೇಗರಿ ಆಧಾರಿತವಾಗಿ ಭವಿಷ್ಯ ನುಡಿದರೆ, ಮೈಲಾರನ ಸನ್ನಿಧಾನದಲ್ಲಿ ಬಿಲ್ಲನ್ನೇರಿ ಕಾರ್ಣಿಕ ನುಡಿಯುವ ಪದ್ದತಿಯಿದೆ.

ಅರಸೀಕೆರೆ, ಹಾರನಹಳ್ಳಿ, ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಶ್ರೀಗಳು ಕಳೆದ ವರ್ಷ ನುಡಿದಿದ್ದ ಹಲವು ಭವಿಷ್ಯಗಳ ಸತ್ಯಾಸತ್ಯತೆಯನ್ನು ಅವಲೋಕಿಸಿದಾಗ, ಕೆಲವೊಂದು ನಿಜವಾಗಿತ್ತು, ಇನ್ನು ಕೆಲವು ಸತ್ಯಕ್ಕೆ ದೂರವಾಗಿದ್ದವು.

"ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ರಾಜ್ಯ ರಾಜಕೀಯದ ಬಗ್ಗೆ ಕೋಡಿಶ್ರೀಗಳು ಹೇಳಿದ್ದರು. ಅದರಂತೆ, ಬಿಜೆಪಿ, ಕಾಂಗ್ರೆಸ್ಸಿಗೆ ಹೆಚ್ಚಾಗಿ ಒಲಿದಿದ್ದ ಬೆಳೆಯನ್ನು ಪರರು (ಜೆಡಿಎಸ್) ಕೊಯ್ದುಕೊಳ್ಳಲಿದ್ದಾರೆ ಎಂದು ಅರ್ಥೈಸಲಾಗಿತ್ತು. ಅದರಂತೆಯೇ, ಎಚ್ ಡಿ ಕುಮಾರಸ್ವಾಮಿ ಸಿಎಂ ಆದರು. 2018ರಲ್ಲಿ, ಇತರರು ನುಡಿದ ಭವಿಷ್ಯಗಳೆಲ್ಲಾ ನಿಜವಾಯಿತಾ?

ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ

ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ

ಇನ್ನೇನು ಹದಿನೈದು ದಿನಗಳಲ್ಲಿ (ಡಿಸೆಂಬರ್ 19ರ ನಂತರ) ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಲಿದೆ. ಆದರೆ, ಇವೆಲ್ಲವೂ, ಕುಮಾರಸ್ವಾಮಿಯವರ ಕಾರ್ಯವೈಖರಿಯ ಮೇಲೆ ನಿಂತಿದೆ. ಮಂತ್ರಿಮಂಡಲದಲ್ಲಿ ಶಿಸ್ತು ಬರಬೇಕು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಐಕ್ಯಮತ್ಯ ಸಾಧನೆಯಾಗಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಅವರ ಸ್ಥಾನಕ್ಕೆ ತೊಂದರೆ ಬರುವ ಸಾಧ್ಯತೆಯಿದೆ. ಮಾರ್ಚ್ 27, 2019ರ ವರೆಗೆ ಸಮ್ಮಿಶ್ರ ಸರಕಾರವನ್ನು ಹೇಗೋ ಹಾಗೇ ನಡೆಸಿಕೊಂಡು ಹೋದರೆ, ನಂತರ ಇವರ ಕಾರ್ಯಸಾಧನೆ ಸುಲಭವಾಗುತ್ತದೆ - ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ.

59 ನೇ ವರ್ಷಕ್ಕೆ ನಿನಗೆ ಕಂಟಕವೊಂದು ಬಂದೆರಗುತ್ತದೆ

59 ನೇ ವರ್ಷಕ್ಕೆ ನಿನಗೆ ಕಂಟಕವೊಂದು ಬಂದೆರಗುತ್ತದೆ

'ನಿನಗೆ ರಾಜಯೋಗವಿದೆ, ಆದರೆ 59 ನೇ ವರ್ಷಕ್ಕೆ ನಿನಗೆ ಕಂಟಕವೊಂದು ಬಂದೆರಗುತ್ತದೆ. ಅದರಿಂದ ಪಾರಾದರೆ ನೀನು ದೀರ್ಘಕಾಲ ಬದುಕುತ್ತೀಯಾ'. ನಮ್ಮ ತಂದೆ ನನ್ನ ಬಗ್ಗೆ ಈ ರೀತಿ ಭವಿಷ್ಯ ನುಡಿದಿದ್ದಾರೆ ಎಂದು ಆಗಾಗ ಆಪ್ತರ ಬಳಿ ಅನಂತ್ ಕುಮಾರ್ ಹೇಳುತ್ತಿದ್ದರು. ಆದರೆ ಕಾಕತಾಳೀಯವೋ ಏನೋ, ಅವರ ತಂದೆ ನುಡಿದ ಭವಿಷ್ಯವೇ ನಿಜವಾದಂತಾಗಿದೆ. ಸರಿಯಾಗಿ 59ನೇ ವರ್ಷಕ್ಕೇ ಅವರು ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಅಸುನೀಗಿದ್ದಾರೆ.

59 ಕ್ಕೆ ಕಂಟಕ: ಅನಂತ್ ತಂದೆ ನುಡಿದಿದ್ದ ಭವಿಷ್ಯ ನಿಜವಾಯ್ತು!59 ಕ್ಕೆ ಕಂಟಕ: ಅನಂತ್ ತಂದೆ ನುಡಿದಿದ್ದ ಭವಿಷ್ಯ ನಿಜವಾಯ್ತು!

ಬಳ್ಳಾರಿ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭ

ಬಳ್ಳಾರಿ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭ

ಬಳ್ಳಾರಿ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಂಡೂರಿನ ದಟ್ಟಾರಣ್ಯದಲ್ಲಿರುವ ಅನ್ನಪೂರ್ಣೇಶ್ವರಿ ಮಠಕ್ಕೆ ಹೋಗಿದ್ದ ಸಚಿವ ಡಿ ಕೆ ಶಿವಕುಮಾರ್, ದಿಗಂಬರ ತಾತಯ್ಯನವರ ಬಳಿ, ಚುನಾವಣೆಯಲ್ಲಿ ಗೆಲುವು ನಮ್ಮದೋ ಅಥವಾ ಶ್ರೀರಾಮುಲು ಅವರದ್ದೋ ಎಂದು ಕೇಳಲು ಹೋಗಿದ್ದರು. ಗೆಲುವು ನಿಮ್ಮದೇ ಎಂದು ತಾತಯ್ಯ ಭವಿಷ್ಯ ನುಡಿದು, ಹರಸಿ ಕಳುಹಿಸಿದ್ದರು ಎಂದು ವರದಿಯಾಗಿತ್ತು.

ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ಕಾರ್ಣಿಕ ನುಡಿಸುವ ಪದ್ದತಿ

ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ಕಾರ್ಣಿಕ ನುಡಿಸುವ ಪದ್ದತಿ

ಆಯುಧಪೂಜೆಯ ದಿನದಂದು ಹಾವೇರಿ ಜಿಲ್ಲೆಯ ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ಕಾರ್ಣಿಕ ನುಡಿಸುವ ಪದ್ದತಿಯಿದೆ. ಒಗಟಿನ ರೂಪದಲ್ಲಿ ಮತ್ತು ಒಂದು ವಾಕ್ಯದಲ್ಲಿ ಹೇಳುವ ಈ ಭವಿಷ್ಯವನ್ನು ಜನರು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ. ' ಸರ್ವರು ಸಂಪಲೆ ನಾಡೆಲ್ಲ ತಂಪಲೆ ಪರಾಕ್'. ಇದರರ್ಥ, ನಾಡಿನಲ್ಲಿ ಮಳೆಬೆಳೆ ಚೆನ್ನಾಗಿ ಇರಲಿದೆ, ಎಲ್ಲರೂ ಕ್ಷೇಮವಾಗಿ, ನೆಮ್ಮದಿಯಿಂದ ಬದುಕುತ್ತಾರೆ ಎಂದು ಅರ್ಥೈಸಲಾಗಿದೆ. ಹಾವೇರಿ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಗೊರವಯ್ಯ ನುಡಿದ ಭವಿಷ್ಯ ಇದಾಗಿದೆ. ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ.

ಆಯುಧಪೂಜೆಯ ದಿನದಂದು ಹೊರಬಿದ್ದ ಮೈಲಾರಲಿಂಗೇಶ್ವರ ಭವಿಷ್ಯವಾಣಿ ಆಯುಧಪೂಜೆಯ ದಿನದಂದು ಹೊರಬಿದ್ದ ಮೈಲಾರಲಿಂಗೇಶ್ವರ ಭವಿಷ್ಯವಾಣಿ

ಆನಕೊಂಡ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ

ಆನಕೊಂಡ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ

ಶ್ರಾವಣ ಮಾಸದ ಕಡೆ ಸೋಮವಾರವಾದಂದು ಆನಕೊಂಡ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿ ದುರ್ಗಾಂಬಿಕಾ ದೇವಿ ಹಾಗೂ ಸುತಮುತ್ತಲಿನ ಹದಿಮೂರಕ್ಕೂ ಹೆಚ್ಚು ದೇವತಗಳ ಸಮ್ಮುಖದಲ್ಲಿ ಕಾರಣಿಕ ನುಡಿಯಲಾಗಿತ್ತು. 'ರಾಮ ರಾಮ ಎಂದು ನುಡಿದೀತಲೇ ಶೃಂಗಾರದ ವನಕೆ ಆನೆ ಕಿರೀಟ ಇಟ್ಟೀತಲೇ ಮಾತಾಯಿ ಕೊಡಕೆ ನೀರು ಹಾಕಾಳಲೇ ದೊಡ್ಡವರ ಮನೆ ಮೇಲೆ ಕರೆ ಅರಿಬಿ ಬೀಸಿತಲೇ ಎಚ್ಚರ' ಎನ್ನುವ ಕಾರಣಿಕ ನುಡಿಯಲಾಗಿತ್ತು.

ಸಿದ್ದರಟ್ಟಿ ಸುಡುಗಾಡು ಸಿದ್ಧರು ನುಡಿದ ಭವಿಷ್ಯ

ಸಿದ್ದರಟ್ಟಿ ಸುಡುಗಾಡು ಸಿದ್ಧರು ನುಡಿದ ಭವಿಷ್ಯ

ಎಚ್.ಡಿ. ಕುಮಾರಸ್ವಾಮಿ ಕುರ್ಚಿಯನ್ನು ಯಾರು ಅಲುಗಾಡಿಸಲು ಆಗಲ್ಲ. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಿದ್ದರಟ್ಟಿ ಸುಡುಗಾಡು ಸಿದ್ಧರು ಭವಿಷ್ಯ ನುಡಿದಿದ್ದರು. ಹಾಸನದ ಚನ್ನರಾಯಪಟ್ಟಣ ತಾಲೂಕಿನ ಸಿದ್ದರ ಹಟ್ಟಿ ಗ್ರಾಮದಲ್ಲಿರುವ ಸಿದ್ದರು, ಈ ಮುಂಚೆ ಭವಿಷ್ಯ ನುಡಿದು, ಏಪ್ರಿಲ್‌ ತಿಂಗಳಿನಲ್ಲಿ ಕುಮಾರಸ್ವಾಮಿ ಅವರು ಮಖ್ಯಮಂತ್ರಿಯಾಗುತ್ತಾರೆ ಎಂದಿದ್ದರು. ಈಗ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅನೇಕ ತೊಡರುಗಳು ಬಂದರೂ, ಅವರ ಸಿಎಂ ಸ್ಥಾನ ಉಳಿಯಲಿದೆ ಎಂದಿದ್ದರು.

ಮುಂದಿನ ಐದು ವರ್ಷಕ್ಕೆ ಕುಮಾರಸ್ವಾಮಿಯೇ ಸಿಎಂ: ಸಿದ್ದರುಮುಂದಿನ ಐದು ವರ್ಷಕ್ಕೆ ಕುಮಾರಸ್ವಾಮಿಯೇ ಸಿಎಂ: ಸಿದ್ದರು

ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳು

ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳು

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಸಹೋದರರು ಭೇಟಿಯಾದ ಆರು ತಿಂಗಳ ನಂತರ, ಕುಮಾರಸ್ವಾಮಿ ಆಪ್ತರಿಗೆ ನಾಗಸಾಧುಗಳು ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದರು. ರಾಜ್ಯದ ಅಪ್ರತಿಮ ದೈವಭಕ್ತ ಕುಟುಂಬವಾದ ದೇವೇಗೌಡರಿಗೆ ಈ ಬಾರಿಯ ಚುನಾವಣೆ ಶುಭ ಸೂಚಕವಾಗಲಿದೆ ಎನ್ನುವ ಭವಿಷ್ಯ ಹೇಳಲಾಗಿತ್ತು.

ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ

ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ

ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದಲ್ಲಿ, 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದರು. ಆರಂಭದಲ್ಲಿ ಮೈಕ್ ಸಮಸ್ಯೆಯಿಂದ ಮತ್ತು ಅಲ್ಲಿ ನೆರೆದಿದ್ದ ಭಕ್ತರ ಗದ್ದಲದಿಂದಾಗಿ ಬೇರೆಯ ರೀತಿಯಲ್ಲಿ ಅರ್ಥೈಸಲಾಗಿತ್ತು. 'ಆಕಾಶಕ್ಕೆ ಗಿಣಿ ಕುಕ್ಕಿ ಕುಂತಲೇ ಪರಾಕ್' ಎನ್ನುವ ಕಾರಣಿಕ ಎಂದು ಹೇಳಲಾಗಿತ್ತು.

'ದೊಡ್ಡವರ ಮನೆ ಮೇಲೆ ಕರೆ ಅರಿಬಿ ಬೀಸಿತಲೇ' ಕಾರ್ಣಿಕನ ಎಚ್ಚರದ ನುಡಿ 'ದೊಡ್ಡವರ ಮನೆ ಮೇಲೆ ಕರೆ ಅರಿಬಿ ಬೀಸಿತಲೇ' ಕಾರ್ಣಿಕನ ಎಚ್ಚರದ ನುಡಿ

English summary
2018 overall prediction: At Mylara Lingeshwara temple and other astrologers on state politics, HD Kumaraswamy and other issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X