ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ ರಾಜಕೀಯ : ಮಾಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು?

|
Google Oneindia Kannada News

ಕೋಲಾರ, ಜನವರಿ 17 : ಕೋಲಾರ ಜಿಲ್ಲೆಯಲ್ಲಿ 2018ರ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಮಾಜಿ ಸಚಿವ ಎಸ್‌.ಎನ್.ಕೃಷ್ಣಯ್ಯ ಶೆಟ್ಟಿ ಅವರ ಕ್ಷೇತ್ರ ಮಾಲೂರಿನಲ್ಲಿ ಜೆಡಿಎಸ್ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ.

ಮಾಲೂರು ಕ್ಷೇತ್ರದ ಶಾಸಕರು ಜೆಡಿಎಸ್‌ನ ಕೆ.ಎಸ್.ಮಂಜುನಾಥ ಗೌಡ. 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ 57, 645 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ.

ದಲಿತರು ಕಾಂಗ್ರೆಸ್‌ಗೆ ಮತ ಹಾಕಬೇಡಿ: ಯಡಿಯೂರಪ್ಪದಲಿತರು ಕಾಂಗ್ರೆಸ್‌ಗೆ ಮತ ಹಾಕಬೇಡಿ: ಯಡಿಯೂರಪ್ಪ

ಕೆ.ಎಸ್.ಮಂಜುನಾಥ ಗೌಡ ಅವರ ಪತ್ನಿ ಆರಿದ್ರಾ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ್ದಾರೆ. ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳುಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

2013ರ ಚುನಾವಣೆಯಲ್ಲಿ ಎಸ್‌.ಎನ್.ಕೃಷ್ಣಯ್ಯ ಶೆಟ್ಟಿ ಅವರು ಮಾಲೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಅವರು ಬಿಜೆಪಿಗೆ ವಾಪಸ್ ಆಗಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು.

ಕೋಲಾರ ಅಸೆಂಬ್ಲಿ ಕದನ: ವರ್ತೂರು ಪ್ರಕಾಶ್ vs ಗೌರಮ್ಮಕೋಲಾರ ಅಸೆಂಬ್ಲಿ ಕದನ: ವರ್ತೂರು ಪ್ರಕಾಶ್ vs ಗೌರಮ್ಮ

6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರ ಕೋಲಾರ. ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಎರಡು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ವರ್ತೂರು ಪ್ರಕಾಶ್, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ತವರು ಕ್ಷೇತ್ರ ಕೋಲಾರ..

ಬಿಜೆಪಿ ಪ್ರಚಾರ ಆರಂಭ

ಬಿಜೆಪಿ ಪ್ರಚಾರ ಆರಂಭ

ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಜನವರಿ 14ರಂದು ಕ್ಷೇತ್ರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶ ನಡೆಯಿತು. ಕೃಷ್ಣಯ್ಯ ಶೆಟ್ಟಿ ಅವರು ಕ್ಷೇತ್ರದ ಅಭ್ಯರ್ಥಿಯಾಗುವುದು ಬಹುತೇಖ ಖಚಿತವಾಗಿದೆ.

ಪಕ್ಷೇತರರಾಗಿ ಸ್ಪರ್ಧಿಸಿದ್ದರು

ಪಕ್ಷೇತರರಾಗಿ ಸ್ಪರ್ಧಿಸಿದ್ದರು

2013ರ ಚುನಾವಣೆಯಲ್ಲಿ ಕೃಷ್ಣಯ್ಯ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕ್ಷೇತ್ರದಲ್ಲಿ ಸೋತಿದ್ದರು. ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಎಸ್‌.ಆರ್.ಕೃಷ್ಣಯ್ಯ ಶೆಟ್ಟಿ, ಎಚ್‌.ಎಂ.ಕೃಷ್ಣಯ್ಯ ಶೆಟ್ಟಿ ಎಂಬುವವರು ಕಣದಲ್ಲಿದ್ದರು. ಮೂವರು ಕೃಷ್ಣಯ್ಯ ಶೆಟ್ಟಿಗಳಿಂದಾಗಿ ಗೊಂದಲ ಉಂಟಾಗಿತ್ತು.

ಪ್ರಚಾರ ಆರಂಭಿಸಿದ್ದಾರೆ ಆರಿದ್ರಾ

ಪ್ರಚಾರ ಆರಂಭಿಸಿದ್ದಾರೆ ಆರಿದ್ರಾ

ಶಾಸಕ ಕೆ.ಎಸ್.ಮಂಜುನಾಥ ಗೌಡ ಅವರ ಪತ್ನಿ ಆರಿದ್ರಾ ಅವರು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಜನರ ಸಮಸ್ಯೆ ಆಲಿಸಲು ಪತಿಯ ಜೊತೆಗೆ ಗ್ರಾಮ ವಾಸ್ತವ್ಯ ಮಾಡಲು ಸಹ ತಯಾರಿ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯಾರು?

ಕಾಂಗ್ರೆಸ್ ಅಭ್ಯರ್ಥಿ ಯಾರು?

ಕಳೆದ ಬಾರಿ ಕ್ಷೇತ್ರದಿಂದ ಚನ್ನಕೇಶವ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಲಾಗುತ್ತದೆಯೇ? ಕಾದು ನೋಡಬೇಕು.

ಯಾರು ಪಡೆದ ಮತಗಳೆಷ್ಟು?

ಯಾರು ಪಡೆದ ಮತಗಳೆಷ್ಟು?

ಕೆ.ಎಸ್.ಮಂಜುನಾಥಗೌಡ (ಜೆಡಿಎಸ್) 57,645 ಮತಗಳನ್ನು ಪಡೆದಿದ್ದರು. ಎಸ್‌.ಎನ್.ಕೃಷ್ಣಯ್ಯ ಶೆಟ್ಟಿ (ಪಕ್ಷೇತರ) 38,876 ಮತ, ಚನ್ನಕೇಶವ (ಕಾಂಗ್ರೆಸ್) 20,159 ಮತಗಳನ್ನು ಪಡೆದಿದ್ದರು.

English summary
JDS and BJP kick start the 2018 assembly elections campaign in Malur assembly constituency, Kolar. K.S.Manjunatha Gowda (JDS) sitting MLA of the malur assembly constituency. Malur is the home town for former minister S.N. Krishnaiah Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X