ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕಾಲ : ಕರ್ನಾಟಕದಲ್ಲಿ ಹಲವು ಪಕ್ಷಗಳ ಉದಯ!

|
Google Oneindia Kannada News

ಬೆಂಗಳೂರು, ಜನವರಿ 02 : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಜೊತೆಗೆ ಹಲವು ಹೊಸ ಪಕ್ಷಗಳು ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

Recommended Video

ಶಂಕ್ರಣ್ಣನ ಕನಸು ಹೊತ್ತು ಆಟೋದಲ್ಲಿ ಬಂದ ಉಪೇಂದ್ರ | Filmibeat Kannada

2013ರ ಚುನಾವಣೆಯಲ್ಲಿ 6 ರಾಷ್ಟ್ರೀಯ, ಏಳು ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ, ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್‌ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ

ಈ ಬಾರಿಯ ಚುನಾವಣೆ ಸಮಯದಲ್ಲಿ ಮತ್ತಷ್ಟು ಹೊಸ ಪಕ್ಷಗಳು ಸ್ಥಾಪನೆಯಾಗಿವೆ, ಯಾಗಲಿವೆ. ಈಗಾಗಲೇ ಮೂರು ಹೊಸ ಪಕ್ಷಗಳು ಘೋಷಣೆಯಾಗಿವೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಕಣಕ್ಕಿಳಿಯಲಿದ್ದಾರೆ.

ಅಭ್ಯರ್ಥಿಗಳ ಘೋಷಣೆಗೆ ತಡೆ, ಏನಿದು ಅಮಿತ್ ಶಾ ಲೆಕ್ಕಾಚಾರ?ಅಭ್ಯರ್ಥಿಗಳ ಘೋಷಣೆಗೆ ತಡೆ, ಏನಿದು ಅಮಿತ್ ಶಾ ಲೆಕ್ಕಾಚಾರ?

ನಟ ಉಪೇಂದ್ರ, ಪೊಲೀಸ್ ಅಧಿಕಾರಿಯಾಗಿದ್ದ ಅನುಪಮಾ ಶೆಣೈ, ಕೋಲಾರ ಶಾಸಕ ವರ್ತೂರು ಪ್ರಕಾಶ್ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಜೆಡಿಯುನಿಂದ ಹೊರಬಂದಿರುವ ಶರದ್ ಯಾದವ್ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದು, ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಕರ್ನಾಟಕ ಚುನಾವಣೆ ಬಗ್ಗೆ ರಾಹುಲ್ - ಸಿದ್ದು ಫೋನ್ ಸಂಭಾಷಣೆಕರ್ನಾಟಕ ಚುನಾವಣೆ ಬಗ್ಗೆ ರಾಹುಲ್ - ಸಿದ್ದು ಫೋನ್ ಸಂಭಾಷಣೆ

ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ 2018ರ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಸಹ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸ ಹೊಂದಿದೆ.

ಕೆಪಿಜೆಪಿಯಿಂದ 224 ಕ್ಷೇತ್ರಗಳಲ್ಲಿ ಸ್ಪರ್ಧೆ

ಕೆಪಿಜೆಪಿಯಿಂದ 224 ಕ್ಷೇತ್ರಗಳಲ್ಲಿ ಸ್ಪರ್ಧೆ

ನಟ, ನಿರ್ದೇಶಕ ಉಪೇಂದ್ರ ಅವರು 'ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ' ಸ್ಥಾಪನೆ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುವುದಾಗಿ ಅವರು ಘೋಷಿಸಿದ್ದಾರೆ.

ಕೋಲಾರ ಶಾಸಕ ವರ್ತೂರು ಪ್ರಕಾಶ್

ಕೋಲಾರ ಶಾಸಕ ವರ್ತೂರು ಪ್ರಕಾಶ್

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ 'ನಮ್ಮ ಕಾಂಗ್ರೆಸ್' ಎಂಬ ಪಕ್ಷ ಸ್ಥಾಪನೆ ಮಾಡಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರಿಗಾಗಿ ಪಕ್ಷ ಸ್ಥಾಪನೆ ಮಾಡಲಾಗಿದೆ.

ಭಾರತೀಯ ಜನಶಕ್ತಿ ಕಾಂಗ್ರೆಸ್

ಭಾರತೀಯ ಜನಶಕ್ತಿ ಕಾಂಗ್ರೆಸ್

ಕೂಡ್ಲಗಿಯ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಎಷ್ಟು ಕ್ಷೇತ್ರದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ? ಎಂಬುದು ಇನ್ನೂ ತಿಳಿದುಬಂದಿಲ್ಲ.

ಸ್ವರಾಜ್ ಇಂಡಿಯಾ

ಸ್ವರಾಜ್ ಇಂಡಿಯಾ

ಆಮ್ ಆದ್ಮಿ ಪಕ್ಷದಿಂದ ಹೊರಬಂದಿದ್ದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ 'ಸ್ವರಾಜ್ ಇಂಡಿಯಾ' ಎಂಬ ಪಕ್ಷ ಸ್ಥಾಪಿಸಿದ್ದಾರೆ. ಸಾಹಿತಿ ದೇವನೂರು ಮಹದಾದೇವ, ಶಾಸಕ, ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಕರ್ನಾಟಕದಲ್ಲಿ ಈ ಸ್ವರಾಜ್ ಇಂಡಿಯಾದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಎಂ.ಪಿ.ನಾಡಗೌಡ

ಎಂ.ಪಿ.ನಾಡಗೌಡ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಹೊರಬಂದ ಶರದ್ ಯಾದವ್ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಎಂ.ಪಿ.ನಾಡಗೌಡ ಸೇರಿದಂತೆ ಹಲವು ಮುಖಂಡರು ಶರದ್ ಯಾದವ್ ಜೊತೆ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಚುನಾವಣೆಯಲ್ಲಿ ಈ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಕರ್ನಾಟಕ ಮಕ್ಕಳ ಪಕ್ಷ

ಕರ್ನಾಟಕ ಮಕ್ಕಳ ಪಕ್ಷ

2013ರ ಚುನಾವಣೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಗಳು 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಧ್ಯಕ್ಷ, ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಗೆಲುವು ಸಾಧಿಸಿದ್ದರು. ಈ ಬಾರಿ ಎಷ್ಟು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ? ಕಾದು ನೋಡಬೇಕು.

ಸರ್ವೋದಯ ಕರ್ನಾಟಕ ಪಕ್ಷ

ಸರ್ವೋದಯ ಕರ್ನಾಟಕ ಪಕ್ಷ

ಸರ್ವೋದಯ ಕರ್ನಾಟಕ ಪಕ್ಷದಿಂದ ಕಳೆದ ಚುನಾವಣೆಗೆ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಜಯಗಳಿಸಿದ್ದರು. ಈ ಬಾರಿ ಅವರು ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿರುವ ಪಕ್ಷಗಳ ವಿವರ

ರಾಜ್ಯದಲ್ಲಿರುವ ಪಕ್ಷಗಳ ವಿವರ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಪ್ರಮುಖವಾಗಿವೆ. ಉಳಿದಂತೆ ಸಮಾಜವಾದಿ ಪಕ್ಷದಿಂದ ಕಳೆದ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ ಗೆದ್ದು ರಾಜ್ಯದಲ್ಲಿ ಖಾತೆ ತೆರೆದಿದ್ದರು. ಚನ್ನಪಟ್ಟಣದಿಂದ ಸ್ಪರ್ಧಿಸಿ ಗೆದ್ದಿದ್ದ ಅವರು ಈಗ ಬಿಜೆಪಿ ಸೇರಿದ್ದಾರೆ.

ಕನ್ನಡ ಚಳವಳಿ ವಾಟಾಳ್ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಎಐಎಡಿಎಂಕೆ, ಡಿಎಂಕೆ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ.

English summary
Karnataka Prajnavantara Janata Party (KPJP), Bharatiya Janashakti Congress, Namma Congress, rise of new political parties ahead of 2018 assembly elections in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X