ನಿಮ್ಮ ಕಡೆಗೆ, ನನ್ನ ನಡಿಗೆ : ಜಾಲ ತಾಣಗಳಿಗೆ ಎಚ್ಡಿಕೆ ಎಂಟ್ರಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 13: ಈ ಸಾಮಾಜಿಕ ಜಾಲ ತಾಣಗಳ ಮೂಲಕ ಜನರನ್ನು ಸುಲಭವಾಗಿ ತ್ವರಿತವಾಗಿ ತಲುಪಬಹುದು. ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸುತ್ತಿರುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಘೋಷಿಸಿದರು.

ಫೇಸ್ ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್, ಯೂಟ್ಯೂಬ್, ಸೌಂಡ್ ಕ್ಲೌಡ್ ಜಾಲ ತಾಣಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಅಧಿಕೃತ ಖಾತೆಯನ್ನು ಲೋಕಾರ್ಪಣೆ ಮಾಡಿದರು. ಉತ್ತರಪ್ರದೇಶದಲ್ಲಿ 11 ಸಾವಿರ ವಾಟ್ಸಪ್ ಅಕೌಂಟ್ ಮೂಲಕ ಪ್ರಚಾರ ನಡೆಸಿ ಬಿಜೆಪಿ ಯಶಸ್ಸುಗಳಿಸಿದ ಮಾಹಿತಿ ಸಿಕ್ಕಿದೆ.[2015: ಟ್ವಿಟ್ಟರ್, ಫೇಸ್ಬುಕ್ಗೆ ಬಂದ್ರು ಎಚ್.ಡಿ.ಕುಮಾರಸ್ವಾಮಿ]

ನಾನು ತಿಂಗಳಲ್ಲಿ ಒಮ್ಮೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ನಾಲ್ಕು ಗಂಟೆ ನೇರ ಸಂವಾದ ನಡೆಸುತ್ತೇನೆ. ಸೌಂಡ್ ಕ್ಲೌಡ್ ನಲ್ಲಿ ನನ್ನ ಎಲ್ಲಾ ಭಾಷಣಗಳು ಲಭ್ಯವಿರುತ್ತದೆ.ಜನರತ್ತ ಸಾಗಲು ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇನೆ.

ಅದರಂತೆ ಫೇಸ್‍ಬುಕ್, ಗೂಗಲ್ ಪ್ಲಸ್, ಟ್ವಿಟರ್, ಯೂಟೂಬ್ ಹಾಗೂ ಸೌಂಡ್ ಕ್ಲೌಡ್ ಗಳಿಗೆ ಎಂಟ್ರಿ ಕೊಟ್ಟಿರುವ ಹಿಂದಿನ ಉದ್ದೇಶ ಮುಂಬರುವ ಚುನಾವಣೆಗೂ ಮುನ್ನ ಜನ ಸಂಪರ್ಕ ಬೆಳೆಸುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ಓದಿ...

ರಾಬರ್ಟ್ ಫ್ರಾಸ್ಟ್ ಕವನ ಉಲ್ಲೇಖ

ರಾಬರ್ಟ್ ಫ್ರಾಸ್ಟ್ ಕವನ ಉಲ್ಲೇಖ

ಖ್ಯಾತ ಕವಿ ರಾಬರ್ಟ್ ಫ್ರಾಸ್ಟ್ ಅವರನ್ನು ಉಲ್ಲೇಖಿಸಿದ ಅವರು ಎರಡು ದಾರಿ ಎದುರಾಗಿದ್ದವು. ದಟ್ಟ ಕಾಡಿನಲ್ಲಿ ಎರಡು ಹಾದಿ ಇರುತ್ತದೆ. ಒಂದು ಎಲ್ಲರೂ ಸಾಗುವ ಹಾದಿ, ಇನ್ನೊಂದು ಕಡಿಮೆ ಮಂದಿ ಸಾಗುವ ಹಾದಿ ಅದರಲ್ಲಿ ಒಂದನ್ನು ಆಯ್ದುಕೊಂಡೇ ಹೆಚ್ಚು ಜನರು ನಡೆದ ಹಾದಿಯನ್ನು ಬಿಟ್ಟು ನಮ್ಮದೇ ಹಾದಿ ರೂಪಿಸಬೇಕು ಎಂದಿದೆ.

ಎಚ್ಡಿಕೆ ಮುಂದಿನ ಸಿಎಂ

ಎಚ್ಡಿಕೆ ಮುಂದಿನ ಸಿಎಂ

2013ರಲ್ಲಿ ಸಿಎನ್ನೆನ್ ಐಬಿಎನ್ ಸುದ್ದಿಸಂಸ್ಥೆ ನಡೆಸಿದ ಸಮೀಕ್ಷೆಯಂತೆ ಎಚ್ ಡಿ ಕುಮಾರಸ್ವಾಮಿ ಅವರ 20-20 ಸರ್ಕಾರ ಉತ್ತಮ, ಎಚ್ಡಿಕೆ ಉತ್ತಮ ಸಿಎಂ ಎಂದು ಅಭಿಪ್ರಾಯ ಬಂದಿದೆ. ಶೇ 15ರಷ್ಟು ಎಚ್ಡಿಕೆರಿಗೆ ಮತ ಬಂದಿದ್ದರೆ, ಎಸ್ಸೆಂಕೃಷ್ಣರಿಗೆ ಶೇ 14ರಷ್ಟು, ಬಿಎಸ್ ಯಡಿಯೂರಪ್ಪ ಶೇ 8, ರಾಮಕೃಷ್ಣ ಹೆಗ್ಡೆಗೆ ಶೆ7ರಷ್ಟು ಮತ ಸಿಕ್ಕಿದೆ.

ಸಂವಾದ ಕಾರ್ಯಕ್ರಮ

ಸಂವಾದ ಕಾರ್ಯಕ್ರಮ

ಏಪ್ರಿಲ್ 15ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆವರೆಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ತಾಣಗಳನ್ನು ಯಾವುದೇ ಕಾರಣಕ್ಕೂ ಟೀಕೆಗೆ ಬಳಸುವುದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನ ಮೊದಲ ಸ್ವಾತಂತ್ರ್ಯೋತ್ಸವದ ಭಾಷಣ ಸೇರಿದಂತೆ ಇನ್ನಿತರ ಭಾಷಣಗಳು ಇದರಲ್ಲಿ ಅಳವಡಿಸಲಾಗಿದೆ. ಕಾಲಕಾಲಕ್ಕೆ ಫೇಸ್‍ಬುಕ್ ಲೈವ್ ಹಾಗೂ ಸಂವಾದಗಳನ್ನು ನಡೆಸುವ ಉದ್ದೇಶವಿದೆ

ಸಾಮಾಜಿಕ ಜಾಲತಾಣಗಳ ಲಿಂಕ್ಸ್

ಸಾಮಾಜಿಕ ಜಾಲತಾಣಗಳ ಲಿಂಕ್ಸ್

2018ರ ಚುನಾವಣೆಗೆ ಸಿದ್ಧತೆ ನಡೆಸಲು ಸಾಮಾಜಿಕ ಜಾಲ ತಾಣಗಳು ಪ್ರಮುಖ ವೇದಿಕೆಯಾಗಿದ್ದು, ಸೂಕ್ತವಾಗಿ ಬಳಸಿಕೊಳ್ಳಲಾಗುವುದು, ಸಾರ್ವಜನಿಕರು ಇದಕ್ಕೆ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದರು. ನಮ್ಮ ಕುಮಾರಣ್ಣ -ಹೊಸ ಖಾತೆಗಳ ವಿವರ ನೋಟ್ ಮಾಡಿಕೊಳ್ಳಿ

ಫೇಸ್ ಬುಕ್ : https://goo.gl/kB711r

ಟ್ವಿಟ್ಟರ್ : https://twitter.com/nammahdk

ಗೂಗಲ್ ಪ್ಲಸ್ : https://goo.gl/s0kPEk

ಯೂಟ್ಯೂಬ್ : https://goo.gl/pRSK4J

ಸೌಂಡ್ ಕ್ಲೌಡ್ : https://soundcloud.com/kumaraswamy-hd

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: JDs State President HD Kumaraswamy has entered Social Media Platform. He intend to make use of Facebook, Twitter, Soundcloud, GooglePlus, Youtube to reach out to public.
Please Wait while comments are loading...