ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಮಾರ್ಚ್/ಏಪ್ರಿಲ್ 2019 ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
2019ರ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರೌಢಶಿಕ್ಷಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರ ಪತ್ರಿಕೆಗಳಲ್ಲಿ ಅಸಂಬದ್ಧ ಬರಹ, ಚಿಹ್ನೆ ಇನ್ನು ಪರೀಕ್ಷಾ ಅಕ್ರಮ
ಈ ವೇಳಾಪಟ್ಟಿ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ನಾಳೆಯಿಂದ (31/10/2018) ರಿಂದ ನವೆಂಬರ್ 29ರ ಒಳಗಾಗಿ ಪ್ರೌಢಶಿಕ್ಷಣ ಮಂಡಳಿಯ ನಿರ್ದೇಶಕರಿಗೆ ದೂರು ನೀಡಬಹುದಾಗಿದೆ ಎಂದು ಮಂಡಳಿ ಹೇಳಿದೆ.
ಕ್ಯಾರಿ ಓವರ್ ವ್ಯವಸ್ಥೆ ಬದಲಾಯಿಸಿದ ವಿಟಿಯು
ವೇಳಾಪಟ್ಟಿ ಯಲ್ಲಿ ನೀಡಿರುವ ಸೂಚನೆಯಂತೆ ಅಂಧ ವಿದ್ಯಾರ್ಥಿಗಳಿಗೆ ಮತ್ತು ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ಒಂದು ಗಂಟೆ ಹೆಚ್ಚಿನ ಸಮಯ ನೀಡಲಾಗುವುದು. ಸಾಮಾನ್ಯ ವಿದ್ಯಾರ್ಥಿಗಳಿಗೆ ಒಟ್ಟು ಮೂರು ಗಂಟೆ ಸಮಯ ನೀಡಲಾಗುವುದು.
ದಿನಾಂಕ |
ವಿಷಯ |
ಸಮಯ |
---|---|---|
21/03/2019 | ಕನ್ನಡ, ತೆಲುಗು,ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ |
3
ಗಂಟೆ |
23/03/2019 | ಅರ್ಥಶಾಸ್ತ್ರ ಮತ್ತು ತಂತ್ರಜ್ಞಾನ ಸಂಬಂಧಿ ಕೋರ್ ವಿಷಯಗಳು |
3:15
ಗಂಟೆ |
25/03/2019 | ಗಣಿತ, ಸಮಾಜ ಶಾಸ್ತ್ರ |
3
ಗಂಟೆ |
27/03/2019 |
ದ್ವಿತೀಯ
ಭಾಷೆ:
ಇಂಗ್ಲೀಷ್,
ಕನ್ನಡ |
2:30
ಗಂಟೆ |
29/03/2019 |
ವಿಜ್ಞಾನ |
3
ಗಂಟೆ |
02/04/2019 |
ರಾಜ್ಯಶಾಸ್ತ್ರ,
ಕರ್ನಾಟಕ
ಸಂಗೀತ,
ಹಿಂದೂಸ್ತಾನಿ
ಸಂಗೀತ |
3
ಗಂಟೆ |
04/04/2019 |
ತೃತೀಯ
ಭಾಷೆ:
ಹಿಂದಿ,
ಇಂಗ್ಲಿಷ್,
ಅರೆಬಿಕ್,
ಉರ್ದು,
ಪರ್ಷಿಯನ್,
ಕೊಂಕಣಿ,
ಸಂಸ್ಕೃತ,
ತುಳು |
3
ಗಂಟೆ |