ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013ರ ಅಸೆಂಬ್ಲಿ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದು ನಿಜವಾಗಿದ್ವಾ?

|
Google Oneindia Kannada News

ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳು ನೈಜ ಫಲಿತಾಂಶದಷ್ಟೇ ಜನರಲ್ಲಿ ಕುತೂಹಲವನ್ನು ಕಾಯ್ದಿರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಅದರಲ್ಲೂ ಮತಗಟ್ಟೆ ಸಮೀಕ್ಷೆಯ (ಎಕ್ಸಿಟ್ ಪೋಲ್) ಮೇಲಂತೂ ಇನ್ನಿಲ್ಲದ ನಂಬಿಕೆ ಜನರಿಗೆ.

ಆದರೆ, ಈ ಸಮೀಕ್ಷೆಗಳು ಕರಾರುವಕ್ಕಾದ ಅಥವಾ ನಿಜ ಫಲಿತಾಂಶದ ಹತ್ತಿರಕ್ಕೆ ಬರುವಂತಹ ರಿಸಲ್ಟ್ ನೀಡುತ್ತಿವೆಯಾ? ಯಾಕೆಂದರೆ ದೇಶದೆಲ್ಲಡೆ ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದ್ದ ಉತ್ತರಪ್ರದೇಶ ಮತ್ತು ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಯಾವುದೇ ಮಾಧ್ಯಮ/ಸಂಸ್ಥೆಗಳು ನೀಡಿದ್ದ ಸಮೀಕ್ಷಾ ವರದಿಗಳು ಸರಿಯಾಗಿರಲಿಲ್ಲ.

ಸಿ-ಫೋರ್ ಸಮೀಕ್ಷೆ: 126 ಸ್ಥಾನಗಳಲ್ಲಿ ಕಾಂಗ್ರೆಸಿಗೆ ಗೆಲುವುಸಿ-ಫೋರ್ ಸಮೀಕ್ಷೆ: 126 ಸ್ಥಾನಗಳಲ್ಲಿ ಕಾಂಗ್ರೆಸಿಗೆ ಗೆಲುವು

ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಸಮೀಕ್ಷೆಗಳು ಹೇಳಿದ್ದರೂ, ನೈಜ ಫಲಿತಾಂಶದ ಹತ್ತಿರಕ್ಕೂ ಬರಲು ಸಾಧ್ಯವಾಗಿರಲಿಲ್ಲ, ಗುಜರಾತ್ ಚುನಾವಣೆಯಲ್ಲೂ ಕೂಡಾ ಇದೇ ರೀತಿ ಆಗಿತ್ತು. ಈಗ ಕರ್ನಾಟಕ ಚುನಾವಣೆಯ ಸಮೀಕ್ಷೆಯ ಸರದಿ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ಸಿವೋಟರ್ ಮಾರ್ಚ್ ತಿಂಗಳಲ್ಲಿ ನಡೆಸಿದ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ. ಕಳೆದ ಚುನಾವಣೆಗಿಂತಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸುವ ಸಾಧ್ಯತೆಯಿದೆ ಎಂದಿದೆ, ಬಿಜೆಪಿ ತನ್ನ ಸ್ಥಾನವನ್ನು ವೃದ್ದಿಸಿಕೊಂಡರೆ, ಜೆಡಿಎಸ್ ಇನ್ನಷ್ಟು ನೆಲಕಚ್ಚಲಿದೆ ಎಂದು ಹೇಳಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದುವರೆಗೆ ರಾಜ್ಯ ಅಸೆಂಬ್ಲಿ ಚುನಾವಣೆಯ ಸಂಬಂಧ ಹೊರಬಿದ್ದಿರುವ ವಿವಿಧ ಸಮೀಕ್ಷಾ ವರದಿಗಳ ಪ್ರಕಾರ, ಜೆಡಿಎಸ್ ನಿರ್ಣಾಯಕ ಪಾತ್ರವಹಿಸಲಿದೆ ಎನ್ನುವ ರಿಪೋರ್ಟಿಗೆ ತದ್ವಿರುದ್ದವಾಗಿ ಸಿವೋಟರ್ ವರದಿ ಹೊರಬಿದ್ದಿದೆ. ಇದು ಕಾಂಗ್ರೆಸ್ ತರಿಸಿಕೊಂಡಿರುವ ಗುಪ್ತಚರ ವರದಿಗೂ, ಸಿವೋಟರ್ ಸಮೀಕ್ಷೆಗೂ ಅಜಗಜಾಂತರದ ವ್ಯತ್ಯಾಸವಿದೆ ಎನ್ನಲಾಗುತ್ತಿದೆ. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದು ನಿಜವಾಗಿತ್ತಾ? ಮುಂದೆ ಓದಿ..

ಮೂರು ಪಕ್ಷಗಳೂ ತಮಗೆ ನಂಬಲರ್ಹ ಸಂಸ್ಥೆಗಳಿಂದ ತರಿಸಿಕೊಂಡ ವರದಿ

ಮೂರು ಪಕ್ಷಗಳೂ ತಮಗೆ ನಂಬಲರ್ಹ ಸಂಸ್ಥೆಗಳಿಂದ ತರಿಸಿಕೊಂಡ ವರದಿ

ಮೂರು ಪಕ್ಷಗಳೂ ತಮಗೆ ನಂಬಲರ್ಹ ಮತ್ತು ಗ್ರೌಂಡ್ ರಿಯಾಲಿಟಿ ನೀಡುವ ಸಂಸ್ಥೆಗಳ ಮೂಲಕ ತರಿಸಿಕೊಂಡ ವರದಿಗಳ ಪ್ರಕಾರ, ಜೆಡಿಎಸ್ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಜೊತೆಗೆ, ಒಂದು ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ (ಲಿಂಗಾಯತ ಶಿಫಾರಸಿನ ಮೊದಲು) ಕಾಂಗ್ರೆಸ್ ಹದಿನೈದು ಸೀಟು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ವರದಿ ಬಂದಿತ್ತು ಎನ್ನುವ ಮಾಹಿತಿಯಿದೆ. ಆದರೆ, ಸಿವೋಟರ್ ನೀಡಿರುವ ವರದಿ ಈ ಎಲ್ಲಾ ಮೂರು ಪಕ್ಷಗಳ ಗುಪ್ತಚರ ವರದಿಗಿಂತ ಭಿನ್ನವಾಗಿದೆ.

2013ರ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದವರು2013ರ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದವರು

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದ ಸಮೀಕ್ಷೆಗಳು

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದ ಸಮೀಕ್ಷೆಗಳು

2013ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದದ ಆಡಳಿತ ವಿರೋಧಿ ಅಂಶದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಎಲ್ಲಾ ಮಾಧ್ಯಮ ಮತ್ತು ಖಾಸಗಿ ಸಂಸ್ಥೆಗಳು ನೀಡಿದ್ದ ಸಮೀಕ್ಷೆ ಬಹುತೇಕ ಸರಿಯಾಗಿದ್ದವು. ನಂಬರ್ ನಲ್ಲಿ ಅಲ್ವಸ್ವಲ್ಪ ಬದಲಾವಣೆಯಾಗಿದ್ದರೂ, ಕನ್ನಡ ವಾಹಿನಿಗಳೂ ಸೇರಿದಂತೆ ಎಲ್ಲರೂ ಕಾಂಗ್ರೆಸ್ ರಾಜ್ಯವನ್ನಾಳಲಿದೆ ಎನ್ನುವ ವರದಿ ನೀಡಿದ್ದವು. 2013ರ ಅಸೆಂಬ್ಲಿ ಚುನಾವಣೆಯಲ್ಲಿ, ಯಡಿಯೂರಪ್ಪ ಇಲ್ಲದ ಬಿಜೆಪಿಯಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ.

ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಇತರರು 16

ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಇತರರು 16

2013ರ ಅಸೆಂಬ್ಲಿ ಚುನಾವಣಾ ಫಲಿತಾಂಶ: ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಇತರರು 16
(2013 ಸಮೀಕ್ಷಾ ಫಲಿತಾಂಶ) ತೆಹೆಲ್ಕಾ ಮತ್ತು ಸಿವೋಟರ್ ಜಂಟಿ ಸಮೀಕ್ಷೆ: ಕಾಂಗ್ರೆಸ್ 114, ಬಿಜೆಪಿ 55, ಜೆಡಿಎಸ್ 34, ಕೆಜೆಪಿ 11, ಇತರರು 9.
(2013 ಸಮೀಕ್ಷಾ ಫಲಿತಾಂಶ) ಟುಡೇಸ್ ಚಾಣಕ್ಯ: ಕಾಂಗ್ರೆಸ್ 132, ಬಿಜೆಪಿ 38, ಜೆಡಿಎಸ್ 38, ಕೆಜೆಪಿ 15.
(2013 ಸಮೀಕ್ಷಾ ಫಲಿತಾಂಶ) ಪಬ್ಲಿಕ್ ಟಿವಿ: ಕಾಂಗ್ರೆಸ್ 119, ಬಿಜೆಪಿ 39-49 ಜೆಡಿಎಸ್ 34-44, ಕೆಜೆಪಿ 14-22

ಒನ್ ಇಂಡಿಯಾ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ ಜನರು ಕೊಟ್ಟ ಅಂಕವೆಷ್ಟು?ಒನ್ ಇಂಡಿಯಾ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ ಜನರು ಕೊಟ್ಟ ಅಂಕವೆಷ್ಟು?

ಸಿಫೋರ್, ಸುವರ್ಣ ನ್ಯೂಸ್, ಐಬಿಎನ್, ದಿವೀಕ್, ಮಿಂಟ್

ಸಿಫೋರ್, ಸುವರ್ಣ ನ್ಯೂಸ್, ಐಬಿಎನ್, ದಿವೀಕ್, ಮಿಂಟ್

2013ರ ಅಸೆಂಬ್ಲಿ ಚುನಾವಣಾ ಫಲಿತಾಂಶ: ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಇತರರು 16
(2013 ಸಮೀಕ್ಷಾ ಫಲಿತಾಂಶ) ಸಿಫೋರ್, ಸುವರ್ಣ ನ್ಯೂಸ್ ಜಂಟಿ ಸಮೀಕ್ಷೆ: ಕಾಂಗ್ರೆಸ್ 119-120, ಬಿಜೆಪಿ 49-60, ಜೆಡಿಎಸ್ 34-41, ಕೆಜೆಪಿ 5-12, ಇತರರು 10-15.
(2013 ಸಮೀಕ್ಷಾ ಫಲಿತಾಂಶ) ಸಿಎನ್ಎನ್, ಐಬಿಎನ್, ದಿವೀಕ್ : ಕಾಂಗ್ರೆಸ್ 117-129, ಬಿಜೆಪಿ 39-49, ಜೆಡಿಎಸ್ 34-44, ಇತರರು 14-22.
(2013 ಸಮೀಕ್ಷಾ ಫಲಿತಾಂಶ) ಮಿಂಟ್ : ಕಾಂಗ್ರೆಸ್ 125-135, ಬಿಜೆಪಿ 45-55, ಜೆಡಿಎಸ್ 30-35, ಕೆಜೆಪಿ 10-15

ಹೆಡ್ಲೈನ್ಸ್ ಟುಡೇ ಸಮೀಕ್ಷಾ ಫಲಿತಾಂಶ

ಹೆಡ್ಲೈನ್ಸ್ ಟುಡೇ ಸಮೀಕ್ಷಾ ಫಲಿತಾಂಶ

2013ರ ಅಸೆಂಬ್ಲಿ ಚುನಾವಣಾ ಫಲಿತಾಂಶ: ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಇತರರು 16
(2013 ಸಮೀಕ್ಷಾ ಫಲಿತಾಂಶ) ಪ್ರಬೋಧನ್ ರಿಸರ್ಚ್ ಗ್ರೂಪ್ : ಕಾಂಗ್ರೆಸ್ 95, ಬಿಜೆಪಿ 81, ಜೆಡಿಎಸ್ 27, ಕೆಜೆಪಿ 8, ಇತರರು 13
(2013 ಸಮೀಕ್ಷಾ ಫಲಿತಾಂಶ) ಹೆಡ್ಲೈನ್ಸ್ ಟುಡೇ : ಕಾಂಗ್ರೆಸ್ 114-122, ಬಿಜೆಪಿ 48-56, ಜೆಡಿಎಸ್ 32-38, ಕೆಜೆಪಿ 10-14

English summary
2013 Karnataka assembly elections poll prediction. Tehelka, C-Voter, Public TV, Todays' Chankya, Suvarna News, C-Fore, CNN-IBN, The Week, Mint has done the survey and most of the pre-poll survey reports came out close to the actual figure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X