ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಡಿವೈಎಸ್ಪಿ, 30 ಪೊಲೀಸ್ ಇನ್‌ಸ್ಪೆಕ್ಟರ್ಸ್ ವರ್ಗಾವಣೆ ಮಾಡಿದ ಕರ್ನಾಟಕ ಸರ್ಕಾರ

|
Google Oneindia Kannada News

ಬೆಂಗಳೂರು, ಅ. 21: ರಾಜ್ಯದ ಪೊಲೀಸ್ ಇಲಾಖೆಯ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಗಳ ವರ್ಗಾವಣೆಯ ಮತ್ತೊಂದು ಪಟ್ಟಿ ಹೊರ ಬಿದ್ದಿದೆ. ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಬಳಿಕ ಮೂರನೇ ವರ್ಗಾವಣೆ ಪಟ್ಟಿಯ ವಿವರ ಇಲ್ಲಿದೆ. ಪೊಲೀಸ್ ಇಲಾಖೆಯ 20 ಡಿವೈಎಸ್ಪಿಗಳು ಹಾಗೂ 30 ಇನ್ಸಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ನೇಮಕಗೊಂಡ ಬಳಿಕ ವರ್ಗಾವಣೆ ಪಟ್ಟಿಯೇ ಹೊರ ಬಿದ್ದಿರಲಿಲ್ಲ. ಅಧಿವೇಶನವಾದ ಒಂದು ಮೂರು ವಾರದ ಬಳಿಕ ಮೊದಲ ವರ್ಗಾವಣೆ ಪಟ್ಟಿ ಬಿದ್ದಿತ್ತು ಕೆಲ ದಿನಗಳ ಹಿಂದಷ್ಟೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ಮಾಡಿದೆ.

ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ವೇಳೆ ತಿಂಗಳಿಗೊಂದು ವರ್ಗಾವಣೆ ಪಟ್ಟಿ ಹೊರ ಬೀಳುತ್ತಿತ್ತು. ಇದು ಪೊಲೀಸ್ ಇಲಾಖೆಯಲ್ಲಿ ಬಹು ಚರ್ಚೆಗೆ ನಾಂದಿ ಹಾಡಿತ್ತು. ಆರಗ ಜ್ಞಾನೇಂದ್ರ ಗೃಹ ಸಚಿವರಾದ ಬಳಿಕ ಮೂರನೇ ವರ್ಗಾವಣೆ ಪಟ್ಟಿ ಹೊರ ಬಿದ್ದಿದೆ. ದಕ್ಷ ಅಧಿಕಾರಿಗಳನ್ನು ಆಯಕಟ್ಟಿಗೆ ವರ್ಗಾವಣೆ ಮಾಡಲೆಂದು ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಬೋರ್ಡ್ ಅಸ್ತಿತ್ವದಲ್ಲಿರುತ್ತದೆ. ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಒಳಗೊಂಡಂತೆ ಈ ಬೋರ್ಡ್ ಪೊಲೀಸ್ ಅಧಿಕಾರಿಗಳ ಸಮರ್ಥತೆ ಮೇರೆಗೆ ವರ್ಗಾವಣೆ ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ನೆಪಕ್ಕೆ ಪಾತ್ರ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್‌ ಎಂಬಂತಾಗಿದೆ.

ಪೊಲೀಸ್ ಇಲಾಖೆಯ ಬದಲಾವಣೆಗೆ ನಾಂದಿ ಹಾಡುತ್ತೇನೆ ಎಂದು ಹೇಳುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ನಿಜವಾಗಿಯೂ ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಜಾರಿಗೆ ತರುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

20 DYSP and 30 Police inspectors transferred by Karnataka Home department

ವರ್ಗಾವಣೆ ಕೇಳಿದ್ದಕ್ಕೆ ಸಿಟ್ಟು: ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುದ್ದಿಗೋಷ್ಠಿ ಡಿಜಿಪಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ನೂತನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮೊದಲು ಎದುರಾಗಿದ್ದೇ ವರ್ಗಾವಣೆಯ ದಂಧೆ ಬಗ್ಗೆ. ಪತ್ರಕರ್ತರೊಬ್ಬರ ಪ್ರಶ್ನೆಗೆ ಕೆಂಡಾಮಂಡಲವಾಗಿದ್ದ ಬೊಮ್ಮಾಯಿ ಸುದ್ದಿಗೋಷ್ಠಿಯನ್ನೇ ರದ್ದು ಮಾಡಿ ಹೊರ ನಡೆದಿದ್ದರು.

ವರ್ಗಾವಣೆಯಾದ ಡಿವೈಎಸ್ಪಿ ಗಳ ವಿವರ:

ಶ್ರೀಪಾದ ದಶರಥ ಜಲ್ದೆ- ಕೇಂದ್ರ ವಿಭಾಗ ಸಂಚಾರ,

ರಾಜೇಂದ್ರ ಡಿ.ಎಸ್- ಕಬ್ಬನ್ ಪಾರ್ಕ್ ಉಪ ವಿಭಾಗ,

ರಂಗಪ್ಪ ಟಿ.- ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು

ಉದಯ ಭಾಸ್ಕರ್ ಜಿ.ವಿ. - ಹಾಸನ ಉಪ ವಿಭಾಗ

ಕೋದಂಡರಾಮ ಟಿ. - ಕೆಂಗೇರಿ ಗೇಟ್ ಉಪ ವಿಭಾಗ,

ಎಂ.ಎಚ್. ಸತೀಶ್, -ಭ್ರಷ್ಟಾಚಾರ ನಿಗ್ರಹ ದಳ

ಗೋಪಿ. ಬಿ.ಆರ್. - ಭ್ರಷ್ಟಾಚಾರ ನಿಗ್ರಹ ದಳ

ನಾಗೇಶ್ ಐತಾಳ್, - ಆಂತರಿಕ ಭದ್ರತಾ ವಿಭಾಗ,

ನಾಗರಾಜ್ ಕೆ.ಎಸ್. -ದೊಡ್ಡಬಳ್ಳಾಪುರ ವಿಭಾಗ,

ವೆ. ಡಿಸೋಜಾ -ಕಾರವಾರ ಉಪ ವಿಭಾಗ.

ಡಾ. ದೇವರಾಜ್ ಬಿ. - ಸುರಪುರ ಉಪ ವಿಭಾಗ

ಶೀಲವಂತ ಎಚ್‌.ಎಸ್. -ಕಲಬುರ್ಗಿ ಗ್ರಾಮೀಣ ಉಪ ವಿಭಾಗ

ಯತಿರಾಜ್ ಬಿ.ಆರ್. -ಆಂತರಿಕ ಭದ್ರತಾ ವಿಭಾಗ

ಪುಟ್ಟ ಸ್ವಾಮಗೌಡ ಟಿ.ಆರ್.- ಕೆಪಿಎ ಮೈಸೂರು

ಕೃಷ್ಣ ಕುಮಾರ್ ಯು.ಡಿ. -ಕರ್ನಾಟಕ ಲೋಕಾಯುಕ್ತ

ವೇಣುಗೋಪಾಲ್ ಎಲ್. - ರಾಜ್ಯ ಗುಪ್ತವಾರ್ತೆ,

ಅರವಿಂದ ಎನ್. ಕಲಗುಚ್ಚಿ, -ಎಎನ್ಎಫ್

ವೆಂಕಟೇಶ್ -ಕರ್ನಾಟಕ ಲೋಕಾಯುಕ್ತ

ತಾಯಪ್ಪ ದೊಡ್ಡ ಮನಿ- ಕರ್ನಾಟಕ ಲೋಕಾಯುಕ್ತ

ಎಸ್.ಬಿ. ಗಿರೀಶ್- ರಾಜ್ಯ ಗುಪ್ತ ವಾರ್ತೆ

ಪೊಲೀಸ್ ಇನ್ಸಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ:

ಲಕ್ಷ್ಮೀನಾರಾಯಣ ಕೆ. ಬೆಸ್ಕಾಂ- ಚಿಕ್ಕಬಳ್ಳಾಪುರ

ಗೋಪಾಲ್ ನಾಯಕ್ ಎಂ. -ತಳಕು ವೃತ್ತ ಚಳ್ಳಕೆರೆ

ಶಂಕರಪ್ಪ ಬಿ.ಜಿ. - ಬಡಾವಣೆ ವೃತ್ತ ಚಿತ್ರದುರ್ಗ

ಸುನೀಲ್ ಕುಮಾರ್ ಎಂ.ಎಸ್. -ಡಿಎಸ್‌ಬಿ ದಕ್ಷಿಣ ಕನ್ನಡ

ಬಾಳನಗೌಡ ಎಸ್. ಮಾನಶೆಟ್ಟರ್, -ವಿದ್ಯಾಗಿರಿ ಧಾರವಾಡ,

ಅಶೋಕ್ ಎ. ಸದಲಗಿ - ರಾಮದುರ್ಗ ವೃತ್ತ ಬೆಳಗಾವಿ

ರಮೇಶ್ ಬಿ. ಚಾಯಗೋಳ್ -ಯಮಕನಮರಡಿ, ಬೆಳಗಾವಿ,

ಮಹಮದ್ ರಫೀಕ್ ಎಂ. ತಹಶೀಲ್ದಾರ್, -ಹುಕ್ಕೇರಿ ಬೆಳಗಾವಿ,

ಶರಣ ಬಸಪ್ಪ ಕೆ. - ಚಿತ್ತಾಪುರ, ಕಲಬುರಗಿ,

ಹುಲಗಪ್ಪ ಡಿ. -ಹೊಸಪೇಟೆ ನಗರ, ವಿಜಯನಗರ ಜಿಲ್ಲೆ,

ಪ್ರಭು ಆರ್. ಗಂಗನಹಳ್ಳಿ, -ದಾಂಡೇಲಿ ವೃತ್ತ ,

ಆನಂದ್ ನಾಯಕ್ ಸಿ.ಇ. -ಯಲಹಂಕ ನ್ಯೂ ಟೌನ್,

ಶಿವರತ್ನ ಎಸ್. -ರಾಜಾಜಿನಗರ ಸಂಚಾರ ಠಾಣೆ,

ಪ್ರಶಾಂತ್ ಎಸ್. -ಬೊಮ್ಮನಹಳ್ಳಿ ಬೆಂಗಳೂರು

ಚಂದ್ರಕಾಂತ್, ಎಲ್. ಟಿ. -ಶೇಷಾದ್ರಿಪುರಂ ಸಂಚಾರ ಠಾಣೆ,

ಸಯ್ಯದ್ ತಬರೇಜ್, ಸಿಇಎನ್, -ಪಶ್ಚಿಮ ವಿಭಾಗ, ಬೆಂಗಳೂರು

ಕುಮಾರಸ್ವಾಮಿ ಎಸ್. ಪಿ..- ಸಿ.ಇ.ಎನ್. ಕೇಂದ್ರ ವಿಭಾಗ

ಮಂಜುನಾಥ್ ಎಸ್. -ಆಡುಗೋಡಿ, ಬೆಂಗಳೂರು

ರಮೇಶ್ ಜಿ.ಪಿ. -ಭಾರತಿನಗರ, ಬೆಂಗಳೂರು

ಪ್ರಕಾಶ್ ಬಿ.ವಿ. -ರಾಜ್ಯ ಗುಪ್ತವಾರ್ತೆ,

ಮಹಾಂತೇಶ್ ಬಸಾಪುರ್ -ಸಿಸಿಬಿ ಹುಬ್ಬಳ್ಳಿ- ಧಾರವಾಡ ನಗರ

ಶಶಿಕಾಂತ್ ಬಿ. ವರ್ಮ, -ಕರ್ನಾಟಕ ಲೋಕಾಯುಕ್ತ

ಕೃಷ್ಣಪ್ಪ ಎಸ್. ಕಲ್ಲದೇವರ್, -ರಾಜ್ಯ ಗುಪ್ತ ವಾರ್ತೆ,

ನಾರಾಯಣ ವಿ. -ಡಿಎಸ್‌ಬಿ ಕೊಪ್ಪಳ

ಅರುಣ್ ಕುಮಾರ್ ಜಿ.ವಿ. -ಕರ್ನಾಟಕ ಲೋಕಾಯುಕ್ತ ಎಸ್ಐಟಿ

ಶ್ರೀಧರ ಎಸ್. -ಕರ್ನಾಟಕ ಲೋಕಾಯುಕ್ತ ಎಸ್ಐಟಿ

ರವಿಂಕರ್ ಎಂ.ಎನ್. -ಸಿಐಡಿ,

ಪ್ರಶಾಂತ್ ಕೆ. - ಸಿಐಡಿ,

ಪ್ರವೀಣ್ ಬಾಬು ಜಿ. - ಸಿಐಡಿ,

Recommended Video

T20 World cup ಲೀಗ್ ಹಂತದಲ್ಲಿ ನಲ್ಲಿ ಟೀಮ್ ಇಂಡಿಯಾದ ವೇಳಾಪಟ್ಟಿ | Oneindia Kannada

ಸುಧಾಕರ ರೆಡ್ಡಿ ಎ. -ಹೈಕೋರ್ಟ್ ವಿಜಿಲೆನ್ಸ್ ಬೆಂಗಳೂರು

English summary
The state DGP has ordered the transfer of 20 DySPs and 30 police inspectors know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X