ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: 20 ಜಿಲ್ಲೆಗಳಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇದ್ದರೂ ಕೂಡ, 20 ಜಿಲ್ಲೆಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿ ದಾಖಲಾಗಿದೆ.

ಕೊರೊನಾ ಸೋಂಕು ಶುರುವಾದಾಗಿನಿಂದ ಕೋವಿಡ್ -19 ಪ್ರಕರಣದ ಸಾವಿನ ದರವನ್ನು (ಸಿಎಫ್‌ಆರ್) ಶೇಕಡಾ 1 ಕ್ಕಿಂತ ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಆದಾಗ್ಯೂ, ರಾಜ್ಯ ಕೋವಿಡ್ -19 ವಾರ್ ರೂಮ್ ನೀಡಿರುವ ಮಾಹಿತಿ ಪ್ರಕಾರ, 30 ಜಿಲ್ಲೆಗಳ ಪೈಕಿ ಇನ್ನೂ 20 ಜಿಲ್ಲೆಗಳಲ್ಲಿ ಕೋವಿಡ್ -19 ಮರಣ ಪ್ರಮಾಣ ಶೇಕಡಾ 1ಕ್ಕಿಂತ ಹೆಚ್ಚಿದೆ.

ಧಾರವಾಡ, ಬಳ್ಳಾರಿ, ಹಾವೇರಿ, ಬೀದರ್ ಮತ್ತು ಶಿವಮೊಗ್ಗದಲ್ಲಿ ಹೆಚ್ಚಿನ ಕೋವಿಡ್-19 ಮರಣ ಪ್ರಮಾಣವಿದ್ದರೆ, ಉಳಿದ 10 ಜಿಲ್ಲೆಗಳಲ್ಲಿ ಅದು ಶೇಕಡಾ 1ಕ್ಕಿಂತ ಕಡಿಮೆಯಿದೆ. ಚಿತ್ರದುರ್ಗ, ಉಡುಪಿ, ಯಾದಗಿರಿ, ಚಿಕ್ಕಮಗಳೂರು ಮತ್ತು ರಾಯಚೂರಿನಲ್ಲಿ ಕಡಿಮೆ ಮರಣ ಪ್ರಮಾಣವಿದೆ.

karnataka-s-20-districts-report-high-covid-fatality-rate

ಸಾವಿನ ದರವು ಕಡಿಮೆಯಾಗುವುದು ನಿಧಾನವಾಗಿದೆ ಆದರೆ ಒಮ್ಮೆ ಹೊಸ ಕೇಸ್ ಲೋಡ್ ಕಡಿಮೆಯಾದರೆ, ಸಾವುಗಳು ಕೂಡ ಆಗುತ್ತವೆ. ವ್ಯಾಕ್ಸಿನೇಷನ್ ಒಂದು ಮಾಂತ್ರಿಕ ದಂಡವಾಗಿದ್ದು ಅದು ಕೋವಿಡ್ -19 ಸಾವುಗಳನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ರೋಗಿಗಳನ್ನು ಮೊದಲೇ ಪರೀಕ್ಷಿಸಿ ಚಿಕಿತ್ಸೆ ನೀಡುವುದರ ಹೊರತಾಗಿ ನಾವು ಈ ಬಗ್ಗೆ ಗಮನ ಹರಿಸಬೇಕು ಎಂದು ಡಾ ಪ್ರದೀಪ್ ಬಾನಂದೂರು ತಿಳಿಸಿದ್ದಾರೆ.

ಹೆಚ್ಚಿನ ಮರಣ ಪ್ರಮಾಣವಿರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಗತಿಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಅಮೆರಿಕದಲ್ಲಿ ಲಸಿಕೆ ಪ್ರಮಾಣ ಕಡಿಮೆಯಿರುವ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಅಧಿಕವಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಮರಣ ಪ್ರಮಾಣ ಅಂಕಿಅಂಶಗಳ ಬಗ್ಗೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 504 ಕೊರೊನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2,973,899ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿಗೆ 20 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,746ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ 181 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,45,671ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 893 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,23,320ಕ್ಕೆ ಏರಿಕೆಯಾಗಿದೆ. ಇನ್ನು12,804 ಸಕ್ರೀಯ ಪ್ರಕರಣಗಳಿವೆ.

ರಾಜ್ಯಾದ್ಯಂತ ಇಂದು 1,03,800 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 504 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.48ಕ್ಕೆ ಇಳಿದಿದೆ.
ಬೆಂಗಳೂರಿನ ಹೊರಗಿನ ರೋಗಿಗಳನ್ನು ತಡವಾಗಿ ಆಸ್ಪತ್ರೆಗೆ ತೋರಿಸುತ್ತಿರುವುದು ಇನ್ನೂ ಸಮಸ್ಯೆಯಾಗಿದೆ.

ಕೆಲವು ಜಿಲ್ಲೆಗಳಲ್ಲಿ ಸೌಲಭ್ಯಗಳ ಕೊರತೆ ಕೂಡ ಸಮಸ್ಯೆಯಾಗಿರಬಹುದು ಎಂದು ಖ್ಯಾತ ಶ್ವಾಸಕೋಶಶಾಸ್ತ್ರಜ್ಞ ಹಾಗೂ ರಾಜ್ಯ ಕೋವಿಡ್-19 ಡೆತ್ ಆಡಿಟ್ ಕಮಿಟಿ ಸದಸ್ಯ ಡಾ. ಕೆ. ಎಸ್. ಸತೀಶ್ ಹೇಳಿದ್ದಾರೆ.

Recommended Video

ಭಾರತದ ಡೇಟಾಬೇಸ್ ಕದ್ದು ಚೀನಾ ಮಾಡೋದೇನು? ಆಘಾತಕಾರಿ ಮಾಹಿತಿ ಬಯಲು | Oneindia Kannada

English summary
Ever since the pandemic began, it has been the aim of the state government to bring the Covid-19 Case Fatality Rate (CFR) below 1 per cent. However, state Covid-19 War Room data shows that 20 of 30 districts still have CFR higher than 1 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X