ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾದಲ್ಲಿ ಆರಂಭವಾಗುತ್ತೆ ಇನ್ನೆರಡು ಘಟಕ

By Kiran B Hegde
|
Google Oneindia Kannada News

ಕಾರವಾರ, ನ. 29: ಕೈಗಾದಲ್ಲಿ ಈಗಾಗಲೇ 4 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ಇನ್ನೂ ಎರಡು ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟದ ಒಪ್ಪಿಗೆಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಕೈಗಾ ಸ್ಥಾವರದ ನಿರ್ದೇಶಕ ಎಚ್.ಎನ್. ಭಟ್ ತಿಳಿಸಿದ್ದಾರೆ. [ಅಣು ಮಾಹಿತಿ ಸೋರಿಕೆಯಾಗಿಲ್ಲ]

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈಗಿರುವ ನಾಲ್ಕು ಘಟಕಗಲಿಂದ 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಈಗ ಸ್ಥಾಪಿಸಲು ಉದ್ದೇಶಿಸಿರುವ 5 ಮತ್ತು 6ನೇ ಘಟಕವು ತಲಾ 700 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುತ್ತವೆ ಎಂದು ತಿಳಿಸಿದರು. [ಕೈಗಾ ಭಯ ಬೇಡ]

kaiga

ಈಗಿರುವ 1 ಮತ್ತು 2ನೇ ಘಟಕದಲ್ಲಿ ಶೇ. 95ರಷ್ಟು ಹಾಗೂ 3 ಮತ್ತು 4ನೇ ಘಟಕದಲ್ಲಿ ಶೇ. 88ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕರ್ನಾಟಕಕ್ಕೆ ಶೇ. 28ರಷ್ಟು ವಿದ್ಯುತ್ ಸಿಗುತ್ತಿದೆ. ಆದರೆ, ಈಗ ಜಾರಿಗೆ ಬಂದಿರುವ ಹೊಸ ನೀತಿಯಂತೆ 5 ಮತ್ತು 6ನೇ ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ. 50ರಷ್ಟು ರಾಜ್ಯಕ್ಕೇ ಸಿಗಲಿದೆ ಎಂದು ತಿಳಿಸಿದರು. [ವಿದ್ಯುತ್ ಹಂಚಿಕೆ ಅನ್ಯಾಯ: ಎಚ್ಚರಿಕೆ]

ನೂತನ ಘಟಕಗಳ ಆರಂಭಕ್ಕೆ ಅಗತ್ಯ ಭೂಮಿ ಹಾಗೂ ಮೂಲಸೌಕರ್ಯಗಳು ಲಭ್ಯವಿದೆ. ಪುನರ್ವಸತಿ ಸಮಸ್ಯೆ ಇಲ್ಲ. ಆದ್ದರಿಂದ 2015ರಲ್ಲಿ ಘಟಕಗಳ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ ನಡೆಸುವ ಉದ್ದೇಶವಿದೆ. 8ರಿಂದ 10 ಸಾವಿರ ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ ಎಂದರು.

ಕ್ಯಾನ್ಸರ್‌ನಿಂದ 10 ಜನರ ಸಾವು: ಕೈಗಾ ಕೇಂದ್ರದ ಮುಖ್ಯ ಆರೋಗ್ಯ ತಜ್ಞ ಆರ್.ಟಿ. ಸ್ಕಾಚಡೋ ಮಾತನಾಡಿ, ಇಲ್ಲಿನ ಜನರ ಆರೋಗ್ಯದ ಅಧ್ಯಯನವನ್ನು ಟಾಟಾ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಸಂಸ್ಥೆ ನಡೆಸುತ್ತಿದೆ. 1998-99ರಲ್ಲಿ ಕೈಗಾ ಕೇಂದ್ರದ ಸುತ್ತಲಿನ 43 ಹಳ್ಳಿಗಳಲ್ಲಿ ಕೇವಲ 10 ಜನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ವರಿಗೆ ವಂಶಪಾರಂಪರ್ಯದಿಂದ ಕ್ಯಾನ್ಸರ್ ಬಂದಿತ್ತು. ಇನ್ನೂ 57 ಅನುಮಾನಾಸ್ಪದ ಪ್ರಕರಣಗಳು ಪತ್ತೆಯಾಗಿವೆ. 111 ಗರ್ಭಪಾತಗಳು ಸಂಭವಿಸಿವೆ ಎಂದು ವಿವರಿಸಿದರು. [ಕೈಗಾ ಸ್ಥಾವರದ ಕುಡಿಯುವ ನೀರಲ್ಲಿ ವಿಷ]

English summary
Two more units planned to be built in Kaiga atomic plant, director of Kaiga atomic plant H N Bhat said in press meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X