ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ
ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪೊಲೀಸರಿಗೆ ನೀಡುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ. ಗಣರಾಜ್ಯೋತ್ಸವ ವೇಳೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಜ. 25 ರಂದು ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಪಿಎಸ್ ಅಧಿಕಾರಿ ಒಳಗೊಂಡು ರಾಜ್ಯದ 19 ಪೊಲೀಸ್ ಅಧಿಕಾರಿಗಳು ಈ ಭಾರಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪುರಸ್ಕೃತರಾಗಿದ್ದಾರೆ.
ಕರ್ನಾಟಕದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಐಜಿಪಿ ಡಾ. ಎ. ಸುಬ್ರಮಣೇಶ್ವರ ರಾವ್, ಬೆಳಗಾವಿಯ ಭ್ರಷ್ಟಾಚಾರ ನಿಗ್ರಹದಳದ ಎಸ್ಪಿ ಬಿ.ಎಸ್. ನ್ಯಾಮಗೌಡ, ಪೊಲೀಸ್ ಪ್ರಧಾನ ಕಚೇರಿ ಅಪರಾಧ ವಿಭಾಗದ ಡಿವೈಎಸ್ಪಿ ವಿ.ಕೆ ವಾಸುದೇವ್, ಸಿಐಡಿ ಡಿವೈಎಸ್ಪಿ ರಾಮಚಂದ್ರ, ಬಿ. , ಬಿಡಿಎ ಜಾಗೃತ ದಳದ ಡಿವೈಎಸ್ಪಿ ಸಿ. ಬಾಲಕೃಷ್ಣ, ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಬಿ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕರ್, ಉಡುಪಿ ಡಿಸಿಆರ್ ಬಿ ಎಎಸ್ಐ ಪ್ರಕಾಶ್, ರಾಜ್ಯ ಗುಪ್ತಚರ ಇಲಾಖೆ ಎಎಸ್ಐ ಈಶ್ವರಯ್ಯ ಅವರು ರಾಷ್ಟ್ರಪತಿ ಪೊಲೀಸ್ ಶ್ಲಾಘನೀಯ ಸೇವಾ ಪದಕ ಪಡೆದ ಗೌರವಕ್ಕೆ ಭಾಜೀನರಾಗಿದ್ದಾರೆ.
ಅದೇ ರೀತಿ ಕೆಎಸ್ಆರ್ಪಿ, ಮೂರನೇ ಬೆಟಾಲಿಯನ್ ಎಆರ್ಎಸ್ಐ ಮೋಹನ್ ರಾಜು, ಕುರಡಗಿ, ನಾಲ್ಕನೇ ಬೆಟಾಲಿಯನ್ ಎಆರ್ ಎಸ್ಐ ಸಿ. ವೆಂಕಟಸ್ವಾಮಿ, ಶಶಿಕುಮಾರ್, ಎಎಚ್ ಸಿ ಲೋಕೇಶ್ ಆರ್. , ಕೆ. ಆರ್. ಜಿತೇಂದ್ರ ರೈ, ಸತೀಶ್ ಕೆ. ವಿ. ಎಸ್ . ಪ್ರಕಾಶ್ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದಿದ್ದಾರೆ. ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಫ್ರಶಸ್ತಿ ಪ್ರಮಾಣ ಪತ್ರ ಮತ್ತು ಪದಕವನ್ನು ರಾಜ್ಯಪಾಲರು ವಿತರಿಸಲಿದ್ದಾರೆ.