ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; ನಷ್ಟದ ಮೊತ್ತ ಅಂದಾಜಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 09 : ಕೊರೊನಾ ಹರಡದಂತೆ ತಡೆಯಲು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಲಾಕ್ ಡೌನ್ ಘೋಷಣೆ ಬಳಿಕ ಬಸ್, ರೈಲು, ವಿಮಾನ ಸೇರಿದಂತೆ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಕೋಟಿ ಕೋಟಿ ರೂಪಾಯಿ ನಷ್ಟವಾಗುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಲಾಕ್ ಡೌನ್ ಘೋಷಣೆಯಾದ ಬಳಿಕ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದುವರೆಗೆ ನಿಗಮಕ್ಕೆ ಸುಮಾರು 182 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಆತಂಕ : ಕೆಎಸ್ಆರ್‌ಟಿಸಿಗೆ ಕೋಟಿ-ಕೋಟಿ ನಷ್ಟಕೊರೊನಾ ಆತಂಕ : ಕೆಎಸ್ಆರ್‌ಟಿಸಿಗೆ ಕೋಟಿ-ಕೋಟಿ ನಷ್ಟ

ಕೆಎಸ್ಆರ್‌ಟಿಸಿ ಲಾಕ್ ಡೌನ್ ಘೋಷಣೆಗೂ ಮೊದಲೇ ಐಷಾರಾಮಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ರಾಜ್ಯದಲ್ಲಿ ಸಂಚಾರ ನಡೆಸುವ ಮತ್ತು ಹೊರ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳು ನಿಲ್ದಾಣ ಬಿಟ್ಟು ಹೊರ ಬಂದಿರಲಿಲ್ಲ.

ಎರಡು ತಿಂಗಳ ಬಳಿಕ ವುಹಾನ್ ನಲ್ಲಿ ಬಸ್ ಸಂಚಾರ ಪುನರಾರಂಭಎರಡು ತಿಂಗಳ ಬಳಿಕ ವುಹಾನ್ ನಲ್ಲಿ ಬಸ್ ಸಂಚಾರ ಪುನರಾರಂಭ

182 Crore Loss For KSRTC Due To Lockdown

ಲಾಕ್ ಡೌನ್ ಘೋಷಣೆ ಬಳಿಕ ಸಾಮಾನ್ಯ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಾರ್ಚ್ 1ರಿಂದ ಇಲ್ಲಿಯ ತನಕ ಸಾಮಾನ್ಯ ಬಸ್‌ಗಳಿಂದ 144 ಕೋಟಿ, ಐಷಾರಾಮಿ ಬಸ್‌ಗಳಿಂದ 37.28 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಮುಂಗಡ ಟಿಕೆಟ್ ರದ್ದು; ಕೆಎಸ್ಆರ್‌ಟಿಸಿ ಮಹತ್ವದ ಸುತ್ತೋಲೆ ಮುಂಗಡ ಟಿಕೆಟ್ ರದ್ದು; ಕೆಎಸ್ಆರ್‌ಟಿಸಿ ಮಹತ್ವದ ಸುತ್ತೋಲೆ

ಕೆಎಸ್ಆರ್‌ಟಿಸಿಯ 746 ಐಷಾರಾಮಿ ಬಸ್‌ಗಳು ಮತ್ತು 7,364 ಸಾಮಾನ್ಯ ಬಸ್‌ಗಳು ಪ್ರತಿದಿನ 30,11,786 ಕಿ. ಮೀ. ಸಂಚಾರ ನಡೆಸುತ್ತಿದ್ದವು. ಆದರೆ, ಈಗ ಎಲ್ಲಾ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು ಪ್ರತಿದಿನಕ್ಕೆ ಸುಮಾರು 9.87 ಕೋಟಿ ನಷ್ಟವಾಗುತ್ತಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಓಡಿಸುತ್ತಿತ್ತು. ಆದರೆ, ಈಗ ವಿಮಾನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಫ್ಲೈ ಬಸ್ ಸಂಚಾರವೂ ಸಂಪೂರ್ಣ ಸ್ಥಗಿತವಾಗಿದೆ.

English summary
From March 1 182 core loss for the Karnataka State Road Transport Corporation (KSRTC) due to lockdown. Flybus bus services from Bengaluru Kempegowda International Airport also stopped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X