18 ರಿಂದ 44; ಕರ್ನಾಟಕದಲ್ಲಿ ಶನಿವಾರದಿಂದಲೇ ಲಸಿಕೆ
ಬೆಂಗಳೂರು, ಏಪ್ರಿಲ್ 30; ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ನೀಡುವ ಅಭಿಯಾನ ಕರ್ನಾಟಕದಲ್ಲಿ ಶನಿವಾರದಿಂದಲೇ ಆರಂಭವಾಗಲಿದೆ. ಲಸಿಕೆ ಸಂಗ್ರಹ ಇಲ್ಲದ ಕಾರಣಕ್ಕೆ ಮೇ 1ರಿಂದ ಅಭಿಯಾನ ಆರಂಭವಾಗುವ ಬಗ್ಗೆ ಗೊಂದಲ ಉಂಟಾಗಿತ್ತು.
ದೇಶಾದ್ಯಂತ 18 ರಿಂದ 44 ವರ್ಷದ ಜನರಿಗೆ ಕೋವಿಡ್ ವಿರುದ್ಧದ ಲಸಿಕೆ ನೀಡುವ ಅಭಿಯಾನ ಶನಿವಾರ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಏಪ್ರಿಲ್ 28ರಿಂದಲೇ ನೋಂದಣಿ ಆರಂಭವಾಗಿದೆ.
ಭಾರತದಲ್ಲಿ ಪೂರ್ಣ ಲಸಿಕೆ ಪಡೆದವರ ಪ್ರಮಾಣ ಶೇ 1.97
ಕರ್ನಾಟಕದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿನ ಶಿವಾಜಿನಗರದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ನಿಗದಿಯಂತೆ ಮೇ 1ರಿಂದ ಲಸಿಕೆ ಅಭಿಯಾನ; ಕೇಂದ್ರ ಸರ್ಕಾರ
ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಸುಮಾರು ಮೂರುವರೆ ಕೋಟಿ ಜನರು ಈ ಅಭಿಯಾನದಲ್ಲಿ ಲಸಿಕೆ ಪಡೆಯುವ ಸಾಧ್ಯತೆ ಇದೆ.
ರಾಜ್ಯಗಳಿಗೆ ಸಿಹಿ ಸುದ್ದಿ; ಕೊವ್ಯಾಕ್ಸಿನ್ ಲಸಿಕೆ ಬೆಲೆ ಇಳಿಕೆ
ಕರ್ನಾಟಕ ಸರ್ಕಾರ ಈಗಾಗಲೇ ಸುಮಾರು 1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ ಬೇಡಿಕೆ ಸಲ್ಲಿಸಿದೆ. ಮೇ 1ರಿಂದಲೇ ರಾಜ್ಯದಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ.
ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ವೇಗವಾಗಿ ಹಬ್ಬುತ್ತಿದೆ. ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ.
ಶುಕ್ರವಾರ ರಾಜ್ಯದಲ್ಲಿ 48296 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 217 ಜನರು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 15,23,142ಕ್ಕೆ ಏರಿಕೆಯಾಗಿದೆ.



Click it and Unblock the Notifications


























