• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ; 17,489 ಹೊಸ ಕೋವಿಡ್ ಪ್ರಕರಣ ದಾಖಲು

|

ಬೆಂಗಳೂರು, ಏಪ್ರಿಲ್ 17; ಕೋವಿಡ್ 2ನೇ ಅಲೆ ಕರ್ನಾಟಕದಲ್ಲಿ ಆತಂಕವನ್ನು ಮೂಡಿಸಿದೆ. ರಾಜ್ಯದಲ್ಲಿ 17,489 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,19,160ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,14,1998ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 80 ಜನರು ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 13,270.

ಕೋವಿಡ್; ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಬೇಡ ಕೋವಿಡ್; ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಬೇಡ

ಇಂದು ಆಸ್ಪತ್ರೆಯಿಂದ 5,565 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 1009549. 589 ಜನರು ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೂ ಕೋವಿಡ್ ಸೋಂಕು ದೃಢ ನಿಖಿಲ್ ಕುಮಾರಸ್ವಾಮಿಗೂ ಕೋವಿಡ್ ಸೋಂಕು ದೃಢ

13,099 ಆಂಟಿಜೆನ್, 130209 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 1,43,308 ಮಾದರಿಗಳ ಪರೀಕ್ಷೆಗಳನ್ನು ರಾಜ್ಯದಲ್ಲಿ ಮಾಡಲಾಗಿದೆ. ಇದುವರೆಗೂ ಒಟ್ಟು 9251944 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಹೆಚ್ಚುತ್ತಿರುವ ಕೋವಿಡ್: ಬೆಂಗಳೂರಿನಲ್ಲಿ ಆಸ್ಪತ್ರೆಗಳಾಗಿ ಬದಲಾಗುತ್ತಿವೆ ಹೋಟೆಲ್‌ಗಳುಹೆಚ್ಚುತ್ತಿರುವ ಕೋವಿಡ್: ಬೆಂಗಳೂರಿನಲ್ಲಿ ಆಸ್ಪತ್ರೆಗಳಾಗಿ ಬದಲಾಗುತ್ತಿವೆ ಹೋಟೆಲ್‌ಗಳು

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ ಇಂದು 11,404 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 87,724. ಒಟ್ಟು ಪ್ರಕರಣಗಳ ಸಂಖ್ಯೆ 5,33,842.

ಇಂದು ದಕ್ಷಿಣ ಕನ್ನಡ 309, ಬಳ್ಳಾರಿ 355, ಬೆಂಗಳೂರು ಗ್ರಾಮಾಂತರ 262, ಕಲಬುರಗಿ 560, ಮೈಸೂರು 811, ತುಮಕೂರು 507, ವಿಜಯಪುರ 281, ಮಂಡ್ಯ 223, ಬೀದರ್ 359 ಅತಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ.

      #Covid19update : ಒಂದೇ ದಿನ ದೇಶದಲ್ಲಿ 2,73,810 ಜನರಿಗೆ ಕೊರೊನಾ ಸೋಂಕು! | Oneindia Kannada

      ಬೆಳಗಾವಿ 188, ಚಾಮರಾಜನಗರ 136, ಚಿಕ್ಕಬಳ್ಳಾಪುರ 179, ದಾವಣಗೆರೆ 122, ಧಾರವಾಡ 272, ಹಾಸನ 224, ಶಿವಮೊಗ್ಗ 125, ಉಡುಪಿ 108, ಉತ್ತರ ಕನ್ನಡ 102, ಯಾದಗಿರಿ 153 ಪ್ರಕರಣ ದಾಖಲಾಗಿದೆ.

      English summary
      Karnataka reported 17,489 new COVID cases. State active cases number raised to 1,19,160. Total number of cases 1,14,1998.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X