ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಮೇ 07 : ಕರ್ನಾಟಕದ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಒಪ್ಪಿಗೆ ಸಿಕ್ಕಿದೆ. 7 ಹೆದ್ದಾರಿಗಳಲ್ಲಿ ಈಗಾಗಲೇ ಟೋಲ್ ಸಂಗ್ರಹವನ್ನು ಆರಂಭಿಸಲಾಗಿದೆ. ಯಾವ ವಾಹನಕ್ಕೆ ಎಷ್ಟು ದರ? ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. '17 ರಾಜ್ಯ ಹೆದ್ದಾರಿಗಳ 1,530 ಕಿ.ಮೀ.ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ' ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆ

2015ರಲ್ಲಿ ಟೋಲ್ ಸಂಗ್ರಹಕ್ಕೆ ನಿಯಮಾವಳಿ ರಚನೆ ಮಾಡಲಾಗಿದೆ. 2017ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಮೂರು ವರ್ಷಗಳ ಅವಧಿಗೆ ಟೆಂಡರ್ ಕರೆಯಲಾಗಿದ್ದು, ಪ್ರತಿವರ್ಷ ಶೇ 10ರಷ್ಟು ದರ ಹೆಚ್ಚಳವಾಗಲಿದೆ.

ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್

2010ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. 17 ರಸ್ತೆಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಪೈಕಿ 7 ರಸ್ತೆಗಳಲ್ಲಿ ಈಗಾಗಲೇ ಟೋಲ್ ಸಂಗ್ರಹ ಆರಂಭವಾಗಿದೆ....

ಪರಿಸರ ಪ್ರೇಮಿಗಳಿಗೆ ಜಯ : ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ಇಲ್ಲಪರಿಸರ ಪ್ರೇಮಿಗಳಿಗೆ ಜಯ : ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ಇಲ್ಲ

ಯಾವ-ಯಾವ ಹೆದ್ದಾರಿಗಳು

ಯಾವ-ಯಾವ ಹೆದ್ದಾರಿಗಳು

17 ರಾಜ್ಯ ಹೆದ್ದಾರಿಗಳ ಪೈಕಿ 7 ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಆರಂಭಿಸಲಾಗಿದೆ. ಉಳಿದ ರಸ್ತೆಗಳಲ್ಲಿ ಜೂನ್ ಮೊದಲ ವಾರದಿಂದ ಟೋಲ್ ಸಂಗ್ರಹಿಸುವ ಸಾಧ್ಯತೆ ಇದೆ. ಪಡುಬಿದ್ರಿ-ಕಾರ್ಕಳ, ಹೊಸಕೋಟೆ-ಚಿಂತಾಮಣಿ, ತುಮಕೂರು-ಪಾವಗಡ, ಮದಗಲ್-ಗಂಗಾವತಿ ರಸ್ತೆಗಳಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ.

ಯಾವುದಕ್ಕೆ ಎಷ್ಟು ಶುಲ್ಕ?

ಯಾವುದಕ್ಕೆ ಎಷ್ಟು ಶುಲ್ಕ?

* ಕಾರು : 60 ಪೈಸೆ (ಪ್ರತಿ ಕಿ.ಮೀ.ಗೆ)
* ಲಘು ವಾಹನ : 99 ಪೈಸೆ
* ಬಸ್/ವಾಣಿಜ್ಯ ವಾಹನ (2 ಆಕ್ಸೆಲ್) 2 ರೂ.
* 3 ಆಕ್ಸೆಲ್ ವಾಹನ : 2.12 ರೂ.
* ಮಲ್ಟಿ ಆಕ್ಸೆಲ್ ವಾಹನ : 3.26 ರೂ.
* ಏಳು ಅಥವ ಹೆಚ್ಚಿನ ಆಕ್ಸೆಲ್ ವಾಹನ : 3.92 ರೂ.ಗಳು

31 ರಸ್ತೆಗಳಿಗೆ ಪ್ರಸ್ತಾವನೆ

31 ರಸ್ತೆಗಳಿಗೆ ಪ್ರಸ್ತಾವನೆ

'ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ-ಶಿಪ್) ಹಾಗೂ ಕೆಆರ್‌ಡಿಸಿಎಲ್ ಸಂಸ್ಥೆ, ವಿಶ್ವಬ್ಯಾಂಕ್ ಹಾಗೂ ಎಡಿಬಿಯಿಂದ ಸಾಲ ಪಡೆದು 3,800 ಕಿ.ಮೀ.ರಸ್ತೆಯನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 31 ರಸ್ತೆಗಳಲ್ಲಿ ಟೋಲ್ ಸಂಗ್ರಹಕ್ಕೆ ಮನವಿ ಮಾಡಲಾಗಿತ್ತು' ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

17 ರಸ್ತೆಗಳಲ್ಲಿ ಸಂಗ್ರಹಕ್ಕೆ ಒಪ್ಪಿಗೆ

17 ರಸ್ತೆಗಳಲ್ಲಿ ಸಂಗ್ರಹಕ್ಕೆ ಒಪ್ಪಿಗೆ

2017ರ ಮಾರ್ಚ್ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 19 ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡಲು ಒಪ್ಪಿಗೆ ನೀಡಲಾಗಿತ್ತು. ಆದರೆ, ಇವುಗಳಲ್ಲಿ ಎರಡು ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಲೀನವಾಗಿವೆ. ಆದ್ದರಿಂದ, 17 ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡಲು ಆರಂಭಿಸಲಾಗುತ್ತದೆ.

English summary
Karnataka Public Works Department (PWD) minister H.D.Revanna said that 17 state highways to be tolled soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X