ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣಕ್ಕಾಗಿ ಬೆದರಿಕೆ, ಸುಳ್ಳು ಸುದ್ದಿ: ವರ್ಷದಲ್ಲಿ ರಾಜ್ಯದ 16 ಪತ್ರಕರ್ತರ ಬಂಧನ

|
Google Oneindia Kannada News

ಬೆಂಗಳೂರು, ಮೇ 11: ಹಣಕ್ಕಾಗಿ ಬೆದರಿಕೆ, ಸುಳ್ಳು ಸುದ್ದಿಗಳ ಪ್ರಸಾರ, ಪ್ರಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕದ 16 ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗಿದೆ ಅದೂ ಕೇವಲ ಒಂದು ವರ್ಷದ ಅವಧಿಯಲ್ಲಿ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅದೂ ಇತ್ತೀಚಿನ ಕೆಲವು ತಿಂಗಳುಗಳಲ್ಲಂತೂ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ. ಕೆಲವು ದಿನಗಳ ಹಿಂದಷ್ಟೆ ಸುದ್ದಿ ಮಾಧ್ಯಮದ ನಿರೂಪಕ ಮತ್ತು ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಪತ್ರಕರ್ತನೊಬ್ಬನನ್ನು ಶಾಸಕ ಅರವಿಂದ ಲಿಂಬಾವಳಿಗೆ ಬೆದರಿಕೆ ಹಾಕಿ ಐವತ್ತು ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಬಂಧಿಸಲಾಗಿದೆ.

ಟಿವಿ9 ಸಿಇಒ ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲು ಟಿವಿ9 ಸಿಇಒ ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲು

ಹೆಚ್ಚು ಸುದ್ದಿ ಮಾಡಿದ್ದೆಂದರೆ, ಕೆಲವು ದಿನಗಳ ಹಿಂದಷ್ಟೆ, ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಪ್ರತ್ಯೇಕ ಧರ್ಮ ವಿಚಾರವಾಗಿ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎಂದು ಸುಳ್ಳು ಪತ್ರವನ್ನು ಸೃಷ್ಠಿಸಿ ವೈರಲ್ ಮಾಡಿದ ಬಗ್ಗೆ ಸಹ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ, ಅವರು ಬಿಜೆಪಿಯ ಸಮೀಪವರ್ತಿಯೂ ಆಗಿದ್ದರು.

16 journalists of Karnataka arrested in last one year for blackmail and fake news

ತಿಂಗಳ ಹಿಂದೆ ಬಿಜೆಪಿ ಶಾಸಕ ರಾಮದಾಸ್ ಅವರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಇಳಿದಿದ್ದ ಸ್ಥಳೀಯ ಪತ್ರಿಕೆಗಳ ಪರ್ತಕರ್ತರನ್ನು ಅವರೇ ಸ್ಟ್ರಿಂಗ್ ಆಪರೇಷನ್ ಮಾಡಿ, ವಿಡಿಯೋ ಸಮೇತ ಪೊಲೀಸರಿಗೆ ಹಿಡಿದು ಕೊಟ್ಟಿದ್ದರು.

ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ, ಮಾಧ್ಯಮಗಳ ಮೇಲೆ ಜವಾಬ್ದಾರಿ ಹೆಚ್ಚಿದೆ: ಎಚ್‌ಡಿಕೆಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ, ಮಾಧ್ಯಮಗಳ ಮೇಲೆ ಜವಾಬ್ದಾರಿ ಹೆಚ್ಚಿದೆ: ಎಚ್‌ಡಿಕೆ

ಪ್ರಖ್ಯಾತ ವೈದ್ಯರೊಬ್ಬರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿ, ಮತ್ತೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಹೆಸರಾಂತ ಚಾನೆಲ್ ಒಂದರ ಪತ್ರಕರ್ತನ ಮೇಲೆ ಪ್ರಕರಣ ದಾಖಲಾಗಿ ಬಂಧನವಾಗಿತ್ತು, ಆತನನ್ನು ಟಿವಿಯಿಂದ ಆ ಸಂಸ್ಥೆಯ ಮುಖ್ಯಸ್ಥರು ಹೊರಹಾಕಿದರು.

ಪೊಲೀಸರನ್ನು ಬಳಸಿ ಮಾಧ್ಯಮ ನಿರ್ಬಂಧಕ್ಕೆ ಮುಂದಾದ ಮುಖ್ಯಮಂತ್ರಿ ಪೊಲೀಸರನ್ನು ಬಳಸಿ ಮಾಧ್ಯಮ ನಿರ್ಬಂಧಕ್ಕೆ ಮುಂದಾದ ಮುಖ್ಯಮಂತ್ರಿ

ಇನ್ನು ವೆಬ್‌ಪೋರ್ಟ್‌ಲ್‌ ಒಂದರ ಸಂಸ್ಥಾಪಕನನ್ನು ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆಂದು ಈ ವರೆಗೆ ಎರಡು ಬಾರಿ ಪೊಲೀಸರು ಬಂಧಿಸಿದ್ದಾರೆ. ಮೊದಲ ಬಾರಿ ಬೌದ್ಧ ಭಿಕ್ಷು ಒಬ್ಬರು ಮುಸ್ಲಿಂ ಯುಕವನಿಂದ ದಾಳಿಗೆ ಒಳಗಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿ ಬಂಧನಕ್ಕೊಳಗಾಗಿದ್ದರು, ಎರಡನೇ ಬಾರಿ ಎಂ.ಬಿ.ಪಾಟೀಲ್ ಅವರು ಬರೆದಿದ್ದಾರೆನ್ನಲಾಗಿದ್ದ ಸುಳ್ಳು ಪತ್ರವನ್ನು ಪ್ರಕಟಿಸಿ ಬಂಧನಕ್ಕೆ ಒಳಗಾಗಿದ್ದರು.

ನಟಿ ರಮ್ಯಾ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದ ಚಾನೆಲ್ ಒಂದು ಇತ್ತೀಚೆಗಷ್ಟೆ 50 ಲಕ್ಷ ದಂಡ ಕಟ್ಟಿಕೊಟ್ಟಿದೆ. ರಮ್ಯಾ ಅವರು ಐಪಿಎಲ್ ಬೆಟ್ಟಿಂಗ್ ನಡೆಸುವ ಮಧ್ಯವರ್ತಿ ಎಂದು ಸುಳ್ಳು ಸುದ್ದಿಯನ್ನು ಈ ಕನ್ನಡದ ಚಾನೆಲ್ ಪ್ರಸಾರ ಮಾಡಿತ್ತು.

English summary
Karnataka's 16 journalists have been arrested in last one year for blackmail and fake news. Some seniors saying Journalism in Karnataka is in trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X