ಪರೀಕ್ಷೆಗೆ ತೆರಳುವ ಮುನ್ನ ಈ 15 ಅಂಶಗಳನ್ನು ಮರೆಯದಿರಿ

Subscribe to Oneindia Kannada

ಬೆಂಗಳೂರು, ಮಾರ್ಚ್ 8: ಗುರುವಾರದಿಂದ ದ್ವಿತೀಯ ಪದವಿ ಪೂರ್ವ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಬರೆಯಲು ಒಂದಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

* ಹಾಲ್ ಟಿಕೆಟ್, ಕಾಲೇಜ್ ಐಡಿ ಕಾರ್ಡ್ ಯಾವುದೇ ಕಾರಣಕ್ಕೂ ಮರೆಯಬೇಡಿ

* ನಿಮ್ಮ ರಿಜಿಸ್ಟರ್ ನಂಬರ್ ಬರೆದ ಜಾಗದಲ್ಲೇ ಕುಳಿತುಕೊಳ್ಳಿ

* ಪರೀಕ್ಷೆಗೆ ಬೇಕಾದ ಪೆನ್ಸಿಲ್, ರಬ್ಬರ್, 2-3 ಪೆನ್ ಹಾಗೂ ಇತರ ಸಲಕರಣೆಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ. ಸಾಧ್ಯವಾದರೆ ಹಿಂದಿನ ದಿನವೇ ಬ್ಯಾಗಿನಲ್ಲಿ ಇದನ್ನೆಲ್ಲಾ ಹಾಕಿ ಸಿದ್ದಪಡಿಸಿಟ್ಟುಕೊಳ್ಳಿ

* ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಗೊತ್ತಿಲ್ಲದ ಪ್ರಶ್ನೆಗಳಿಗೆ ಸಮಯ ಉಳಿದರೆ ಕೊನೆಯಲ್ಲಿ ಉತ್ತರಿಸುವ ಪ್ರಯತ್ನ ಮಾಡಿ

* ಪರೀಕ್ಷೆ ಹಾಲಿಗೆ ಕನಿಷ್ಟ ಅರ್ಧ ಗಂಟೆ ಮೊದಲು ತಲುಪ

* ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ವಿವರವಾಗಿ ಓದಿ ಅರ್ಥೈಸಿಕೊಳ್ಳಿ

* ಪ್ರಶ್ನೆ ಪತ್ರಿಕೆಯಲ್ಲಿರುವ ಸೂಚನೆಗಳನ್ನು ಸರಿಯಾಗಿ ಓದಿ ಪಾಲಿಸಿ

* ಪರೀಕ್ಷೆಯ ಹಿಂದಿನ ದಿನ ರಾತ್ರಿ ಇಡೀ ಓದಿ ನಿದ್ದೆ ಬಿಡಬೇಡಿ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

* ಯಾವುದೇ ಕಾರಣಕ್ಕೂ ಕಾಪಿ ಮಾಡುವ ಪ್ರಯತ್ನಗಳಿಗೆಲ್ಲಾ ಕೈ ಹಾಕಿ ಇಕ್ಕಟ್ಟಿಗೆ ಸಿಲುಕಿಕೊಳ್ಳಬೇಡಿ. ಫೇಲ್ ಆದರೂ ಪರವಾಗಿಲ್ಲ, ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸ್ ಆಗಬಹುದು.

* ಕಡಿಮೆ ಅಂಕದ ಪ್ರಶ್ನೆಗೆ ಜಾಸ್ತಿ ಸಮಯ ವ್ಯಯ ಮಾಡಬೇಡಿ. ಹೆಚ್ಚಿನ ಅಂಕದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಯಾವುದಕ್ಕೂ ಸಮಯದ ಬಗ್ಗೆ ಗಮನವಿರಲಿ.

* ಪರೀಕ್ಷೆ ಕೇಂದ್ರಕ್ಕೆ ನಿರ್ಬಂಧಿತ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ.

* ಉತ್ತರ ಪತ್ರಿಕೆಯ ಮೇಲೆ ನಿಮ್ಮ ಹಾಲ್ ಟಿಕೆಟ್ ನಂಬರನ್ನು ಸರಿಯಾಗಿ ನಮೂದಿಸಿ.

* ಆಹಾರವನ್ನು ಸರಿಯಾಗಿ ಸೇವಿಸಿ. ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರಗಳಿಂದ ಆದಷ್ಟು ದೂರವಿರಿ.

* ಯಾವುದೆ ಕಾರಣಕ್ಕೂ ಟೆನ್ಶನ್ ಮಾಡಿಕೊಳ್ಳಬೇಡಿ. ಒತ್ತಡದಲ್ಲಿ ಮರೆತು ಹೋಗುವ ಸಾಧ್ಯತೆಗಳು ಜಾಸ್ತಿಯಾಗಿರುತ್ತವೆ.

* ಕೊನೆಯ 10 ನಿಮಿಷಗಳನ್ನು ಉಳಿಸಿಕೊಂಡು ಬರೆದ ಉತ್ತರ, ರಿಜಿಸ್ಟರ್ ನಂಬರ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We give you 15 best tips before entering the exam hall to maximize your performance in the exam.
Please Wait while comments are loading...