• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ

|

ಬೆಂಗಳೂರು, ಡಿಸೆಂಬರ್ 03 : 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ? ಎಂಬುದು ಎಲ್ಲರ ಕುತೂಹಲ. ಸರ್ಕಾರ ಬಹುಮತ ಪಡೆಯಲು 8 ಸ್ಥಾನಗಳಲ್ಲಿ ಗೆಲ್ಲಲೇಬೇಕಿದೆ. ಪಕ್ಷ ಉಪ ಚುನಾವಣೆ ಬಗ್ಗೆ ಆಂತರಿಕ ಸಮೀಕ್ಷೆಯನ್ನು ನಡೆಸಿದೆ.

ಉಪ ಚುನಾವಣೆಗೆ ಎರಡು ದಿನಗಳು ಬಾಕಿ ಇದೆ. ಮಂಗಳವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಉಪ ಚುನಾವಣೆ; ಬೆಂಗಳೂರು ಕ್ಷೇತ್ರದ ಅಂಕಿ-ಸಂಖ್ಯೆಗಳ ಲೆಕ್ಕ ಉಪ ಚುನಾವಣೆ; ಬೆಂಗಳೂರು ಕ್ಷೇತ್ರದ ಅಂಕಿ-ಸಂಖ್ಯೆಗಳ ಲೆಕ್ಕ

ಅನರ್ಹ ಶಾಸಕರು ಗೆಲ್ಲಬಾರದು ಎಂದು ಕಾಂಗ್ರೆಸ್-ಜೆಡಿಎಸ್ ತಂತ್ರ ರೂಪಿಸಿವೆ. ಹಲವು ಕಡೆಗಳಲ್ಲಿ ಸಾಕಷ್ಟು ಪೈಪೋಟಿ ಇದ್ದರೂ ಸರ್ಕಾರದ ಉಳಿವಿಗೆ ಬೇಕಾದಷ್ಟು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆ ಹೇಳಿದೆ.

 ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐಆರ್

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುವ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಆದರೆ, ಬಿಜೆಪಿ ಉಪ ಚುನಾವಣೆಯಲ್ಲಿ 8 ರಿಂದ 9 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆ ವರದಿ ಬಂದಿದೆ. ಆದರೆ, ಅಂತಿಮ ತೀರ್ಪು ಮತದಾರನ ಕೈಯಲ್ಲಿ ಇದೆ...

 ಸಿದ್ದರಾಮಯ್ಯ, ಕುಮಾರಸ್ವಾಮಿ ಬುಟ್ಟಿಯಲ್ಲಿರುವ ಹಲ್ಲಿಲ್ಲದ ಹಾವು: ಶೋಭಾ ಸಿದ್ದರಾಮಯ್ಯ, ಕುಮಾರಸ್ವಾಮಿ ಬುಟ್ಟಿಯಲ್ಲಿರುವ ಹಲ್ಲಿಲ್ಲದ ಹಾವು: ಶೋಭಾ

ಬಿಜೆಪಿ ಪರವಾದ ಅಲೆ

ಬಿಜೆಪಿ ಪರವಾದ ಅಲೆ

ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದಾಗ ಬಿಜೆಪಿ 5 ಅಥವ 6 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂಬ ವರದಿ ಬಂದಿತ್ತು. ಈಗ ಬಿರುಸಿನ ಪ್ರಚಾರ, ಯಡಿಯೂರಪ್ಪ ವರ್ಚಸ್ಸು ಮುಂತಾದ ಕಾರಣಗಳಿಂದಾಗಿ ಪಕ್ಷದ ಬಲ ಹೆಚ್ಚಿದೆ. ಈಗ ಪಕ್ಷ 8 ರಿಂದ 9 ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ವರದಿ ಬಂದಿದೆ.

ಗೆಲುವು ಎಲ್ಲಿ ಸುಲಭ?

ಗೆಲುವು ಎಲ್ಲಿ ಸುಲಭ?

ಬಿಜೆಪಿ ಯಲ್ಲಾಪುರ, ಕೆ. ಆರ್. ಪುರ, ಮಹಾಲಕ್ಷ್ಮೀ ಲೇಔಟ್, ಅಥಣಿ, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು ಮತ್ತು ವಿಜಯನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಪಕ್ಷದ ಸಮೀಕ್ಷೆ ಹೇಳಿದೆ. ಈ ಕ್ಷೇತ್ರಗಳಲ್ಲಿ ಎದುರಾಳಿಗಳು ಅಷ್ಟು ಪ್ರಬಲವಾಗಿಲ್ಲ ಎಂಬುದು ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ತೀವ್ರ ಪೈಪೋಟಿ ಕ್ಷೇತ್ರಗಳು

ತೀವ್ರ ಪೈಪೋಟಿ ಕ್ಷೇತ್ರಗಳು

ಹೊಸಕೋಟೆ, ಯಶವಂತಪುರ, ಹುಣಸೂರು, ಕೆ. ಆರ್. ಪೇಟೆ, ಗೋಕಾಕ್, ಶಿವಾಜಿನಗರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲವಾದ ಪೈಪೋಟಿ ಇದೆ. ಯಶವಂತಪುರ, ಚಿಕ್ಕಬಳ್ಳಾಪುರ, ಗೋಕಾಕ್ ಕ್ಷೇತ್ರದಲ್ಲಿ ಮತದಾರ ಯಾರ ಪರ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಹೈಕಮಾಂಡ್ ಟಾರ್ಗೆಟ್ ಎಷ್ಟು?

ಹೈಕಮಾಂಡ್ ಟಾರ್ಗೆಟ್ ಎಷ್ಟು?

ಬಿಜೆಪಿ ಹೈಕಮಾಂಡ್ 12 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಪಕ್ಷದ ನಾಯಕರಿಗೆ ಸೂಚನೆ ಕೊಟ್ಟಿದೆ. ಸ್ವತಃ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ 15 ಕ್ಷೇತ್ರಗಳಲ್ಲಿ ಸುತ್ತಿ ಪ್ರಚಾರ ಮಾಡುತ್ತಿದ್ದಾರೆ. ಸಚಿವರು, ಶಾಸಕರು ವಿವಿಧ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಎಷ್ಟು ಸ್ಥಾನ ಸಿಗಲಿದೆ? ಎಂದು ಕಾದು ನೋಡಬೇಕು.

English summary
15 Seat by elections will be held on December 5, 2019. BJP internal survey report said that party may win 8 seat. Election result will be announced on December 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X