ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲ

|
Google Oneindia Kannada News

ಬೆಂಗಳೂರು, ಡಿಸೆಂಬರ್ 9 : 15 ವಿಧಾಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ವಿಧಾನಸಭೆ ಬಲ 222ಕ್ಕೆ ಏರಿಕೆಯಾಗಿದೆ. ಉಪ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದೆ.

ಸೋಮವಾರ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ 2 ಸ್ಥಾನದಲ್ಲಿ ಗೆದ್ದಿದ್ದು, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಜಯಭೇರಿ ಬಾರಿಸಿದ್ದಾರೆ.

17 ಅನರ್ಹ ಶಾಸಕರಲ್ಲಿ ಉಪ ಚುನಾವಣೆ ಗೆದ್ದವರು, ಸೋತವರು 17 ಅನರ್ಹ ಶಾಸಕರಲ್ಲಿ ಉಪ ಚುನಾವಣೆ ಗೆದ್ದವರು, ಸೋತವರು

ಸದ್ಯ ಕರ್ನಾಟಕ ವಿಧಾನಸಭೆ ಬಲ 222. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಕ್ಕೆ ಇನ್ನೂ ಉಪ ಚುನಾವಣೆ ನಡೆಯಬೇಕಿದೆ. ಆದ್ದರಿಂದ, ಸರ್ಕಾರ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 113.

ಉಪ ಚುನಾವಣೆ; ಜೆಡಿಎಸ್ ಸೋಲಿಗೆ ಕಾರಣಗಳೇನು? ಉಪ ಚುನಾವಣೆ; ಜೆಡಿಎಸ್ ಸೋಲಿಗೆ ಕಾರಣಗಳೇನು?

15 Seat By Election Result Karnataka Assembly Numbers

ಕರ್ನಾಟಕದ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿತ್ತು. ಉಪ ಚುನಾವಣೆಯಲ್ಲಿ ಪಕ್ಷ 12 ಸ್ಥಾನದಲ್ಲಿ ಜಯಗಳಿಸಿದ್ದು, 117ಕ್ಕೆ ಸದಸ್ಯ ಬಲ ಏರಿಕೆಯಾಗಿದೆ. ಬಿಜೆಪಿಗೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಬೆಂಬಲೂ ಇದೆ.

ಉಪ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ಏನಂದ್ರು?ಉಪ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ಏನಂದ್ರು?

ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆಯಲ್ಲಿ 78 ಸ್ಥಾನಗಳನ್ನು ಗೆದ್ದಿತ್ತು. ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ 68 ಸದಸ್ಯಬಲವನ್ನು ಹೊಂದಿದೆ.

2018ರಲ್ಲಿ ಗೆದ್ದಿದ್ದ 3 ಕ್ಷೇತ್ರಗಳಲ್ಲಿ ಜೆಡಿಎಸ್ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ವಿಧಾನಸಭೆಯಲ್ಲಿ ಪಕ್ಷದ ಬಲ 34.

ವಿಧಾನಸಭೆ ಬಲ
* ಬಿಜೆಪಿ 117
* ಕಾಂಗ್ರೆಸ್ 68
* ಜೆಡಿಎಸ್ 34
* ಬಿಎಸ್‌ಪಿ 1
* ಪಕ್ಷೇತರ 2

English summary
15 seat by election result announced on December 9, 2019. Here are the numbers of Karnataka assembly. By election to held for two other seat. In a 222 seat BJP has 117 seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X