ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ; ಬಿಜೆಪಿ ಸಂಭಾವ್ಯ ಪಟ್ಟಿಯಲ್ಲಿ ಅಚ್ಚರಿ ಹೆಸರು!

|
Google Oneindia Kannada News

ಬೆಂಗಳೂರು, ನವೆಂಬರ್ 14 : 17 ಅನರ್ಹ ಶಾಸಕರಿಗೆ ಉಪ ಚುನಾವಣೆ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಇದು ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆ ಚಿತ್ರಣವನ್ನು ಬದಲಾವಣೆ ಮಾಡಿದೆ.

ಕರ್ನಾಟಕ ಬಿಜೆಪಿಯ ಕೋರ್ ಕಮಿಟಿ ಸಭೆ ಮಲ್ಲೇಶ್ವರದ ಕಚೇರಿಯಲ್ಲಿ ಬುಧವಾರ ಸಂಜೆ ನಡೆಯಿತು. ಉಪ ಚುನಾವಣೆ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಯಿತು.

15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದೆ. ಗುರುವಾರ ಸಂಜೆಯ ವೇಳೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ. ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಹೆಸರುಗಳು ಇದ್ದು, ಕುತೂಹಲಕ್ಕೆ ಕಾರಣವಾಗಿದೆ.

'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ! 'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ!

ಕಾಂಗ್ರೆಸ್ ಉಪ ಚುನಾವಣೆಗೆ 8 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಜೆಡಿಎಸ್ ಗುರುವಾರ ಮಧ್ಯಾಹ್ನದೊಳಗೆ ಪಟ್ಟಿ ಅಂತಿಮಗೊಳಿಸಲಿದ್ದು, ಪಕ್ಷ 16 ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿಯುವ ಸಾಧ್ಯತೆ ಇದೆ.

15 ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಿಸಿದ ತೀರ್ಪು; 5 ಅಂಶಗಳು15 ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಿಸಿದ ತೀರ್ಪು; 5 ಅಂಶಗಳು

ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್?

ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್?

* ಹೊಸಕೋಟೆ : ಎಂಟಿಬಿ ನಾಗರಾಜ್
* ಮಹಾಲಕ್ಷ್ಮೀ ಲೇಔಟ್ : ಕೆ. ಗೋಪಾಲಯ್ಯ
* ಕೆ. ಆರ್. ಪುರ : ಬೈರತಿ ಬಸವರಾಜ
* ಶಿವಾಜಿನಗರ : ರೋಷನ್ ಬೇಗ್/ ರುಮಾನ್ ಬೇಗ್/ ಕಟ್ಟಾ ಸುಬ್ರಮಣ್ಯ ನಾಯ್ಡು

ಹುಣಸೂರು ಟಿಕೆಟ್ ಯಾರಿಗೆ?

ಹುಣಸೂರು ಟಿಕೆಟ್ ಯಾರಿಗೆ?

* ಹಿರೇಕೆರೂರು : ಬಿ. ಸಿ. ಪಾಟೀಲ್
* ಗೋಕಾಕ್ : ರಮೇಶ್ ಜಾರಕಿಹೊಳಿ
* ಯಶವಂತಪುರ : ಎಸ್. ಟಿ. ಸೋಮಶೇಖರ್
* ಹುಣಸೂರು : ಎಚ್. ವಿಶ್ವನಾಥ್/ ಸಿ. ಪಿ. ಯೋಗೇಶ್ವರ/ ವಿಜಯ ಶಂಕರ್

ಕಾಗವಾಡದಲ್ಲಿ ಯಾರು ಕಣಕ್ಕೆ?

ಕಾಗವಾಡದಲ್ಲಿ ಯಾರು ಕಣಕ್ಕೆ?

* ಕಾಗವಾಡ : ಶ್ರೀಮಂತ ಪಾಟೀಲ್
* ಯಲ್ಲಾಪುರ : ಶಿವರಾಂ ಹೆಬ್ಬಾರ್
* ಕೆ. ಆರ್. ಪೇಟೆ : ನಾರಾಯಣ ಗೌಡ

ಈಶ್ವರಪ್ಪ ಪುತ್ರ ಅಭ್ಯರ್ಥಿ?

ಈಶ್ವರಪ್ಪ ಪುತ್ರ ಅಭ್ಯರ್ಥಿ?

* ರಾಣೆಬೆನ್ನೂರು : ಆರ್. ಶಂಕರ್/ ಕೆ. ಈ. ಕಾಂತೇಶ್
* ವಿಜಯನಗರ : ಆನಂದ್ ಸಿಂಗ್
* ಚಿಕ್ಕಬಳ್ಳಾಪುರ : ಡಾ. ಕೆ. ಸುಧಾಕರ್

ರಾಣೆಬೆನ್ನೂರು ಕ್ಷೇತ್ರಕ್ಕೆ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಕೆ. ಈ. ಕಾಂತೇಶ್ ಹೆಸರು ಕೇಳಿ ಬರುತ್ತಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಅವರು ವಿಧಾನಸಭೆ ಪ್ರವೇಶಿಸಲಿದ್ದಾರೆಯೇ? ಕಾದು ನೋಡಬೇಕು.

English summary
Karnataka BJP all set for 15 seats by election scheduled on December 5, 2019. Here are the probable candidate list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X