ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ, ಶಿಕ್ಷಣ ಇಲಾಖೆ ನೌಕರರಿಗೆ ವಾರ್ಷಿಕ 15 ರಜೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನೌಕರರಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಿಹಿ ಸುದ್ದಿ ನೀಡಿದ್ದಾರೆ. ಉಭಯ ಇಲಾಖೆಗಳ ನೌಕರರು ವಾರ್ಷಿಕ 15 ರಜೆಗಳನ್ನು ಪಡೆಯಲಿದ್ದಾರೆ.

ಕರ್ನಾಟಕ ಸರ್ಕಾರ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರ ಸರ್ಕಾರಿ ರಜೆಯನ್ನು ಘೋಷಣೆ ಮಾಡಿದೆ. ಆದರೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನೌಕರರು ಶನಿವಾರವೂ ಕಾರ್ಯ ನಿರ್ವಹಣೆ ಮಾಡುತ್ತಾರೆ. ಆದ್ದರಿಂದ, ರಜೆಯಿಂದ ವಂಚಿತರಾಗುತ್ತಿದ್ದರು.

ಕರ್ನಾಟಕ ಸರ್ಕಾರದ 2020ರ ಸರ್ಕಾರಿ ರಜೆ ದಿನಗಳ ಪಟ್ಟಿ ಕರ್ನಾಟಕ ಸರ್ಕಾರದ 2020ರ ಸರ್ಕಾರಿ ರಜೆ ದಿನಗಳ ಪಟ್ಟಿ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರಿಗೆ ಈ ಹಿಂದೆ ಇದ್ದಂತೆ ವಾರ್ಷಿಕ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಯನ್ನು ಮುಂದುವರೆಸಲು ಸೂಚನೆ ನೀಡಿದ್ದಾರೆ.

ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ

Holiday

2019ರರ ಜೂನ್ 13ರಂದು ರಾಜ್ಯ ಸರ್ಕಾರಿ ನೌಕರರಿಗೆ 2 ಮತ್ತು 4ನೇ ಶನಿವಾರ ರಜೆಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ನೌಕರರಿಗೆ ವಾರ್ಷಿಕ ಸಾಂದರ್ಭಿಕ ರಜೆಯನ್ನು 15 ರಿಂದ 10ಕ್ಕೆ ಇಳಿಕೆ ಮಾಡಲಾಗಿತ್ತು.

ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ

ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರು ಶನಿವಾರ ಕೆಲಸ ಮಾಡುತ್ತಾರೆ. ಮತ್ತೊಂದು ಕಡೆ ವಾರ್ಷಿಕ ರಜೆಯೂ 10ಕ್ಕೆ ಇಳಿಕೆಯಾಗಿತ್ತು. ಆದ್ದರಿಂದ, ವಾರ್ಷಿಕ ರಜೆಯನ್ನು 15ಕ್ಕೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು.

ಎರಡು ಇಲಾಖೆಯಲ್ಲಿ 2 ಮತ್ತು 4ನೇ ಶನಿವಾರ ಕೆಲಸ ಮಾಡುವವರಿಗೆ ವಾರ್ಷಿಕ 15 ರಜೆ ಸಿಗಲಿದೆ ಹಾಗೂ 2 ಪರಿಮಿತ ರಜೆ ಮುಂದುವರಿಕೆ ಆಗಲಿದೆ.

English summary
After Karnataka government order Health and education department will get 15 holiday in the year. Both department will work on 2nd and 4th Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X