ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಸಾಲಮನ್ನಾ ಕನಸಿಗೆ ಕೈ ಜೋಡಿಸಿದ ದೊಡ್ಡ ಬ್ಯಾಂಕ್ ಗಳು

|
Google Oneindia Kannada News

Recommended Video

ರೈತರ ಸಾಲಮ್ಮಾಕ್ಕೆ ಕೈ ಜೋಡಿಸಿದ ಬ್ಯಾಂಕ್ ಗಳು | Oneindia Kannada

ಬೆಂಗಳೂರು, ಅಕ್ಟೋಬರ್ 23: ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ತಪ್ಪಿಸಲು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೃಷಿ ಸಾಲ ಮನ್ನಾ ಯೋಜನೆ ಜಾರಿ ಮಾಡಿದೆ. ಇದಕ್ಕೆ ವಾಣಿಜ್ಯ ಬ್ಯಾಂಕ್‌ಗಳು ಪ್ರಾರಂಭದಲ್ಲಿ ಅಸಹಕಾರ ಪ್ರದರ್ಶಿಸಿದರೂ ಇದೀಗ ಸಾಲಮನ್ನಾಕ್ಕೆ ಒಪ್ಪಿಗೆ ಸೂಚಿಸಿವೆ.

ಅ.20ರವರೆಗೆ ಒಟ್ಟು ವಾಣಿಜ್ಯ ಬ್ಯಾಂಕ್‌ಗಳು ಸುಮಾರು 10 ಲಕ್ಷ ರೈತರ ಬೆಳೆ ಸಲದ ವಿವರ ಒದಗಿಸಿವೆ. ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ವಿಚಾರದಲ್ಲಿ ಸೃಷ್ಟಿಯಾಗಿದ್ದ ತೊಡಕು ನಿವಾರಣೆಯಾಗುವ ಸಾಧ್ಯತೆ ಇದೆ.

ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ

ಸಾಲಮನ್ನಾಕ್ಕೆ ವಾಣಿಜ್ಯ ಬ್ಯಾಂಕ್‌ಗಳು ಆಸಕ್ತಿ ತೋರಿಸಿರಲಿಲ್ಲ ಜತೆಗೆ ರೈತರ ಸಾಲ ಎಷ್ಟಿದೆ ಎನ್ನುವುದರ ಕುರಿತು ದಾಖಲೆ ಒದಗಿಸಲು ಕೂಡ ಹಿಂದೇಟು ಹಾಕಿದ್ದರು. ಇದೀಗ ಸಾಲಮನ್ನಾಕ್ಕೆ ದೊಡ್ಡ ಬ್ಯಾಂಕ್‌ಗಳು ಕೂಡ ಸಮ್ಮತಿ ನೀಡಿದೆ.

ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿ

ವಾಣಿಜ್ಯ ಬ್ಯಾಂಕ್‌ಗಳ ಸಾಲಮನ್ನಾ ಘೋಷಣೆ ಮಾಡಿದ ಬಳಿಕ ಒಟ್ಟು 23.71 ಲಕ್ಷ ಸಾಲದ ಖಾತೆಗಳಲ್ಲಿನ ಒಟ್ಟು 22,545 ಕೋಟಿ ರೂ.ಸಾಲದ ವಿವರ ಒದಗಿಸಲು ಸರ್ಕಾರ ಬ್ಯಾಂಕರ್‌ಗಳಿಗೆ ಸೂಚನೆ ನೀಡಿತ್ತು.ಅಲ್ಲದೆ ಕಂತುಗಳಲ್ಲಿ ಸಾಲಮನ್ನಾ ಹಣವನ್ನು ಮರುಪಾವತಿ ಮಾಡುವುದಾಗಿ ಬ್ಯಾಂಕ್‌ಗಳಿಗೆ ಸರ್ಕಾರ ಭರವಸೆ ನೀಡಿತ್ತು.

ಕೊನೆಗೂ ಸಾಲಮನ್ನಾಕ್ಕೆ ಅಸ್ತು ಎಂದ ವಾಣಿಜ್ಯ ಬ್ಯಾಂಕ್‌ಗಳು

ಕೊನೆಗೂ ಸಾಲಮನ್ನಾಕ್ಕೆ ಅಸ್ತು ಎಂದ ವಾಣಿಜ್ಯ ಬ್ಯಾಂಕ್‌ಗಳು

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರೈತರ ಕೃಷಿ ಸಾಲಮನ್ನಾವನ್ನು ಘೋಷಿಸಿದ್ದರು, ಆದರೆ ಸಾಕಷ್ಟು ಬ್ಯಾಂಕ್‌ಗಳು ರೈತರ ಮನೆಗೆ ನೋಟಿಸ್ ಕಳುಹಿಸಿದರೆ ಇನ್ನೊಂದೆಡೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರ ಸಾಲಮನ್ನಾ ಕುರಿತ ದಾಖಲೆ ನೀಡಲು ನಿರಾಕರಿಸಿದ್ದರು. ಆದರೆ ಕುಮಾರಸ್ವಾಮಿಯವರು ದಾಖಲೆ ನೀಡುವಂತೆ ಒತ್ತಾಯಿಸಿದ್ದರು ಇದೀಗ ಸಾಲಮನ್ನಾ ದಾಖಲೆಯನ್ನು ಒದಗಿಸಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಸಾಧ್ಯತೆ

ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಸಾಧ್ಯತೆ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಕೃಷಿ ಸಾಲಮನ್ನಾ ಬಳಿಕ ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧವಾಗುತ್ತಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಕುಮಾರಸ್ವಾಮಿ ಅವರು ಮನ್ನಾ ಮಾಡುವ ಸಾಧ್ಯತೆ ಇದೆ.

ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ

ಋಣಮುಕ್ತ ಪ್ರಮಾಣಪತ್ರ

ಋಣಮುಕ್ತ ಪ್ರಮಾಣಪತ್ರ

ಸಹಕಾರ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಸಾಲಮನ್ನಾ ಫಲಾನುಭವಿ ರೈತ ಕುಟುಂಬಗಳಿಗೆ ಏಕಕಾಲಕ್ಕೆ ಋಣಮುಕ್ತ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸಿಎಂ ಕುಮಾರಸ್ವಾಮಿ ಅಹಿಯೊಂದಿಗೆ ಪ್ರಮಾಣಪತ್ರ ಕಳುಹಿಸಲಾಗುತ್ತಿದೆ. ಈ ಉದ್ಏಶಕ್ಕೆ ವಾರ್ತಾ ಇಲಾಖೆ ಮೂಲಕ ಪ್ರಕ್ರಿಯೆ ಆರಂಭವಾಗಿದೆ.

ಸಾಲಮನ್ನಾ ಫಲಾನುಭವಿಗಳ ಮನವಿ, ದೂರಿಗೆ ಸಹಾಯವಾಣಿ

ಸಾಲಮನ್ನಾ ಫಲಾನುಭವಿಗಳ ಮನವಿ, ದೂರಿಗೆ ಸಹಾಯವಾಣಿ

ಸಾಲಮನ್ನಾ ಫಲಾನುಭವಿಗಳು ದೂರು ಹಾಗೂ ಮನವಿ ಸಲ್ಲಿಸಲು ಸರ್ಕಾರ ಸದ್ಯದಲ್ಲೇ ಸಹಾಯವಾಣಿ ಆರಂಭಿಸಲಿದೆ. ಜತೆಗೆ ಡಿಸಿಗಳು ನೋಡಲ್ ಅನುಷ್ಠಾನ ಅಧಿಕಾರಿಗಳಾಗಿದ್ದಾರೆ. ಮೇಲ್ವಿಚಾರಣೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ.

ಸಿಎಂ ಕಚೇರಿಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ: ಎಚ್ಡಿಕೆ ಸ್ಪಷ್ಟನೆಸಿಎಂ ಕಚೇರಿಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ: ಎಚ್ಡಿಕೆ ಸ್ಪಷ್ಟನೆ

English summary
Around 10 lakh farmers crop loan account details in 15 commercial banks have shared with the state government following crop loan waiver scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X