ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

148 ಕೋಟಿ ರೂ ಸಾಲ: ನೆಟ್ಟಿಗರು ಆಡಿಕೊಳ್ಳುವಂತೆ ಮಾಡಿದ ಕಾಫಿ ತೋಟ ಹರಾಜು ಪ್ರಕಟಣೆ

By ವಸಂತ ಕೊಡಗು
|
Google Oneindia Kannada News

ಪ್ರತಿಯೊಬ್ಬರ ಜೀವನದ ಹಣಕಾಸಿನ ಭಾಗವಾಗಿರುವ ಬ್ಯಾಂಕ್‌ಗಳಲ್ಲಿ ಮಧ್ಯಮ ವರ್ಗದವರು ಒಂದು ಲಕ್ಷ ರೂಪಾಯಿ ಸಾಲ ಕೇಳಿದರೆ ಹತ್ತಾರು ದಾಖಲೆಗಳನ್ನು ಕೇಳುತ್ತಾರೆ. ಅಷ್ಟೇ ಅಲ್ಲ ಅದಕ್ಕೂ ಹತ್ತಾರು ಬಾರಿ ಅಲೆಯಬೇಕಾಗುತ್ತದೆ. ಮತ್ತೊಂದೆಡೆ ವಂಚಕ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲವನ್ನು ಇದೇ ಬ್ಯಾಂಕುಗಳು ಮಂಜೂರು ಮಾಡಿಕೊಡುತ್ತವೆ. ಇಂದು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬ್ಯಾಂಕ್ ಗಳಿಗೆ ವಂಚಿಸುವ ಪ್ರಕರಣಗಳು ಬ್ಯಾಂಕ್ ಗಳನ್ನೇ ಅನುಮಾನಿಸುವಂತೆ ಮಾಡುತ್ತಿವೆ. ಕಾರ್ಪೊರೇಟ್ ವಲಯವು , ಉದ್ಯಮಿಗಳು ಬ್ಯಾಂಕ್ ಗಳಿಂದ ನೂರಾರು ಕೋಟಿ ರೂಪಾಯಿಗಳ ಸಾಲ ಪಡೆದು ನಂತರ ಕೈ ಎತ್ತುವ ಪ್ರಕರಣಗಳಿಗೆ ದೇಶದಲ್ಲಿ ನೂರಾರು ಉದಾಹರಣೆ ಇದ್ದರೆ ಮತ್ತೊಂದೆಡೆ ಜನಸಾಮಾನ್ಯರು ಪಡೆದ ಸಾಲಗಳನ್ನು ಬ್ಯಾಂಕಿನವರು ಮುಲಾಜಿಲ್ಲದೆ ವಸೂಲಿ ಮಾಡುತಿದ್ದಾರೆ.

ಈ ಕೆಟ್ಟ ಸಾಲಗಳಿಗೆ ಹೊಸತೊಂದು ಸೇರ್ಪಡೆ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿ ಮತ್ತು ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪೆನಿಗಳಾಗಿವೆ. ಈ ಎರಡೂ ಕಂಪೆನಿಗಳು ಐಡಿಬಿಐ, ಎಚ್‌ಡಿಎಫ್‌ಸಿ ಮತ್ತು ಬ್ಯಾಂಕ್ ಆಪ್ ಬರೋಡ ಬ್ಯಾಂಕ್ ಗಳ ದೆಹಲಿ ಶಾಖೆಯಿಂದ ಪಡೆದಿರುವ ಸಾಲವು ಸುಸ್ತಿ ಆಗಿದ್ದು ಈ ಅನುತ್ಪಾದಕ ಸಾಲಗಳ ಒಟ್ಟು ಮೊತ್ತ 148 ಕೋಟಿ ರೂಪಾಯಿಗಳಾಗಿವೆ.

ಐಡಿಬಿಐ ಬ್ಯಾಂಕ್ ಈ ಕಂಪೆನಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಲು ಮುಂದಾಗಿದ್ದು, ಈಗಾಗಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಈ ಹರಾಜು ಪ್ರಕಟಣೆಯು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಈ ಕಂಪೆನಿಗಳ ಹೆಸರುಗಳು ನೆಟ್ಟಿಗರ ಗೇಲಿಗೆ ಕಾರಣವಾಗಿವೆ. ಅತ್ಯಂತ ಜವಾಬ್ದಾರಿಯಿಂದ ಸಾಲ ನೀಡಬೇಕಾದ ಬ್ಯಾಂಕುಗಳು ಸಾಲ ನೀಡುವಲ್ಲಿ ಎಡವಿದವೇ ಎಂಬ ಪ್ರಶ್ನೆ ಎದ್ದಿದೆ.

148 Crore Debt: Kodagu’s Coffee Plantation Auctioned by the Bank

ದಿ ಗ್ರೇಟ್ ಇಂಡಿಯನ್ ನೌಟಂಕಿ ಎಂಬ ಕಂಪೆನಿಯು ಮೇಲಿನ ಮೂರು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು ಇದಕ್ಕೆ ಜಾಮೀನುದಾರರಾಗಿ ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಯ ಆಸ್ತಿಗಳನ್ನು ನೀಡಿದೆ. ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಗೆ ಅನುಮೋದ್ ಶರ್ಮಾ, ಡಾ ಅನು ಅಪ್ಪಯ್ಯ, ಸಂಜಯ್ ಚೌಧರಿ, ವಿರಾಫ್ ಸರ್ಕಾರಿ, ಎಂಬುವವರು ನಿರ್ದೇಶಕರಾಗಿದ್ದು ಇವರು ಸಾಲಕ್ಕೆ ಜಾಮೀನುದಾರರೂ ಆಗಿದ್ದಾರೆ.

ಈ ಕಂಪೆನಿ ಕೊಡಗಿನ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೇರೂರು ಗ್ರಾಮದ ಸರ್ವೆ ನಂಬರ್ 7/5, 7/1, 7/3, 7/5 ಹಾಗೂ ಸರ್ವೆ ನಂಬರ್ 6 ಮತ್ತು 4 ರಲ್ಲಿ ಒಟ್ಟು 107.24 ಎಕರೆ ಕಾಫಿ ತೋಟ ಹೊಂದಿದೆ. ಈಗ ಐಡಿಬಿಐ ಬ್ಯಾಂಕ್ ಈ ಆಸ್ತಿಗಳನ್ನು 27-7-2022 ರಂದು ಆನ್ ಲೈನ್ ಹರಾಜಿಗೆ ಇಟ್ಟಿದೆ. ಈ ಆಸ್ತಿಗಳನ್ನು 16-7-2022 ರಂದು ಬಿಡ್ ದಾರರಿಗೆ ಪರಿಶೀಲಿಸುವ ಅವಕಾಶ ನೀಡಲಾಗಿದೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯು ಐಡಿಬಿಐ ಬ್ಯಾಂಕ್‌ಗೆ 86.48 ಕೋಟಿ ರೂ., ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 6.26 ಕೋಟಿ ರೂ. ಮತ್ತು ಬ್ಯಾಂಕ್ ಆಫ್ ಬರೋಡಾಕ್ಕೆ 49.23 ಕೋಟಿ ರೂ. ಸಾಲ ಮತ್ತು ಬಡ್ಡಿಯನ್ನು ಬಾಕಿ ಉಳಿಸಿಕೊಂಡಿದ್ದು ಈಗ ಕಾಪಿ ತೋಟಗಳನ್ನು ಹರಾಜು ಹಾಕುವ ಮೂಲಕ ಸಾಲ ವಸೂಲಾತಿಗೆ ಮುಂದಾಗಿದೆ. ಈ ಆಸ್ತಿಗಳಿಗೆ 11.53 ಕೋಟಿ ರೂಪಾಯಿಗಳ ಮೀಸಲು ಬೆಲೆಯನ್ನೂ ನಿಗದಿಪಡಿಸಿದೆ. ಈ ವರದಿಗಾರ ಆಸ್ತಿಗಳ ಆರ್ಟಿಸಿ ಯನ್ನು ಪರಿಶೀಲಿಸಿದಾಗ ಅವೆಲ್ಲವೂ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪೆನಿಯ ಹೆಸರಿನಲ್ಲಿವೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯನ್ನು ಸೆಪ್ಟೆಂಬರ್ 2007 ರಲ್ಲಿ ದೆಹಲಿಯಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸ್ಥಾಪಿಸಲಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಪ್ರದರ್ಶನ ಕಲೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮನರಂಜನಾ ಸ್ಥಳಗಳು ಮತ್ತು ಪ್ರದರ್ಶನಗಳನ್ನು ಆಯೋಜನೆ ಮಾಡುವ ಚಟುವಟಿಕೆ ನಡೆಸುವುದಾಗಿ ಕಂಪೆನಿ ಸಚಿವಾಲಯಕ್ಕೆ ಮಾಹಿತಿ ನೀಡಿದೆ.

ಕಂಪೆನಿಯು ಕಿಂಗ್ಡಮ್ ಆಫ್ ಡ್ರೀಮ್ಸ್, ನೌಟಂಕಿ ಮಹಲ್ ಮತ್ತು ಕಲ್ಚರ್‌ಗಲ್ಲಿ ಎಂಬ ಪ್ರದರ್ಶನ ನೀಡುವುದಾಗಿ ಹೇಳಿಕೊಂಡಿದೆ. ಇನ್ನು ಜನವರಿ 2008

ರಲ್ಲಿ ಸ್ಥಾಪಿಸಲಾದ ದಿ ಗ್ರೇಟ್ ಇಂಡಿಯನ್ ತಮಾಶಾ ಕಂಪನಿಯು ರೂ 2 ಕೋಟಿ ರೂಪಾಯಿಗಳ ಅಧಿಕೃತ ಷೇರು ಬಂಡವಾಳದೊಂದಿಗೆ ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲ್ಪಟ್ಟಿದೆ ಮತ್ತು ಅದರ ಪಾವತಿಸಿದ ಬಂಡವಾಳವು ರೂ 2 ಲಕ್ಷವಾಗಿದೆ. ಈ ಕಂಪೆನಿಗಳ ಹೆಸರುಗಳೇ ಗೇಲಿಗೆ ಕಾರಣವಾಗಿದ್ದು ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಬಗ್ಗೆ ಸಾರ್ವಜನಿಕರು ಸಂದೇಹ ಪಡುವಂತಾಗಿದೆ.

Recommended Video

Virat Kohli ಶತಕದ ಬದ್ಲು ನಮ್ಗೆ ಬೇಕಾಗಿರೋದು ಇದು...ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ | *Cricket |OneIndia

English summary
IDBI Bank has issued a public notice to auction the assets belonging to Indian Tamasha Company. The announcement of the auction has sparked a huge debate on social media and the names of these companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X