ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಂಟೋ ಕಣ್ಣಾಸ್ಪತ್ರೆ ದುರಂತ: ಔಷಧ ಕಂಪನಿ ನಿರ್ದೇಶಕರು ಖುಲಾಸೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 21. ನಗರದ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕತ್ಸೆಗೆ ಒಳಗಾಗಿದ್ದ 14 ರೋಗಿಗಳು ದೃಷ್ಟಿ ಕಳೆದುಕೊಂಡ ಹಿನ್ನೆಲೆಯಲ್ಲಿ ಕಳಪೆ ಔಷಧ ತಯಾರಿಸಿದ ಆರೋಪ ಸಂಬಂಧ ಔಷಧ ತಯಾರಿಕಾ ಕಂಪನಿಯ ನಿರ್ದೇಶಕರಿಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹಾಗಾಗಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರು ಖುಲಾಸೆಯಾಗಿದ್ದಾರೆ.

ಪ್ರಕರಣ ರದ್ದುಕೋರಿ ಯುನಿಕಾರ್ನ್ ಮೆಡಿಟೆಕ್ ಕಂಪನಿಯ ಸುಶೀಲ್ ಗೋಯೆಲ್ ಹಾಗೂ ಮೋನಿಶಾ ಡಂಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಮಾನ್ಯ ಮಾಡಿದೆ.

ಅಲ್ಲದೆ, ಅರ್ಜಿದಾರರ ವಿರುದ್ಧ ಬೆಂಗಳೂರಿನ ಪ್ರಧಾನ ಸಿಟಿ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

14 people lost eyesight in Minto Hospital case: Case against two accused quashed

ಜತೆಗೆ, ಈ ಆದೇಶ ಕೇವಲ ಅರ್ಜಿದಾರರಿಗೆ ಮಾತ್ರ ಸೀಮಿತವಾಗಿದ್ದು, ಪ್ರಕರಣದ ಇತರ ಆರೋಪಿಗಳ ವಿರುದ್ಧದ ವಿಚಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹೈಕೋರ್ಟ್ ಏನು ಹೇಳಿದೆ?

ಅರ್ಜಿದಾರರು ಸಂಸ್ಥೆಯ ಔಷಧ ತಯಾರಿಕೆಯ ದೈನಂದಿಕ ಪ್ರಕ್ರಿಯೆಯಲ್ಲಿ ಪಾತ್ರವಹಿಸಿದ್ದರು ಎಂಬ ಬಗ್ಗೆ ಪ್ರಕರಣದ ಸಂಬಂಧ ದಾಖಲಾಗಿರುವ ದೂರಿನಲ್ಲಿ ಯಾವುದೇ ಉಲ್ಲೇಖವಿಲ್ಲ. ಕಳಪೆ ಔಷಧ ತಯಾರಿಕೆಯಲ್ಲಿ ಅರ್ಜಿದಾರರ ಸಕ್ರಿಯ ಪಾತ್ರವಿದೆ ಎನ್ನುವುದು ಸಾಬೀತಾಗದ ಹೊರತಾಗಿ ಅವರನ್ನು ಈ ಪ್ರಕರಣದಲ್ಲಿ ಸೇರ್ಪಡೆ ಮಾಡಲಾಗದು ಎಂದು ಹೈಕೋರ್ಟ್ ಹೇಳಿದೆ.

ಸಂಸ್ಥೆಯ ನಿರ್ದೇಶಕರು ಅಥವಾ ಪಾಲುದಾರರು ಔಷಧ ತಯಾರಿಕೆ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಪಾತ್ರವಹಿಸದಿದ್ದಾಗ ಅಥವಾ ದೂರಿನಲ್ಲಿ ಆ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿದ್ದಾಗ ಅಂಥವರ ವಿರುದ್ಧ ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆಯ ಸೆಕ್ಷನ್ 34ರ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಾಲಯ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪುಗಳನ್ನೂ ನ್ಯಾಯಪೀಠ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 2019ರ ಜು.9ರಂದು 14 ರೋಗಿಗಳು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಬಳಿಕ ರೋಗಿಗಳ ಕಣ್ಣಿನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ, ಅವರೆಲ್ಲರೂ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದರು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಬಳಕೆ ಮಾಡಲಾಗಿದ್ದ ಔಷಧವನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಪ್ರಯೋಗಾಲಯದಲ್ಲಿ ಔಷದ ಪರೀಕ್ಷೆ ನಡೆಸಿ ಜು.12ರಂದು ವರದಿ ನೀಡಲಾಗಿತ್ತು.

Recommended Video

RCB ಅಭಿಮಾನಿಗಳೆಲ್ಲಾ ಈಗ Mumbai Indians ಅಭಿಮಾನಿಗಳು | Oneindia Kannada

ಶಸ್ತ್ರಚಿಕಿತ್ಸೆ ವೇಳೆ ಬಳಸಲಾಗಿದ್ದ ಹೈಡ್ರಾಕ್ಸಿಪ್ರೊಪಿಲ್ ಮೆಥಿಲ್‌ಸೆಲ್ಯೂಲೋಸ್ ಆಫ್ತಾಲ್ಮಿಕ್ ದ್ರಾವಣ ಕಳಪೆಯಾಗಿರುವುದೇ ಚಿಕಿತ್ಸೆಗೊಳಗಾದವರ ಕಣ್ಣಿನಲ್ಲಿ ಸೋಂಕು ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದರಿಂದ, ಔಷಧ ತಯಾರಿಕಾ ಸಂಸ್ಥೆ ಮತ್ತದರ ನಿರ್ದೇಶಕರ ವಿರುದ್ಧ ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆಯ ಸೆಕ್ಷನ್ 12(ಝಡ್ )(ಜಿ), 22(ಜಿ)(ಝಡ್), 27(ಝಡ್) ಹಾಗೂ 22(3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

English summary
High Court dismissed a case filed against two directors of a pharmaceutical company for allegedly making poor medicine after 14 patients undergoing eye surgery at Minto Hospital lost vision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X