ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09 : ಶಾಲೆಗಳಿಗೆ ನೀಡುವ ದಸರಾ ರಜೆಗೆ ಈ ಬಾರಿ ಕತ್ತರಿ ಬಿದ್ದಿದೆ. 14 ದಿನಗಳ ಕಾಲ ಮಾತ್ರ ರಜೆ ಸಿಗಲಿದೆ. ಖಾಸಗಿ ಶಾಲೆಗಳು ಸರ್ಕಾರದ ಈ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಶಿಕ್ಷಣ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಅಕ್ಟೋಬರ್ 8 ರಿಂದ 21ರ ತನಕ ಈ ಬಾರಿಯ ದಸರಾ ರಜೆ ನೀಡಲಾಗಿದೆ. ಕಳೆದ ವರ್ಷ 22 ದಿನಗಳ ಕಾಲ ರಜೆ ಸಿಕ್ಕಿತ್ತು. ಈ ಬಾರಿ 14 ದಿನಗಳಿಗೆ ಅದನ್ನು ಕಡಿತಗೊಳಿಸಲಾಗಿದೆ.

ಮೈಸೂರು ದಸರಾ 2018 : ಅರ್ಜುನನ ನೇತೃತ್ವದಲ್ಲಿ ಗಜಪಯಣ ಆರಂಭಮೈಸೂರು ದಸರಾ 2018 : ಅರ್ಜುನನ ನೇತೃತ್ವದಲ್ಲಿ ಗಜಪಯಣ ಆರಂಭ

ಶಿಕ್ಷಕರ ಸಂಘ ಈ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್ ಅವರು, 'ದಸರಾ ರಜೆಯನ್ನು ಕಡಿತಗೊಳಿಸಿದರೆ ಶಿಕ್ಷಣದ ಗುಣಮಟ್ಟ ಹೆಚ್ಚಾಗುವುದಿಲ್ಲ' ಎಂದು ಹೇಳಿದ್ದಾರೆ.

14 days Dasara holidays for students this year

ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಹ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿವೆ. ರಜೆಗಳನ್ನು ಕಡಿಮೆ ಮಾಡುವುದು ಉತ್ತಮವಾದ ನಿರ್ಧಾರವಲ್ಲ. ಇದನ್ನು ಪಾಲಿಸುವುದು ಕಷ್ಟ ಎಂದು ಹೇಳಿವೆ.

2018 - ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ 2018 - ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

ರಾಜ್ಯದ ಕೆಲವು ಭಾಗಗಳಲ್ಲಿ ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಹಲವು ದಿನ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಅಲ್ಲಿ ದಸರಾ ಸಂದರ್ಭದಲ್ಲಿ ಪಾಠಗಳನ್ನು ಮಾಡಿಕೊಳ್ಳಲಿ. ಬೇರೆ ಜಿಲ್ಲೆಗೆ ಏಕೆ ಈ ನಿಯಮ?' ಎಂದು ಶಾಲೆಗಳು ಪ್ರಶ್ನಿಸಿವೆ.

English summary
Karnataka Department of Public Instruction has decided to reduce the number of holidays. Dasara holidays will be from October 8 to 21. The vacation has been reduced to 14 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X